ದರ್ಶನ್ ಹೊಡೆಯೋದು, ಬಡಿಯೋದು ಬರೀ ಅಮಾಯಕರಿಗೆ ಮಾತ್ರ? ಗಟ್ಟಿ ಇರುವವರ ಮೇಲೆ ಯಾಕೆ ಹೋಗಲ್ಲ?
ನಟ ದರ್ಶನ್ ನಾಯ್ಡು ಪದೇ ಪದೇ ಹಲ್ಲೆ ನಡೆಸುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ದರ್ಶನ್ ಹಲ್ಲೆ ಮಾಡಿರುವುದು ಬಹುತೇಕ ನಿಶ್ಯಕ್ತರ ಮೇಲೆ ಎಂಬ ಆರೋಪ ಇದೆ. ಯಾಕೆ ಅಂದ್ರೆ ಅಮಾಯಕರನ್ನು & ನಿಶ್ಯಕ್ತರನ್ನು ಮಾತ್ರ ಹೊಡೆಯುವ ನಟ ದರ್ಶನ್, ಶಕ್ತಿವಂತರನ್ನು ಮಾತ್ರ ಯಾಕೆ ಮುಟ್ಟೋದೆ ಇಲ್ಲ? ಇದೀಗ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೆ ಈ ಪ್ರಶ್ನೆಗೆ ಹಲವು ಉದಾಹರಣೆ ಕೂಡ ನೀಡಿದ್ದಾರೆ, ಬನ್ನಿ ದರ್ಶನ್ ಅವರ ಫೈಟಿಂಗ್ ಹಿಸ್ಟರಿ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ.
ನಟ ದರ್ಶನ್ ಅಲಿಯಾಸ್ ಈಗ ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ನಾಯ್ಡು ಅವರು ಹಲವಾರು ಬಾರಿ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದಾರೆ. ಕರ್ನಾಟಕ ಸಿನಿಮಾ ರಂಗದಲ್ಲೇ ಈ ರೀತಿಯ ಕೋಪಿಷ್ಠ ನಟ ಇನ್ನೊಬ್ಬ ಇಲ್ಲ ಅನ್ನೋ ಆರೋಪ ಕೂಡ ಎದುರಿಸುತ್ತಿದ್ದಾರೆ. ಹೀಗೆ ದರ್ಶನ್ ನಾಯ್ಡು ವಿರುದ್ಧ ಹಲವಾರು ಬಾರಿ ಹಲ್ಲೆ ಆರೋಪಗಳು ಕೇಳಿಬಂದವು. ಅದರಲ್ಲೂ, ನಟ ದರ್ಶನ್ ತಮ್ಮ ಪತ್ನಿ ಮೇಲೆ ಕೈಮಾಡಿ ಜೈಲಿಗೆ ಕೂಡ ಹೋಗಿ ಬಂದರು.

ಮೈಸೂರಿನ ಹಲವು ಏರಿಯಾದಲ್ಲಿ ದರ್ಶನ್ ನಾಯ್ಡು ಕೈಯಿಂದ ಒದೆ ತಿಂದಿದ್ದಾರೆ ಜನ ಎಂಬ ಆರೋಪದ ನಡುವೆ, ಮೈಸೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕೂಡ ದರ್ಶನ್ ನಾಯ್ಡು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಇತ್ತು. ಆ ನಂತರ ಶೂಟಿಂಗ್ ನಡೆಯುವಾಗ ಕೂಡ ಇದೇ ರೀತಿಯಾಗಿ ಹಲ್ಲೆ ಮಾಡುತ್ತಾರೆ ಎಂಬ ಆರೋಪ ಕೂಡ ಕೇಳಿಬಂದವು. ಹೀಗೆ ನಟ ದರ್ಶನ್ ತೂಗುದೀಪ ಅಲಿಯಾಸ್ ದರ್ಶನ್ ನಾಯ್ಡು ಸಾಲು ಸಾಲು ಆರೋಪ ಎದುರಿಸುತ್ತಿದ್ದಾರೆ.
ದರ್ಶನ್ ಗಟ್ಟಿ ಇರುವವರನ್ನ ಮುಟ್ಟಲ್ವಾ?
ಇವು ಬರೀ ಸ್ಯಾಂಪಲ್, ಹಲವಾರು ಬಾರಿ ಅಭಿಮಾನಿಗಳನ್ನ ತುಂಬಾ ಕೆಟ್ಟದಾಗಿ ನಡೆಸಿಕೊಂಡ ಆರೋಪ ಕೂಡ ದರ್ಶನ್ ನಾಯ್ಡು ಅವರ ಮೇಲೆ ಇದೆ. ಹೀಗಿದ್ದಾಗ ಅಮಾಯಕರ ಮೇಲೆಲ್ಲಾ ಸುಲಭವಾಗಿ ಕೈ ಮಾಡಿ ಹೊಡೆಯಲು ಹೋಗುವ ದರ್ಶನ್ ನಾಯ್ಡು, ಗಟ್ಟಿಗರನ್ನ ಮುಟ್ಟೋಕೆ ತಾಕತ್ ಇಲ್ವಾ? ಅಂತಾ ಕನ್ನಡಿಗರು ಈಗ ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಹೀಗೆ ಕೆಲವು ತಿಂಗಳ ಹಿಂದೆ ಕನ್ನಡದ ಪ್ರಖ್ಯಾತ ನಿರ್ಮಾಪಕನ ಜೊತೆಗೆ ಕಿರಿಕ್ ಆದಾಗ ಕೂಡ ದರ್ಶನ್ ಆ ನಿರ್ಮಾಪಕನ ಮೈ ಮುಟ್ಟುವ ಧೈರ್ಯ ಮಾಡಲಿಲ್ಲ. ಬರೀ ಮಾತಲ್ಲೇ ದರ್ಶನ್ ಎಲ್ಲವನ್ನೂ ಮುಗಿಸಿ ಸೈಲೆಂಟ್ ಆಗಿದ್ದರು. ಆದರೆ ಅದೇ ಆ ಜಾಗದಲ್ಲಿ ಅಮಾಯಕ ವ್ಯಕ್ತಿ ನಟ ದರ್ಶನ್ ಕೈಗೆ ಸಿಕ್ಕಿದ್ದರೆ ಏನಾಗುತ್ತಿತ್ತು?
