Darshan Thoogudeepa: ದರ್ಶನ್ ತೂಗುದೀಪ್ ಇದೊಂದು ತಪ್ಪಿನಿಂದಾಗಿ ಬಳ್ಳಾರಿ ಜೈಲಿಗೆ ಹೋಗುವ ಪರಿಸ್ಥಿತಿ ಬಂತು!
ದರ್ಶನ್ ತೂಗುದೀಪ್ ತಾವೇ ಮಾಡಿಕೊಂಡ ಎಡವಟ್ಟಿನ ಕಾರಣ ಇದೀಗ ದೊಡ್ಡ ಸಂಕಷ್ಟದ ಸುಳಿಗೆ ಸಿಲುಕಿ, ನರಳಾಡುವ ಪರಿಸ್ಥಿತಿ ಬಂದಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಹೀಗೆ ಅಭಿಮಾನಿಗಳ ಪಾಲಿನ ಡಿ-ಬಾಸ್ ದಾಸ ದರ್ಶನ್ ತೂಗುದೀಪ್ ಜೈಲಿಗೆ ಹೋದರು. ದರ್ಶನ್ ಅವರು ಜೈಲಿಗೆ ಹೋದ ನಂತರ ಕೂಡ ಎಲ್ಲವೂ ಅವರ ಪರವಾಗಿಯೇ ಇತ್ತು. ಈ ಸಮಯದಲ್ಲಿ ಸುಮ್ಮನಿರದೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ ರೌಡಿಗಳ ಸಹವಾಸವನ್ನು ಮಾಡಿದ್ದ ದರ್ಶನ್ ಅವರು ಇದೀಗ ಎಂತಹ ಸಮಸ್ಯೆಗೆ ಸಿಲುಕಿದ್ದಾರೆ ಗೊತ್ತಾ?
ದರ್ಶನ್ ತೂಗುದೀಪ್ ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಸೇರಿ ತಮ್ಮ ಜೀವನದಲ್ಲಿ ಪರದಾಡುವ ಸ್ಥಿತಿ ಬಂದಿದೆ ಅಂತಿದ್ದಾರೆ ಅವರ ವಿರೋಧಿಗಳು. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ, ನಮ್ಮ ಬಾಸ್ ಜೈಲಿಗೆ ಹೋಗಿದ್ದು ಸರಿಯಾಗಿ ಇದೆ. ರೇಣುಕಾ ಸ್ವಾಮಿ ಒಬ್ಬ ಕಾ.. ಇದೇ ಕಾರಣಕ್ಕೆ ಕೊ.. ಮಾಡಿದ್ದಾರೆ ಅಂತಾ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗಲೇ ದರ್ಶನ್ ಅವರು ಮತ್ತೊಂದು ಭಾರಿ ದೊಡ್ಡ ತಪ್ಪು ಮಾಡಿದ್ದಾರೆ. ಜೈಲಿನ ಒಳಗೆ ಇಂತಹ ತಪ್ಪು ಮಾಡಿ ಇದೀಗ ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ!

ರೌಡಿಗಳ ಜೊತೆಗೆ ದಾಸ ದರ್ಶನ್!
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಆವರಣವನ್ನ ರೆಸಾರ್ಟ್ ಮಾಡಿಕೊಂಡು ಎಣ್ಣೆ, ಸಿಗರೇಟ್, ಬಿಯರ್, ಬಿರಿಯಾನಿ ಅಂತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಫೋಟೋಗಳು ಸೇರಿದಂತೆ ದರ್ಶನ್ ತೂಗುದೀಪ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.
ಈ ಘಟನೆಯು ಭಾರತದ ಮೂಲೆ ಮೂಲೆಗೂ ತಲುಪಿ, ರಾಷ್ಟ್ರೀಯ ನ್ಯೂಸ್ ಚಾನೆಲ್‌ಗಳು ಸೇರಿ ದೊಡ್ಡ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರ ಆಗಿತ್ತು. ಹೀಗಿದ್ದಾಗಲೇ ಕರ್ನಾಟಕ ಸರ್ಕಾರ ಕೂಡ ದರ್ಶನ್ & ಗ್ಯಾಂಗ್‌ನ ದಿಕ್ಕಾಪಾಲು ಮಾಡಿದೆ. ಆದರೆ ದರ್ಶನ್ ತೂಗುದೀಪ್ ರೌಡಿಗಳ ಸ್ನೇಹ ಮಾಡಿ ಕೆಟ್ಟು ಹೋದರಾ? ರೌಡಿಗಳ ಜೊತೆಗೆ ದರ್ಶನ್ ತೂಗುದೀಪ್ ಓಡಾಡಿದ್ದೇ ಈ ಘಟನೆಗೆ ಕಾರಣ ಆಯ್ತಾ? ಎಂಬ ಪ್ರಶ್ನೆ ಮೂಡಿದೆ.
ರೌಡಿಗಳ ನಡುವೆ ಶುರುವಾಯ್ತು ವಾರ್?
ದರ್ಶನ್ ತೂಗುದೀಪ್ ಜೈಲಿನ ಒಳಗೆ ಸಿಗರೇಟು ಸೇದುವ ಜೊತೆಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ಕೂತಿದ್ದು ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಇದರ ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ ದೊಡ್ಡ ದೊಡ್ಡ ಕ್ರಿಮಿನಲ್ ರೌಡಿಗಳ ಜೊತೆಗೆ ದರ್ಶನ್ ತೂಗುದೀಪ್ ಸ್ನೇಹ ಬೆಳೆಸಿಕೊಂಡಿದ್ದರು, ಇದೇ ಅವರಿಗೆ ಮುಳುವಾಗಿ ಹೋಯ್ತು. ಯಾಕೆ ಅಂದ್ರೆ ರೌಡಿಗಳ ನಡುವೆ ದರ್ಶನ್ ಅವರ ಸ್ನೇಹ ಪಡೆಯಲು ಪೈಪೋಟಿ ಶುರುವಾಗಿದೆ.
ಈ ಹಿನ್ನೆಲೆ ಒಬ್ಬರು ಮತ್ತೊಬ್ಬರ ಜೊತೆಗೆ ಜಗಳ ಮಾಡಿಕೊಂಡು, ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್ ಈ ರೀತಿ ದರ್ಶನ್ ತೂಗುದೀಪ್ ಜೈಲಿನ ಒಳಗೆ ಸಿಗರೇಟು ಸೇದುವ ಫೋಟೋ ಸೇರಿದಂತೆ ಒಳಗಿನ ವಿಡಿಯೋಗಳನ್ನ ಲೀಕ್ ಮಾಡಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ದರ್ಶನ್ ಅವರು ರೌಡಿಗಳ ಸ್ನೇಹ ಮಾಡಿ ತಪ್ಪು ಮಾಡಿದರು ಎಂಬ ಚರ್ಚೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಂಚಲನ ಸೃಷ್ಟಿ ಮಾಡುತ್ತಿದೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications