Get Updates
Get notified of breaking news, exclusive insights, and must-see stories!

Darshan Thoogudeepa: ದರ್ಶನ್ ತೂಗುದೀಪ್ ರಿಲೀಸ್ ಆಗಲು ಆ ಒಬ್ಬರೇ ಒಬ್ಬರು ಪ್ರಭಾವಿ ರಾಜಕಾರಣಿ ಅಡ್ಡಿ?

ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಇದೀಗ 1.. 2.. 3.. ಹಾಗೂ 3.. 2.. 1.. ಅಂತಾ ಕಂಬಿ ಎಣಿಸುತ್ತಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 200ಕ್ಕೂ ಹೆಚ್ಚು ಸಾಕ್ಷ್ಯಗಳು ಸಿಕ್ಕಿವೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಯಾವುದೇ ಆಂಗಲ್ ತೆಗೆದು ನೋಡಿದರೂ ದರ್ಶನ್ ತೂಗುದೀಪ್ ರಿಲೀಸ್ ಆಗಿ ಹೊರಗಡೆ ಬರೋದು ಅನುಮಾನ, ಅಕಸ್ಮಾತ್ ದರ್ಶನ್ ತೂಗುದೀಪ್ ಜಾಮೀನು ಪಡೆದು ಬಳ್ಳಾರಿಯ ಜೈಲಿಂದ ರಿಲೀಸ್ ಆಗಿ ಹೊರಗಡೆ ಬಂದರೂ, ಕೆಲವೇ ದಿನಗಳಲ್ಲಿ ಮತ್ತೆ ಲಾಕ್ ಆಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ಅದೊಬ್ಬರು ಪ್ರಭಾವಿ ರಾಜಕಾರಣಿ....

ದರ್ಶನ್ ಚನ್ನಾಗಿದ್ದ ಜೀವನವನ್ನ ಈಗ ಈ ಪರಿಸ್ಥಿತಿಗೆ ತಂದುಕೊಂಡಿದ್ದಾರೆ ಎಂಬ ಕೊರಗು ಅಭಿಮಾನಿಗಳಿಗೆ ಕಾಡ್ತಿದೆ. ದರ್ಶನ್ ತೂಗುದೀಪ್, ತಮ್ಮ ಕುಟುಂಬದ ಜೊತೆಗೆ ಕೂಡ ಚನ್ನಾಗಿ ಇರಲಿಲ್ಲ, ಹೀಗಾಗಿ ಹಲವು ವರ್ಷದಿಂದ ದರ್ಶನ್ ಅಮ್ಮ & ತಮ್ಮ ಮಾತನಾಡುತ್ತಾ ಇರಲಿಲ್ಲ. ಹೀಗಿದ್ದಾಗ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಸೇರಿದ ನಂತರವೆ ಸ್ವತಃ ದರ್ಶನ್ ತೂಗುದೀಪ್ ತಮ್ಮ ದಿನಕರ್ ತೂಗುದೀಪ್ ಮುಂದೆ ಬಂದರು. ಅಣ್ಣ ದರ್ಶನ್‌ನ ಬೆನ್ನಿಗೆ ನಿಂತಿದ್ದ ದಿನಕರ್ ತೂಗುದೀಪ್ ಧೈರ್ಯ ಹೇಳಿದ್ದರು. ಇಷ್ಟೆಲ್ಲದರ ನಡುವೆಯೇ ಈಗ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಲು, ಅದೊಬ್ಬರು ರಾಜಕಾರಣಿ ಅಡ್ಡಿ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಯಾರದು ರಾಜಕಾರಣಿ?

Darshan Thoogudeepa Fans Saying This About Their Favourite Hero Release

ದರ್ಶನ್ ತೂಗುದೀಪ್ ಎದುರು ಹಾ...

ನಿಮಗೆಲ್ಲಾ ಗೊತ್ತಿರುವ ರೀತಿ ದರ್ಶನ್ ತೂಗುದೀಪ್ ಚುನಾವಣೆ ಪ್ರಚಾರಗಳಿಗೆ ಹೆಚ್ಚು ಹೆಚ್ಚು ಹೋಗುತ್ತಿದ್ದರು. ಹೀಗಾಗಿ ಅವರಿಗೆ ರಾಜಕೀಯ ವ್ಯಕ್ತಿಗಳ ಸಹವಾಸ ಕೂಡ ಹೆಚ್ಚಾಗಿತ್ತು. ಈ ರೀತಿ ಅವರು ಕರ್ನಾಟಕದ ಮೂಲೆ ಮೂಲೆಯಲ್ಲೂ ರಾಜಕೀಯ ವ್ಯಕ್ತಿಗಳ ಸಂಬಂಧವನ್ನು ಗಳಿಸಿದ್ದರು. ಆದರೆ, ಇದೇ ಅವರಿಗೆ ಈಗ ಮುಳುವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದರ್ಶನ್ ತೂಗುದೀಪ್ ಇದೀಗ ರಿಲೀಸ್ ಆಗಿ ಬಳ್ಳಾರಿ ಜೈಲಿಂದ ಹೊರಗೆ ಬರಲು ಅದೊಬ್ಬರು..

