Darshan Thoogudeepa: 'ದರ್ಶನ್‌ಗೆ ದೈರ್ಯವಿದ್ರೆ ಕೈಯೆತ್ತಿ ಮಧ್ಯದ ಬೆರಳನ್ನು ತೋರಿಸ್ಬೇಕಿತ್ತು, ಅವನೊಬ್ಬ ಹೇಡಿ' ಅಂತಿದ್ದಾರೆ..
ದರ್ಶನ್ ತೂಗುದೀಪ್ ವಿರುದ್ಧ ಮತ್ತೆ ಕನ್ನಡ ನಾಡಲ್ಲಿ ತೀವ್ರ ಆಕ್ರೋಶ ಮೊಳಗಿದೆ. ಇದಕ್ಕೆ ಕಾರಣ ಆಗಿದ್ದು ಕೂಡ ಸ್ವತಃ ನಟ ದರ್ಶನ್ ತೂಗುದೀಪ್ ವರ್ತನೆ. ಪ್ರಜಾಪ್ರಭುತ್ವ ವಿರೋಧಿ ರೀತಿ ಮಾತನಾಡುವ ದರ್ಶನ್ ತೂಗುದೀಪ್ ಇದೀಗ, ಮಾಧ್ಯಮಗಳಿಗೆ ತಮ್ಮ ಕೈ ಬೆರಳಿನಲ್ಲಿ ಕೆಟ್ಟದಾಗಿ ಸನ್ನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲು ಸೇರಿದ್ದರೂ ಕೊಬ್ಬು ಕರಗಿಲ್ಲ ಅಂತಾ ಜನರು ಹೇಳುವಾಗಲೇ, ಸೋಷಿಯಲ್ ಮೀಡಿಯಾದಲ್ಲಿ ಜನ 'ದರ್ಶನ್‌ಗೆ ದೈರ್ಯವಿದ್ರೆ ಕೈಯೆತ್ತಿ ಮಧ್ಯದ ಬೆರಳನ್ನ ತೋರಿಸ್ಬೇಕಿತ್ತು ಅವನೊಬ್ಬ ಹೇಡಿ'...
ದರ್ಶನ್ ತೂಗುದೀಪ್‌ಗೆ ಬುದ್ಧಿ ಬರಲ್ಲ ಅನ್ನೋದು ಇದೀಗ ಬಳ್ಳಾರಿ ಜೈಲಿನಲ್ಲಿ ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಯಾಕಂದ್ರೆ ಮಾಡಿದ್ದೇ ಮರ್ಡರ್ ಅಂದರೆ ಕೊಲೆ, ಹೀಗೆ ಕೊಲೆ ಆರೋಪ ಹೊತ್ತು ಸೆಂಟ್ರಲ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ತೂಗುದೀಪ್ ಮತ್ತೊಮ್ಮೆ ಮೀಡಿಯಾಗಳ ಎದುರಲ್ಲಿ ದವಲತ್ತು & ದರ್ಪ ತೋರಿಸಿದ್ದಾನೆ ಎಂಬ ಆರೋಪವನ್ನ ಕನ್ನಡ ನಾಡಿನ ಜನರು ಮಾಡುತ್ತಿದ್ದಾರೆ. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ & ಗ್ಯಾಂಗ್ ವಿರುದ್ಧ ಜನರು ರೊಚ್ಚಿಗೆದ್ದು ಏನು ಹೇಳುತ್ತಿದ್ದಾರೆ ಗೊತ್ತಾ? ಮುಂದೆ ಓದಿ.

ಮರ್ಮಾಂಗದ ಸಿಪ್ಪೆ ಸುಲಿದು ವಿಕೃತಿ?
ದರ್ಶನ್ ತೂಗುದೀಪ್ ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರುವ ಗಂಭೀರ ಆರೋಪವು ಕೇಳಿಬಂದಿದ್ದು, ಕಂಬಿ ಎಣಿಸುತ್ತಿದ್ದಾನೆ ಡಿ-ಬಾಸ್. ಹೀಗೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ತೂಗುದೀಪ್ ತನ್ನ ಗ್ಯಾಂಗ್ ಜೊತೆಗೆ ಪ್ಲಾನ್ ಮಾಡಿ, ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಅಪರಹರಣ ಮಾಡಿ ಕರೆಸಿಕೊಂಡು ಬಂದಿದ್ದ ಎಂಬ ಆರೋಪ ಇದೆ. ಅಲ್ಲದೆ ರೇಣುಕಾಸ್ವಾಮಿಯ ಮೇಲೆ ಪೊಲೀಸ್ ಲಾಠಿ, ರಾಡ್, ಕರೆಂಟ್ ಶಾಕ್, ಸಿಗರೇಟ್‌ನ ಬರೆ ಹೀಗೆ ಚಿತ್ರ ಹಿಂಸೆ ನೀಡುತ್ತಾ, ಮರ್ಮಾಂಗದ ಸಿಪ್ಪೆ ಸುಲಿದು ಕೊಲೆ ಮಾಡಿಸಿದ್ದಾನೆ ದರ್ಶನ್ ತೂಗುದೀಪ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಳ್ಳಾರಿ ಜೈಲಿನಲ್ಲಿ ಬಾಸ್ ಒದ್ದಾಟ!
