Darshan Thoogudeepa: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್-ಕಾರಣ ಏನು ಗೊತ್ತಾ?
Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈಗಾಗಲೇ ಚಿತ್ರರಂಗದ ಹಲವರು ಜೈಲಿನಲ್ಲಿ ಭೇಟಿಯಾಗಿ "ದರ್ಶನ" ಪಡೆದಿದ್ದಾರೆ. ನಿನ್ನೆ (ಆಗಸ್ಟ್ 22) ನಟಿ ರಚಿತಾ ರಾಮ್ ಭೇಟಿಯಾಗಿದ್ದು, ಬಳಿಕ ದರ್ಶನ್ ಬಗ್ಗೆ ಸಮರ್ಥನೆ ಹೇಳಿಕೆ ನೀಡಿ ನೆಟ್ಟಿಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದರ್ಶನ್ ಜೈಲು ಸೇರಿದ 2 ತಿಂಗಳ ಬಳಿಕ ನಟ ರಚಿತಾ ರಾಮ್ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಅವರು ಸುಮ್ಮನೆ ಬಂದರೆ ಏನು ಆಗುತ್ತಿರಲಿಲ್ಲ. ಆದರೆ ಅವರು ದರ್ಶನ್‌ನ್ನು ಸಮರ್ಥನೆ ಮಾಡಿಕೊಂಡು ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಹೇಗಿದೆ ಅಂದ್ರೆ ಸಮ್ನಿರಲಾರದೇ ಇರುವ ಬಿಟ್ಟುಕೊಂಡ ರೀತಿ ಆಗಿದೆ. ಹಾಗಾದರೆ ರಚಿತಾ ರಾಮ್ ದರ್ಶನ್ ಬಗ್ಗೆ ಅಂಥಹದ್ದೇನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ಜೈಲು ಸೇರಿದ 2 ತಿಂಗಳು ಆದ ಮೇಲೆ ದರ್ಶನ್‌ನನ್ನು ಭೇಟಿಯಾಗಿದ್ದೀರಾ ಯಾಕೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಚಿತಾ ರಾಮ್, ರಾಜನನ್ನು ರಾಜನ ರೀತಿ ನೋಡಲು ಚೆನ್ನಾಗಿರುತ್ತದೆ. ಅವರನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಬಂದಿರಲಿಲ್ಲ ಎನ್ನುವ ಲೆಕ್ಕದಲ್ಲಿ ಹಾರಿಕೆ ಉತ್ತರ ನೀಡಿದ್ದಲ್ಲದೆ, ಅವರು ಯಾವಾಗಲೂ ಬಾಸ್ ಅಂತಾ ವರ್ಣನೆ ಮಾಡಿ ನೆಟ್ಟಿಗರ ಆಕ್ರೊಶಕ್ಕೆ ಕಾರಣರಾಗಿದ್ದಾರೆ.
"ದರ್ಶನ್‌ನನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಕುಟುಂಬದವರು ಅವರು ಕೂಡ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ದರ್ಶನ್ ಅಭಿಮಾನಿ. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ದಯವಿಟ್ಟು ಬೇಗ ಬನ್ನಿ ಎಂದು ಹೇಳಿಬಂದಿದ್ದೇನೆ," ಎಂದು ರಚಿತಾ ರಾಮ್ ಹೇಳಿದ್ದಾರೆ.