ದರ್ಶನ್ ತೂಗುದೀಪ್‌ಗೆ ಅಡ್ಡಿ ಆದವರು...

ಹೌದು, ಕರ್ನಾಟಕದ ಪ್ರಭಾವಿ ರಾಜಕಾರಣಿ ಒಬ್ಬರು ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಲು ಅಡ್ಡಿ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ರಾಜಕಾರಣಿ ವಿರುದ್ಧ ಪದೇ ಪದೇ ದರ್ಶನ್ ತೂಗುದೀಪ್ ಪ್ರಚಾರ ಕೂಡ ನಡೆಸಿದ್ದರು. ಈ ನಡುವೆ ಕೂಡ ಇಬ್ಬರ ನಡುವೆ ಮಾತಿನ ತಿಕ್ಕಾಟವೂ ನಡೆದಿತ್ತು.

ಅಲ್ಲದೆ ಹಲವು ವರ್ಷಗಳ ಹಿಂದೆಯಿಂದ ಕೂಡ ಕರ್ನಾಟಕದ ಪ್ರಭಾವಿ ರಾಜಕಾರಣಿ ವಿರುದ್ಧ ಮಾತನಾಡಿ ಅವರನ್ನು ಮತ್ತು ಅವರ ಪುತ್ರನನ್ನ ದರ್ಶನ್ ತೂಗುದೀಪ್ ಎದುರು ಹಾಕಿಕೊಂಡು ಕ್ಯಾಂಪೇನ್ ಮಾಡುತ್ತಿದ್ದರು ಎಂಬ ಭಾರಿ ಗಂಭೀರ ಆರೋಪ ಇತ್ತು. ಹೀಗಿದ್ದಾಗ, ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ರಿಲೀಸ್ ಆಗಿ ಹೊರ ಬರಲು ಈಗ ಅದೇ ಪ್ರಭಾವಿ ರಾಜಕಾರಣಿ ಅಡ್ಡಿ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಳ್ಳಾರಿ ಜೈಲಿನಲ್ಲಿ ಬಾಸ್ ಒದ್ದಾಟ!

ಮನುಷ್ಯ ಮತ್ತೊಬ್ಬ ಮನುಷ್ಯನನ್ನ ಈ ರೀತಿ ವಿಕೃತವಾಗಿ ಮರ್ಮಾಂಗದ ಸಿಪ್ಪೆ ಸುಲಿದು, ಕೊಲೆ ಮಾಡಿಸಿರುವ ಆರೋಪ ಕೇಳಿಬಂದ ನಂತರ ಪೊಲೀಸರು ದರ್ಶನ್ ತೂಗುದೀಪ್ & ಗ್ಯಾಂಗ್ ಬಂಧಿಸಿದ್ದಾರೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ, ಸಿಗರೇಟ್ ಅಂತಾ ಮಜಾ ಮಾಡುತ್ತಿದ್ದ ಅಭಿಮಾನಿಗಳ ಡಿ-ಬಾಸ್ ಈಗ ಬಳ್ಳಾರಿ ಜೈಲು ಸೇರುವ ಪರಿಸ್ಥಿತಿಯೇ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಊಟ ಸೇರದೆ, ವಾತಾವರಣ ಹಿಡಿಸದೆ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾನೆ.

ಇಂತಹ ಕಠಿಣ ಸಮಯದಲ್ಲೂ ಮೀಡಿಯಾಗಳು ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ 4ನೇ ಅಂಗಕ್ಕೆ ಅವಮಾನ ಮಾಡಿದ್ದಾನೆ ನಟ ದರ್ಶನ್ ತೂಗುದೀಪ ಅನ್ನೋ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಧೈರ್ಯ ಇದ್ದರೆ ಮಧ್ಯದ ಬೆರಳನ್ನು ನೇರವಾಗಿ ಮೇಲೆ ಎತ್ತಿ ತೋರಿಸಬೇಕಿತ್ತು, ಆದರೆ ನೆಲಕ್ಕೆ ಹಿಡಿದು ಈ ರೀತಿ ಬೆರಳಿನ ಮೂಲಕ ಸಿಗ್ನಲ್ ಕೊಟ್ಟು ಹೇಡಿ ಅನಿಸಿಕೊಂಡಿದ್ದಾನೆ ದರ್ಶನ್ ತೂಗುದೀಪ್ ಎಂಬ ಮಾತನ್ನ ಇದೀಗ ಕನ್ನಡ ನಾಡಿನ ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+