ಡಿ-ಬಾಸ್ ಫುಲ್ ಬಿಂದಾಸ್, ರೇಣುಕಾಸ್ವಾಮಿ ಕೇಸ್ ಬಗ್ಗೆ ನೋ ಟೆನ್ಷನ್! Darshan Thoogudeepa
ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಹಿಂಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಜೈಕಾರ ಹಾಕುತ್ತಿದ್ದರೆ ಅದು ಮುಗಿಲು ಮುಟ್ಟತ್ತದೆ, ಹಾಗೇ ಯಾವುದೇ ಶಬ್ಧ ಕೂಡ ಕೇಳಿಸಲ್ಲ. ಅಷ್ಟು ದೊಡ್ಡ ಮಟ್ಟಿಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ನಾಡಲ್ಲಿ ಅಭಿಮಾನಿ ದೇವರುಗಳನ್ನ ಸಂಪಾದನೆ ಮಾಡಿದ್ದಾರೆ. ಬಾಕ್ಸ್ ಆಫಿಸ್ ಸುಲ್ತಾನ & ಚಾಲೆಂಜಿಂಗ್ ಸ್ಟಾರ್ ಅಂತೆಲ್ಲಾ ದೊಡ್ಡ ದೊಡ್ಡ ಬಿರುದು ಕೂಡ ಪಡೆದಿದ್ದಾರೆ. ಹೀಗೆ ಎಲ್ಲವೂ ಸರಿಯಾಗಿ ಇದ್ದ ಸಮಯದಲ್ಲೇ, ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿಬಿಟ್ಟಿತ್ತು...
ರೇಣುಕಾಸ್ವಾಮಿ ಕೊಲೆ ಕೇಸ್ ಇಡೀ ಇಂಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು, ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು ಎಂಬ ಆರೋಪವನ್ನ ಮಾಡಲಾಗಿತ್ತು. ಹೀಗೆ ರೇಣುಕಾಸ್ವಾಮಿ ಬೆಂಗಳೂರಿಗೆ ಬಂದ ನಂತರ ಪಟ್ಟಣಗೆರೆ ಶೆಡ್ ಒಳಗೆ ಭಾರಿ ಹಿಂಸೆ ಮಾಡಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ನಂತರ ಪೊಲೀಸರು 17 ಆರೋಪಿಗಳನ್ನ ಅರೆಸ್ಟ್ ಮಾಡಿದ್ದರು. ಹೀಗಿದ್ದಾಗಲೇ ನಟ ದರ್ಶನ್ ಅವರು ಮೊದಲಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋದರು, ನಂತರ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು...

ಡಿ-ಬಾಸ್ ಈಗ ಫುಲ್ ಬಿಂದಾಸ್!
ಹೌದು, ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ನಂತರ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸ್ವತಂತ್ರವಾಗಿ ಓಡಾಡಿಕೊಂಡು ಇದ್ದಾರೆ. ಅದರಲ್ಲೂ 'ಡೆವಿಲ್' ಸಿನಿಮಾ ಶೂಟಿಂಗ್ ಮುಗಿಸಲು ಅಂತಾ ಥಾಯ್ಲೆಂಡ್‌ಗೆ ಕೂಡ ಹಾರಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ ನಡೆಸುತ್ತಿದ್ದು, ದರ್ಶನ್ ತೂಗುದೀಪ್ ಅವರ ಜಾಮೀನು ಭವಿಷ್ಯ ತೂಗುಯ್ಯಾಲೆಯಲ್ಲಿ ಇದೆ. ಹೀಗೆಲ್ಲಾ ಇದ್ದಾಗಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾತ್ರ ಟೆನ್ಷನ್ ಇಲ್ಲದೆ ಥಾಯ್ಲೆಂಡ್ ನೆಲದಲ್ಲಿ ಬಿಂದಾಸ್ ಪಾರ್ಟಿ ಮಾಡಿದ್ದಾರೆ!












Click it and Unblock the Notifications