Darshan Thoogudeepa: ತಂದೆಗೆ ತಕ್ಕ ಮಗನಾಗದ ದರ್ಶನ್? ತಮ್ಮ ದಿನಕರ್ ಹೇಳಿದ ಮಾತು ಏನು?
ದರ್ಶನ್ ತೂಗುದೀಪ್ 'ಮೆಜೆಸ್ಟಿಕ್' ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಹಾಗೇ ನೂರಾರು ಕೋಟಿ ಆಸ್ತಿ ಕೂಡ ಮಾಡಿದ್ದಾರೆ ದರ್ಶನ್ ತೂಗುದೀಪ್ ಎಂಬ ಮಾತು ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿವೆ. ಆದರೆ ಆಸ್ತಿ ಬಗ್ಗೆ ದರ್ಶನ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಹೀಗೆ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ್ದರೂ, ದರ್ಶನ್ ಮಾತ್ರ 'ತಂದೆಗೆ ತಕ್ಕ ಮಗ' ಆಗಲಿಲ್ವಾ? ಎಂಬ ಚರ್ಚೆ ಶುರುವಾಗಿದೆ. ಹಾಗಾದ್ರೆ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ದರ್ಶನ್‌ಗೆ ಹೇಳಿದ್ದೇನು? ಈಗ ಆಗಿರುವುದು ಏನು? ಬನ್ನಿ ಮುಂದೆ ಓದಿ ತಿಳಿಯೋಣ.
ಅಂದಹಾಗೆ, ನಟ ದರ್ಶನ್ ಸಿನಿಮಾ ಇಂಡಸ್ಟ್ರಿಗೆ ಬರುವ ವಿಚಾರವೇ ದರ್ಶನ್ ಅವರ ತಂದೆ & ಕನ್ನಡ ಸಿನಿಮಾ ರಂಗದ ಮೇರು ನಟ ತೂಗುದೀಪ್ ಶ್ರೀನಿವಾಸ್ ಅವರಿಗೆ ಇಷ್ಟವೇ ಇರಲಿಲ್ಲವಂತೆ. ಈ ಕಾರಣಕ್ಕೆ ದರ್ಶನ್ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದೆ ಹೋಗಲು ಬೆಂಬಲ ನೀಡದೆ, ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹ ನೀಡುತ್ತಿದ್ದರಂತೆ ತೂಗುದೀಪ್ ಶ್ರೀನಿವಾಸ್.

ತಂದೆಗೆ ತಕ್ಕ ಮಗ ಆಗಲಿಲ್ಲ?
ಓದಿನಲ್ಲಿ ಮುಂದೆ ಇರದ ದರ್ಶನ್ ಅವರ ಬದುಕಿಗೆ ಏನಾದರೂ ಒಂದು ದೊಡ್ಡ ಆಸರೆ ಆಗಬೇಕು, ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಅನ್ನೋದು ದರ್ಶನ್ ಅವರ ತಾಯಿ ಅವರ ಆಸೆ ಆಗಿತ್ತಂತೆ. ಇದೇ ಕಾರಣಕ್ಕೆ ದರ್ಶನ್ ಅವರ ತಾಯಿ ಮಗನಿಗೆ ಬೆಂಬಲ ನೀಡಿದ್ದರು. ಹೀಗಿದ್ದರೂ ದರ್ಶನ್ ಮಾತ್ರ ತಂದೆಗೆ ತಕ್ಕ ಮಗ ಆಗಲಿಲ್ಲ ಅಂತಾ ಇದೀಗ ಅವರ ವಿರೋಧಿಗಳು, ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ಇಂತಹ ಗಂಭೀರ ಆರೋಪ ಯಾಕೆ? ಮಾಹಿತಿಗಾಗಿ ಮುಂದೆ ಓದಿ.
ಅಪ್ಪನ ಹೆಸರು ಉಳಿಸದ ದರ್ಶನ್?
ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ಕೆಲವು ದಿನಗಳ ಹಿಂದಷ್ಟೇ ನೀಡಿರುವ, ಖಾಸಗಿ ಸಂದರ್ಶನದ ವೇಳೆ ತಮ್ಮ ತಂದೆ ಹೇಳಿದ್ದ ಮಾತುಗಳನ್ನ ಬಿಡಿಸಿಟ್ಟಿದ್ದಾರೆ. ಹಾಗೇ ಈ ವೇಳೆ ಮೇರುನಟ ತೂಗುದೀಪ್ ಶ್ರೀನಿವಾಸ್ ಅವರಿಗೆ ದರ್ಶನ್ ಮೇಲೆ ಯಾಕೆ ಅನುಮಾನ ಇತ್ತು ಅನ್ನೋ ಮಾತನ್ನೂ ವಿವರಿಸಿ ಹೇಳಿದ್ದಾರೆ.
