Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಕೋರ್ಟ್‌ಗೆ ಹಾಜರ್, ಅಭಿಮಾನಿಗಳಿಗೆ ಆಘಾತ....
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜಾಮೀನು ಪಡೆದಿದ್ದು, ಇಂದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನೇರವಾಗಿ ತಮ್ಮ ಮನೆಗೆ ಹೋಗಲಿದ್ದಾರೆ ಅಂತಾ ಕೋಟಿ ಕೋಟಿ ಅಭಿಮಾನಿಗಳು ನಂಬಿದ್ದರು. ಆದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಕೋರ್ಟ್‌ಗೆ ಹಾಜರ್....
ಬಾಕ್ಸ್ ಆಫಿಸ್ ಸುಲ್ತಾನ ಅಂತಾ ಅಭಿಮಾನಿಗಳ ಬಾಯಿಂದ ಕರೆಸಿಕೊಳ್ಳುವ ನಟ ದರ್ಶನ್ ತೂಗುದೀಪ್ ಅವರಿಗೆ ಸಾಲು, ಸಾಲು ಸಂಕಷ್ಟ ಎದುರಾಗುತ್ತಿದೆ. ಅದರಲ್ಲೂ ಕೋಟ್ಯಂತರ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತಿದ್ದರೂ ಈ ರೀತಿಯಾಗಿ ಸಮಸ್ಯೆಗಳು ಎದುರಾಗುತ್ತಿವೆ.

ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ನೆಮ್ಮದಿಯಾಗಿದ್ದರು. ಹೀಗೆ ಇದ್ದರೂ, ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಂದು ಕೋರ್ಟ್‌ಗೆ ಹಾಜರ್ ಆಗಿದ್ದಾರೆ. ಇದನ್ನು ನೋಡಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ, ಯಾಕೆ ಗೊತ್ತಾ?
ಡಿ-ಬಾಸ್ ದರ್ಶನ್ ಮತ್ತೆ ಕೋರ್ಟ್‌ಗೆ!
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ, ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಂದು ಡಿಸ್ಚಾರ್ಜ್ ಆಗಿ ಹೊರ ಹೋಗಿ ನೇರ ರಾಜರಾಜೇಶ್ವರಿ ನಗರದ ಮನೆಗೆ ತಲುಪಬಹುದು ಎನ್ನಲಾಗಿತ್ತು. ಆದರೆ ಇವತ್ತು ಆಗಿದ್ದೇ ಬೇರೆ, ಎಲ್ಲರೂ ಅಂದುಕೊಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ಬಿಜಿಎಸ್ ಆಸ್ಪತ್ರೆ ವೈದ್ಯರ ಪರ್ಮಿಷನ್ ಪಡೆದು ಡಿಸ್ಚಾರ್ಜ್ ಆದರು. ಆದರೆ ಆಸ್ಪತ್ರೆಯಿಂದ ನೇರ ಕೋರ್ಟ್‌ಗೆ ತೆರಳಿದರು!
ಜಾಮೀನು ಅರ್ಜಿಯ ಬಾಂಡ್‌ಗಳಿಗೆ ಸಹಿ
ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಹಾಜರ್ ಆಗಿದ್ದ ನಟ ದರ್ಶನ್ ತೂಗುದೀಪ್ ಅವರು ಈ ಸಮಯದಲ್ಲಿ, ತಮ್ಮ ಜಾಮೀನು ಅರ್ಜಿಯ ಬಾಂಡ್‌ಗಳಿಗೆ ಸಹಿ ಹಾಕಿದರು. ಇದೇ ವೇಳೆ, ನಟ ದರ್ಶನ್ ತೂಗುದೀಪ್ ಅವರ ಜಾಮೀನಿಗೆ ಇಬ್ಬರು ಶ್ಯೂರಿಟಿಗೆ ಸಹಿ ಹಾಕಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ, ನಟ ದರ್ಶನ್ ತೂಗುದೀಪ್ ಅವರು ನೇರವಾಗಿ ಮತ್ತೆ ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲದೆ ಇದೇ ಗುರುವಾರ ಅಂದ್ರೆ ಇನ್ನು 3 ದಿನದಲ್ಲಿ ಡಿ-ಬಾಸ್ ದರ್ಶನ್ ಅವರು ಆಸ್ಪತ್ರೆಯಿಂದ ರಿಲೀಸ್ ಆಗಿ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.
ಡಿ-ಬಾಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ!
ಡಿ-ಬಾಸ್ ದರ್ಶನ್ ಅವರಿಗೆ ಜಾಮೀನು ಅಂದ್ರೆ ಬೇಲ್ ಸಿಕ್ಕಿದೆ. ಈ ಕಾರಣಕ್ಕೆ ಆಸ್ಪತ್ರೆಯಿಂದಲೇ ಡಿಸ್ಚಾರ್ಜ್ ಆಗಿ ಹೊರಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಆಸ್ಪತ್ರೆಯಿಂದ ಹೊರಗೆ ಬಂದ ದರ್ಶನ್ ಅವರು ಕೋರ್ಟ್‌ಗೆ ಹೋಗಿ ಮತ್ತೆ ಆಸ್ಪತ್ರೆಗೆ ಸೇರಿದ್ದಾರೆ. ಹೀಗಿದ್ದಾಗ ದರ್ಶನ್ ಅವರ ಸ್ವಾಗತಕ್ಕೆ ಕರ್ನಾಟಕದ ಮೂಲೆ ಮೂಲೆಯಿಂದ ಆಗಮಿಸಿದ್ದ ಲಕ್ಷ, ಲಕ್ಷ ಅಭಿಮಾನಿಗಳಿಗೆ ಇದರಿಂದ ಒಂದಷ್ಟು ಬೇಸರ ಕೂಡ ಆಗಿತ್ತು.
ಡಿ-ಬಾಸ್ & ಪವಿತ್ರಾ ಗೌಡಗೆ ರಿಲೀಫ್!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿರುವ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಆದರೆ ಈ ವಿಚಾರದಲ್ಲಿ ಪವಿತ್ರಾಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೆಲ್ಲಾ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಘಟ್ಟ ತಲುಪಿದಂತೆ ಆಗಿದೆ.












Click it and Unblock the Notifications