ಒದೆ ತಿಂದವರು ದೂರು ನೀಡ್ತಾರಾ?
ಹೀಗೆ ಸೋಷಿಯಲ್ ಮೀಡಿಯಾ ಪೂರ್ತಿ ಈಗ ನಟ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಹೊಡಿ & ಬಡಿ ಅಂತಾ ಯಾವಾಗಲೂ ಅರಚುವ ಈ ನಟ ಇನ್ನಾದರೂ ಬದಲಾಗಿ ಬದುಕು ಕಲಿಯಲಿ, ಇಲ್ಲ ಜನರೇ ರೊಚ್ಚಿಗೆದ್ದು ಅವರ ಕೈಗಳನ್ನ ಮೇಲೆ ಎತ್ತುವ ಸಮಯವೂ ಬರಬಹುದು ಎಂಬ ಎಚ್ಚರಿಕೆ ನೀಡುತ್ತಿದ್ದಾರೆ ನೆಟ್ಟಿಗರು. ಅದರಲ್ಲೂ ಅಮಾಯಕರ ಮೇಲೆ ಹಲ್ಲೆ ಮಾಡಿದ ಹಲವು ಆರೋಪಗಳು ದರ್ಶನ್ ನಾಯ್ಡು ಮೇಲೆ ಇದ್ದು, ಜನರು ಇದೀಗ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿ, ಕೇಸ್ ದಾಖಲು ಮಾಡಲಿ ಅಂತಾ ಹಲವರು ಧೈರ್ಯ ತುಂಬುತ್ತಿದ್ದಾರೆ.
ಪತ್ರಕರ್ತರ ತೀವ್ರ ಆಕ್ರೋಶ!
ಪೊಲೀಸ್ ಅಧಿಕಾರಿಗಳ ವರ್ತನೆಯಿಂದ ಮಾಧ್ಯಮ ಸಿಬ್ಬಂದಿ ಆಕ್ರೋಗೊಂಡಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ, ದರ್ಶನ್ ಅಭಿಮಾನಿ ಮಾಧ್ಯಮಗಳ ಎದುರಿಗೆ ಬಂದು ಮಾಧ್ಯಮಗಳ ಕುರಿತು ತುಂಬ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ವೇಳೆ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ದಿಢೀರ್ ರೊಚ್ಚಿಗೆದ್ದಿದ್ದು ಆತನ ಮುಖಚರಿ ಸೆರೆಹಿಡಿಯಲು ಹೋಗಿದ್ದಾರೆ. ಈ ವೇಳೆ ಹೆದರಿದ ದರ್ಶನ್ ಅಭಿಮಾನಿ, ಆ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇಷ್ಟಾದರೂ ಮಾಧ್ಯಮಗಳ ಸಿಬ್ಬಂದಿ ಆತನ ಹಿಂದೆ ಓಡಿದ್ದಾರೆ. ಆಗ ತಕ್ಷಣ ಪೊಲೀಸರು ಆತನನ್ನ ಪೊಲೀಸ್ ಠಾಣೆ ಒಳಗೆ ಕರೆದುಕೊಂಡು ಹೋಗಿದ್ದಾರೆ. ಹಾಗೇ ಆತನಿಗೆ ಅವರದ್ದೇ ಭಾಷೆಯಲ್ಲಿ ಬುದ್ಧಿ ಹೇಳಿ, ರುಚಿ ತೋರಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಸಹವಾಸದಿಂದ ತಂದೆ ಕಳೆದುಕೊಂಡ
ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಸ್ಕೇಪ್ ಆಗಿದ್ದ, ಚಿತ್ರದುರ್ಗದ ಅನುಕುಮಾರ್ ಅಲಿಯಾಸ್ ಅನು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೀಗೆ ತನ್ನ ಮಗ ಕೊಲೆ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದ ನಂತರ, ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಆರೋಪ ಮಾಡಲಾಗಿದೆ. ಹೃದಯಾಘಾತದ ಕಾರಣಕ್ಕೆ, ಇದೀಗ ಅನುಕುಮಾರ್ ಅಲಿಯಾಸ್ ಅನು ಅವರ ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಹೀಗಿದ್ದಾಗ ಕೊಲೆ ಆರೋಪಿಗೆ ತನ್ನ ತಂದೆಯ ಮುಖ ಕೊನೆಯ ಬಾರಿಗೆ ನೋಡುವ ಭಾಗ್ಯ ಕೂಡ ಸಿಕ್ಕಿಲ್ಲ. ದರ್ಶನ್ ಸಹವಾಸ ಮಾಡಿದ್ದಕ್ಕೆ ಅನುಕುಮಾರ್ ನರಳುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications