Darshan Thoogudeepa: ರೇಣುಕಾಸ್ವಾಮಿ ಹೆಂಡತಿ ಜೀವನಕ್ಕಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ ನಿರ್ಧಾರ...

ದರ್ಶನ್ ತೂಗುದೀಪ್ ಅವರಿಗೆ ಬಳ್ಳಾರಿ ಜೈಲಿನಲ್ಲಿ ಇದೀಗ ಜ್ಞಾನೋದಯ ಆದಂತೆ ಕಾಣ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 2ನೇ ಆರೋಪಿ, ಅಂದ್ರೆ ಎ2 ಆರೋಪಿ ಆಗಿರುವ ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಇದೀಗ ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಹೀಗಿದ್ದಾಗ ಬಳ್ಳಾರಿ ಜೈಲು ವಾತಾವರಣಕ್ಕೆ ದರ್ಶನ್ ತೂಗುದೀಪ್ ನರಳುತ್ತಿದ್ದು, ಈ ಕಾರಣಕ್ಕೆ ನನ್ನ ಆದಷ್ಟು ಬೇಗ ಹೊರಗೆ ಕರೆದುಕೊಂಡು ಹೋಗಿ ಅಂತಾ ತಮ್ಮ ಹೆಂಡತಿ ವಿಜಯಲಕ್ಷ್ಮೀ ಎದುರು ದರ್ಶನ್ ತೂಗುದೀಪ್ ಬೇಡಿಕೊಂಡಿದ್ದಾರೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಹೆಂಡತಿ ಜೀವನಕ್ಕಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ ನಿರ್ಧಾರ...

ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೀರೋ ಆಗಿ ಮೆರೆದಿದ್ದವರು. ಹೀಗೆ ಎಲ್ಲಾ ಚನ್ನಾಗಿದ್ದ ಸಮಯದಲ್ಲೇ ದೊಡ್ಡ ಸಮಸ್ಯೆ ಒಂದು ಕೂಡ ಎದುರಾಗಿಬಿಟ್ಟಿತ್ತು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾಗಿದ್ದ. ಹೀಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರ ಪಾತ್ರ ಕೂಡ ಪ್ರಮುಖ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದರ್ಶನ್ ತೂಗುದೀಪ್ ಅವರು ಬಳ್ಳಾರಿಯ ಜೈಲಿನಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಜೊತೆ ಮಾತನಾಡುತ್ತಾ ದರ್ಶನ್ ತೂಗುದೀಪ್ ಬದಲಾಗಿದ್ದಾರೆ. ಇಂತಹ ಸಮಯದಲ್ಲಿ ರೇಣುಕಾಸ್ವಾಮಿ ಹೆಂಡತಿ ಜೀವನಕ್ಕಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ ನಿರ್ಧಾರನ ಕೈಗೊಂಡಿದ್ದಾರೆ...

Darshan Thoogudeepa May Be Give Help To Renukaswamy Wife

ರೇಣುಕಾಸ್ವಾಮಿ ಹೆಂಡತಿಗೆ ದರ್ಶನ್...

ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಒಂದು ಕಾಲದ ಸಾಮಾನ್ಯ ನಟ. ಆದರೆ ಕಳೆದ 25 ವರ್ಷದಲ್ಲಿ 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಒಂದು ಕೋಟೆಯನ್ನೇ ಈಗ ಕಟ್ಟಿಕೊಂಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕೇವಲ 170 ರೂಪಾಯಿ ದಿನಗೂಲಿ ಪಡೆಯುತ್ತಾ, ಲೈಟ್ ಬಾಯ್ ಆಗಿ ಎಂಟ್ರಿ ಕೊಟ್ಟು ಇದೀಗ ಕೋಟಿ ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ದರ್ಶನ್ ತೂಗುದೀಪ್ ಅವರ ಬಳಿ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ, ಎಂಬ ಮಾತು ಒಡಾಡ್ತಿದೆ. ಆದರೂ, ತಮ್ಮ ಬಳಿ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇರುವ ಬಗ್ಗೆ ದರ್ಶನ್ ತೂಗುದೀಪ್ ಅವರೇ ಆಗಲಿ ಅಥವಾ ಅವರ ಕುಟುಂಬದ ಸದಸ್ಯರುಗಳೇ ಆಗಲಿ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇಂತಹ ಸಮಯದಲ್ಲಿ ದರ್ಶನ್ ತೂಗುದೀಪ್ ಅವರು, ರೇಣುಕಾಸ್ವಾಮಿ ಹೆಂಡತಿ ಜೀವನಕ್ಕಾಗಿ ಮಹತ್ವದ ನಿರ್ಧಾರ ಒಂದನ್ನ ಕೈಗೊಂಡಿದ್ದಾರಂತೆ!

ಕೋಟಿ ಒಡೆಯ ದರ್ಶನ್ ತೂಗುದೀಪ್...

ರೇಣುಕಾಸ್ವಾಮಿ ಕುಟುಂಬ ಇದೀಗ ಅನಾಥವಾಗಿದ್ದು, ಮನೆಯಲ್ಲಿ ಯಾರೂ ದಿಕ್ಕೇ ಇಲ್ಲದೆ ವೃದ್ಧ ತಂದೆ & ತಾಯಿ ನರಳುತ್ತಿದ್ದಾರೆ. ಪರಿಸ್ಥಿತಿ ಕೂಡ ಕೈಮೀರಿ ಹೋಗಿದ್ದು, ರಾಜ್ಯದಲ್ಲಿ ಹಲವರು ಈಗಾಗಲೇ ರೇಣುಕಾಸ್ವಾಮಿ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದಾರೆ. ಇಂತಹ ಸಮಯದಲ್ಲೇ ಕೋಟಿಯ ಒಡೆಯ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ರೇಣುಕಾಸ್ವಾಮಿ ಹೆಂಡತಿಗೆ ಸಹಾಯ ಮಾಡಲು ಮುಂದಾಗಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಇದೀಗ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ, ರೇಣುಕಾಸ್ವಾಮಿ ಹೆಂಡತಿಗೆ ಸಹಾಯ ಮಾಡಲಿರುವ ನಟ ದರ್ಶನ್ ತೂಗುದೀಪ್ ಅಂತಾ ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಈವರೆಗೂ ಇದರ ಬಗ್ಗೆ ದರ್ಶನ್ ತೂಗುದೀಪ್ ಅಥವಾ ಅವರ ಕುಟುಂಬ ಸದಸ್ಯರು ಅಧಿಕೃತ ಹೇಳಿಕೆ ನೀಡಿಲ್ಲ.

ದರ್ಶನ್ ತೂಗುದೀಪ್ ದೂರ.. ದೂರ..?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

ದರ್ಶನ್ ತೂಗುದೀಪ್ ತಮ್ಮ ಸಿನಿಮಾಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದರು. ಈ ಕಾರಣಕ್ಕೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗೆ ಕೂಡ ವಾಯ್ಸ್ ಡಬ್ಬಿಂಗ್ ಆಗುತ್ತಿತ್ತು. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಅವರ ವಿಚಾರ ಈಗ ಭಾರತದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಈ ವಿಚಾರವಾಗಿ ಚರ್ಚೆ ನಡೆಸುತ್ತಿವೆ. ಮತ್ತೊಂದು ಕಡೆ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ, ನಟ ದರ್ಶನ್ ತೂಗುದೀಪ್ ಅವರು ಹೊರಗೆ ಬರುತ್ತಾರೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಆಘಾತವೇ ಎದುರಾಗಿದೆ.

ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರವೇ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದ್ದು, ಜಾಮೀನು ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+