Darshan Thoogudeepa: ಉಮಾಪತಿ ಕೊಟ್ಟ ದುಡ್ಡಿನಲ್ಲಿ ದರ್ಶನ್ ತೂಗುದೀಪ್ ಲ್ಯಾಂಬೊರ್ಗಿನಿ ಉರುಸ್ ತಗೊಂಡಿದ್ದು?

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ಸಾಲು ಸಾಲು ಸಂಕಷ್ಟ ಎದುರಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡುತ್ತಾ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳನ್ನು ಕೆಣಕುವ ಕೆಲಸ ಕೂಡ ಕೆಲವರಿಂದ ಹೆಚ್ಚಾಗಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಬಳಿ ಇರುವ ಕಾರು ಲ್ಯಾಂಬೊರ್ಗಿನಿ ಉರುಸ್ ನನ್ನ ಹತ್ತಿರ ಕೂಡ ಇದೆ ಅಂತ ಹೇಳಿದ್ದ ದರ್ಶನ್ ತೂಗುದೀಪ್ ಅವರ ಮಾತನ್ನೇ ಇಟ್ಟುಕೊಂಡು, ಉಮಾಪತಿ ಕೊಟ್ಟ ಭಿಕ್ಷೆಯಲ್ಲಿ ದರ್ಶನ್ ತೂಗುದೀಪ್ ಲ್ಯಾಂಬೊರ್ಗಿನಿ ಉರುಸ್ ತಗೊಂಡಿದ್ದು?...

ದರ್ಶನ್ ತೂಗುದೀಪ್ ವಿರುದ್ಧ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಕೋಪ ಹೊರಹಾಕ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಮೊದಲಿಗೆ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದರು. ಆ ನಂತರ ಪುನೀತ್ ರಾಜ್‌ಕುಮಾರ್ ವಿರುದ್ಧ ಹಠಕ್ಕೆ ಬಿದ್ದು ದರ್ಶನ್ ತೂಗುದೀಪ್ ಕೂಡ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿ ಮಾಡಿದ್ದಾರೆ ಎಂಬ ಮಾತನ್ನು, ಲ್ಯಾಂಬೊರ್ಗಿನಿ ಉರುಸ್ ಬಗ್ಗೆ ಮಾತನಾಡುವಾಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಾರೆ.

Darshan Thoogudeepa Lamborghini Urus Car Story Explained By The Producer Umapathy

ಸೋಷಿಯಲ್ ಮೀಡಿಯಾದಲ್ಲಿ ಕೂಡ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿ ವಿಚಾರದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು & ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ದೊಡ್ಡ ಕಿರಿಕ್ ನಡೆಯುತ್ತಿರುತ್ತದೆ. ಇಂತಹ ಸಮಯದಲ್ಲೇ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ದರ್ಶನ್ ತೂಗುದೀಪ್ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿ ಮಾಡಿರುವ ಬಗ್ಗೆ ಸ್ಫೋಟಕ ಮಾತು ಹೇಳಿದ್ದಾರೆ. ಹೀಗಾಗಿ ಉಮಾಪತಿ ವಿರುದ್ಧ ಮತ್ತೊಮ್ಮೆ ದರ್ಶನ್ ತೂಗುದೀಪ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.

ನಾನು ಕೊಟ್ಟ ದುಡ್ಡು ತಗೊಂಡು ದರ್ಶನ್...

ಹೌದು, ದರ್ಶನ್ ತೂಗುದೀಪ್ & ಉಮಾಪತಿ ಶ್ರೀನಿವಾಸ್ ಗೌಡ ನಡುವೆ ದೊಡ್ಡ ಯುದ್ಧವೇ ಆರಂಭ ಆಗಿದೆ. ಅದರಲ್ಲೂ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿ ವಿಚಾರದಲ್ಲಿ ಕೆಲವು ತಿಂಗಳ ಹಿಂದೆ ಉಮಾಪತಿ ಶ್ರೀನಿವಾಸ್ ಗೌಡ ನೀಡಿದ್ದ ಹೇಳಿಕೆಯ ವಿಡಿಯೋ ಈಗ ವೈರಲ್ ಆಗುತ್ತಿದ್ದು, ನಾನು ಕೊಟ್ಟ ದುಡ್ಡು ತಗೊಂಡು ಹೋಗಿ ದರ್ಶನ್ ತೂಗುದೀಪ್ ಲ್ಯಾಂಬೊರ್ಗಿನಿ ಕಾರಿಗೆ ಅಡ್ವಾನ್ಸ್ ಕೊಟ್ಟಿದ್ದು ಅಂತಾ ಹೇಳಿದ್ದಾರೆ. ಹಳೆಯ ವಿಡಿಯೋ ವೈರಲ್ ಮಾಡ್ತಿರುವ ದರ್ಶನ್ ತೂಗುದೀಪ್ ವಿರೋಧಿಗಳು, ಇದೀಗ ದರ್ಶನ್ ತೂಗುದೀಪ್ ಅಭಿಮಾನಿಗಳ ಕುರಿತು ಕೆಣಕುವ ಮಾತು ಆಡಿದ್ದಾರೆ. ಹೀಗಾಗಿ ಮತ್ತೊಮ್ಮೆ ದರ್ಶನ್ ಫ್ಯಾನ್ಸ್ ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ತಿರುಗಿಬಿದ್ದಿದ್ದಾರೆ.

ಬಳ್ಳಾರಿ ಜೈಲಿನಿಂದ ಶೀಘ್ರದಲ್ಲೇ ರಿಲೀಸ್?

ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಇದು ಕರ್ನಾಟಕದಲ್ಲಿ ಎಲ್ಲೇ ಹೋದರು ದರ್ಶನ್ ಅವರ ಅಭಿಮಾನಿಗಳ ಬಾಯಿಂದ ಇದೀಗ ಕೇಳಿ ಬರುತ್ತಿರುವ ಒಂದೇ ಒಂದು ಪದ ಎನ್ನಬಹುದು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲು ನಡೆಯುತ್ತಿದ್ದು, ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಬೇಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಈಗ ಜಾಮೀನು ಸಿಕ್ಕಿಲ್ಲ. ಆದರೆ ಶೀಘ್ರದಲ್ಲೇ ರಿಲೀಸ್ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+