"ಇನ್ನು ಅವತ್ತಿನ ದಿನ ಒಂದು ಮಾತು ಅವರು ನೋ ಅಂತಾ ಹೇಳಿದ್ದಿದ್ದರೆ, ನಾನು ಈ ಮಟ್ಟಕ್ಕೆ ಬರಲು ಸಾಧ್ಯ ಆಗುತ್ತಿರಲಿಲ್ಲ. ಅವರ ಖುಣ ನನ್ನ ಇಡೀ ಕುಟುಂಬದ ಮೇಲಿದೆ. ಜೈಲಿನಲ್ಲಿ ನೋಡಿ ಭಾವುಕಳಾದಗ ಅವರು ನೀನು ಆರಾಮಾಗಿ ಇರು ಅಂತಾ ಹೇಳಿದರು. ಬಾಸ್ ಯಾವಾಗಿದ್ದರೂ ಬಾಸ್.. ಅವರು ನನಗೆ ಗುರು ಸಮಾನರು. ಆದಷ್ಟು ಬೇಗ ಒಳ್ಳೆ ಸುದ್ದಿ ಸಿಗಲು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಕೈಮುಗಿದು," ಹೇಳಿದ್ದಾರೆ.
"ನನಗೆ ಕಾನೂನಿನ ಮೇಲೆ ನಂಬಿಕೆಯಿದೆ. ಆದಷ್ಟು ಬೇಗ ಹೊರಗಡೆ ಬರುತ್ತೇನೆ ಎಂದು ದರ್ಶನ್ ನನಗೆ ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಇನ್ನೂ ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ, ಈ ರೀತಿ ನೋಡಲು ಮನಸಿಗೆ ತುಂಬಾ ನೋವಾಗುತ್ತಿದೆ," ಎಂದರು.
"ದರ್ಶನ್ ನನ್ನ ಪಾಲಿನ ದೇವರು, ಅವರು ನನಗೆ ಆ ಒಂದು ಅವಕಾಶ ಕೊಡದಿದ್ದರೆ, ನಾನು ಇವತ್ತು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಅವರ ಬ್ಯಾನರ್‌ನಲ್ಲೇ ಅವಕಾಶ ಕೊಟ್ಟು, ನನಗೆ ತುಂಬಾ ಸಹಾಯ ಮಾಡಿದರು. ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡಲು ಆಗುವುದಿಲ್ಲ, ರಾಜ ರಾಜನ ರೀತಿ ಇರಬೇಕು," ಎಂದು ದರ್ಶನ್‌ನನ್ನು ಹೊಗಳಿದ್ದಾರೆ.
ಈ ಬಗ್ಗೆ ಕಾಮೆಂಟ್ ಮಾಡಿರುವ ನೆಟ್ಟಿಗರೊಬ್ಬರು, "ಪಾಪ ಇವಳು.. ಒಳಗಡೆ ಹಾಕ್ಬಿಡಿ ಜೈಲಲ್ಲಿ ಸಂಸಾರ ಮಾಡಿಕೊಂಡಿರುತ್ತಾರೆ. ಒಬ್ಬ ಕೊಲೆಗಾರನನನ್ನು ಏನೋ ಸಾಧನೆ ಮಾಡಿದ ಹಾಗೆ ಬಿಲ್ಡಪ್ ಕೊಟ್ಟು ಹೊಗಳುತ್ತಾಳೆ," ಎಂದು ಆಕ್ರೊಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, "ಸುಮ್ಮನೆ ಹೋಗಿ ನೋಡಿಕೊಂಡು, ಯೋಗಕ್ಷೇಮ ವಿಚಾರಿಸಿಕೊಂದು ಬರೋದು ಬಿಟ್ಟು, ಆ ಕೊಲೆಗಾರನ ಬಗ್ಗೆ ಸುಮ್ಮನೆ ಬಿಲ್ಡಪ್ ಕೊಡುತ್ತಾಳೆ ಎಂದು," ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು 'ಬುಲ್ಬುಲ್', 'ಅಂಬರೀಷ', 'ಜಗ್ಗುದಾದ', 'ಕ್ರಾಂತಿ' ಸಿನಿಮಾಗಳಲ್ಲಿ ದರ್ಶನ್ ಜೊತೆ ರಚಿತಾ ರಾಮ್ ನಟನೆ ಮಾಡಿದ್ದಾರೆ.












Click it and Unblock the Notifications