ಸಿನಿಮಾ ಇಂಡಸ್ಟ್ರಿಯಲ್ಲಿ ತೂಗುದೀಪ್ ಶ್ರೀನಿವಾಸ್ ಅವರು ದೊಡ್ಡ ಹೆಸರು ಸಂಪಾದನೆ ಮಾಡಿದ್ರು ಆದರೆ ತಮ್ಮ ಮಕ್ಕಳಾದ ದರ್ಶನ್ & ದಿನಕರ್ ಆಗ ಸಿನಿಮಾ ಇಂಡಸ್ಟ್ರಿಗೆ ಬಂದರೆ ಹೆಸರು ಹಾಳಾಗುವ ಭಯ ಅವರಿಗೆ ಇತ್ತಂತೆ. ಹೀಗಿದ್ದಾಗ ದಿನಕರ್ ತೂಗುದೀಪ್ ಮಾತ್ರ ತಂದೆಯ ಹೆಸರನ್ನು ಉಳಿಸಿ ಬೆಳೆಸಿದ್ದಾರೆ. ಆದರೆ ದರ್ಶನ್ ಮಾತ್ರ ತಂದೆಗೆ ತಕ್ಕ ಮಗನೇ ಆಗಲಿಲ್ಲ ಎಂದು ಇದೀಗ ದರ್ಶನ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ.
ಸುಳ್ಳು ಸುದ್ದಿಗಳು ಬಲು ಜೋರು!
ದರ್ಶನ್ ತೂಗುದೀಪ್‌ಗೆ ಇದೀಗ ತುಂಬಾ ಕಷ್ಟದ ಸಮಯ. ಹೊರಗಡೆ ಹೀರೋ ಆಗಿ ಮೆರೆದಿದ್ದ & ಮನಸ್ಸಿಗೆ ಬಂದಂತೆ ಹಣ ಖರ್ಚು ಮಾಡಿ ಫಾರಿನ್ ಸುತ್ತಾಡಿ ಬರುತ್ತಿದ್ದ ದರ್ಶನ್‌ಗೆ ಈಗ ಜೈಲು ಊಟವೇ ಗತಿ. ರಾಗಿ ಮುದ್ದೆ ಉಂಡು & ಕಂಬಿ ಎಣಿಸಿ ಮಲಗಬೇಕಾದ ಸಮಯ. ಹೀಗಾಗಿ ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬರಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ನಟ ದರ್ಶನ್ ಅವರು ತುಮಕೂರು ಜೈಲಿಗೆ ಶಿಫ್ಟ್ ಆಗಬಹುದು ಎಂಬ ಸುಳ್ಳು ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ದರ್ಶನ್ ತೂಗುದೀಪ್ ನರಳಾಟ
ಪವಿತ್ರಾ ಗೌಡ ಸಹವಾಸ ಬಿಟ್ಟು, ಭವಿಷ್ಯದಲ್ಲಿ ಪವಿತ್ರಾ ಜೊತೆಗೆ ಮಾತನಾಡುವುದು ಕೂಡ ಬೇಡ ಅಂತಾ ನಟ ದರ್ಶನ್ ತೂಗುದೀಪ್ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ನಟ ದರ್ಶನ್ ಹೀಗೆಲ್ಲಾ ಯಾಕೆ ನಿರ್ಧಾರ ಕೈಗೊಂಡಿದ್ದಾರೆ? ನಿಜವಾಗಿಯೂ ದರ್ಶನ್ ಪವಿತ್ರಾ ಗೌಡ ಜೊತೆಗೆ ಮಾತನ್ನೇ ಆಡಲ್ವಾ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜೈಲಿನಲ್ಲಿ ಮಾತ್ರ ನಟ ದರ್ಶನ್ ಇದೀಗ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದು, ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಟ ದರ್ಶನ್ ತೂಗುದೀಪ್ ವಿರೋಧಿಗಳ ಮಾತಾಗಿದೆ.












Click it and Unblock the Notifications