ಮನುಷ್ಯ ಮತ್ತೊಬ್ಬ ಮನುಷ್ಯನನ್ನ ಈ ರೀತಿ ವಿಕೃತವಾಗಿ ಮರ್ಮಾಂಗದ ಸಿಪ್ಪೆ ಸುಲಿದು, ಕೊಲೆ ಮಾಡಿಸಿರುವ ಆರೋಪ ಕೇಳಿಬಂದ ನಂತರ ಪೊಲೀಸರು ದರ್ಶನ್ ತೂಗುದೀಪ್ & ಗ್ಯಾಂಗ್ ಬಂಧಿಸಿದ್ದಾರೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ, ಸಿಗರೇಟ್ ಅಂತಾ ಮಜಾ ಮಾಡುತ್ತಿದ್ದ ಅಭಿಮಾನಿಗಳ ಡಿ-ಬಾಸ್ ಈಗ ಬಳ್ಳಾರಿ ಜೈಲು ಸೇರುವ ಪರಿಸ್ಥಿತಿಯೇ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಊಟ ಸೇರದೆ, ವಾತಾವರಣ ಹಿಡಿಸದೆ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾನೆ.
ಇಂತಹ ಕಠಿಣ ಸಮಯದಲ್ಲೂ ಮೀಡಿಯಾಗಳು ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ 4ನೇ ಅಂಗಕ್ಕೆ ಅವಮಾನ ಮಾಡಿದ್ದಾನೆ ನಟ ದರ್ಶನ್ ತೂಗುದೀಪ ಅನ್ನೋ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಧೈರ್ಯ ಇದ್ದರೆ ಮಧ್ಯದ ಬೆರಳನ್ನು ನೇರವಾಗಿ ಮೇಲೆ ಎತ್ತಿ ತೋರಿಸಬೇಕಿತ್ತು, ಆದರೆ ನೆಲಕ್ಕೆ ಹಿಡಿದು ಈ ರೀತಿ ಬೆರಳಿನ ಮೂಲಕ ಸಿಗ್ನಲ್ ಕೊಟ್ಟು ಹೇಡಿ ಅನಿಸಿಕೊಂಡಿದ್ದಾನೆ ದರ್ಶನ್ ತೂಗುದೀಪ್ ಎಂಬ ಮಾತನ್ನ ಇದೀಗ ಕನ್ನಡ ನಾಡಿನ ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.
ಕಟ್ಕೊಂಡವಳು ಕಡೇ ತನಕ, ಇಟ್ಕೊ...
'ಬುಲ್ ಬುಲ್' ಸಿನಿಮಾ ಟೈಮಲ್ಲಿ, ದರ್ಶನ್ ತೂಗುದೀಪ್ ಹಿಂದೆ ಬಿದ್ದಿದ್ದಳಂತೆ ಪವಿತ್ರಾ ಗೌಡ. ಹೀಗೆ 'ಬುಲ್ ಬುಲ್' ಸಿನಿಮಾದಲ್ಲಿ ಒಂದು ಚಾನ್ಸ್ ಕೇಳಿಕೊಂಡು ಹೋಗಿದ್ದ ಇದೇ ಪವಿತ್ರಾ ಗೌಡಳನ್ನ ಪ್ರೀತಿಯಲ್ಲಿ ಲಾಕ್ ಮಾಡಿದ್ದನಂತೆ ದರ್ಶನ್ ತೂಗುದೀಪ್. ಹೀಗೆ ಇಬ್ಬರ ನಡುವೆ ಪ್ರೀತಿಯ ಮಧುರ.. ಮಧುರ.. ಅನುಭವ ಶುರುವಾಗಿ ಹೋಗಿತ್ತು. ಆ ಕಡೆಯಿಂದ ದರ್ಶನ್ ತೂಗುದೀಪ್ ಹೆಂಡ್ತಿ.. ಹೆಂಡ್ತಿ.. ಅಂತಾ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸುತ್ತಿದ್ದ. ಹಾಗೇ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್‌ಗೆ, ಸುಬ್ಬ.. ಸುಬ್ಬ.. ಅಂತಾ ಮೆಸೇಜ್ ಕಳುಹಿಸಿ ಖುಷಿ ಖುಷಿ ಆಗಿದ್ದಳು.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications