Darshan Thoogudeepa: ರೇಣುಕಾಸ್ವಾಮಿ ಪುಟ್ಟ ಮಗುವಿನ ಮೇಲೂ ಕಣ್ಣಿಟ್ಟಿರುವ ಕಿರಾತಕರು...

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿದ್ದ ದರ್ಶನ್ ತೂಗುದೀಪ್ ಅವರು ನೂರಾರು ದಿನಗಳ ಕಾಲ ಒದ್ದಾಡಿ, ಇದೀಗ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಈ ಸಮಯದಲ್ಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮಾನಸಿಕ ಬೆಂಬಲ ನೀಡಬೇಕಿದ್ದ ಅಭಿಮಾನಿಗಳು ಅದನ್ನ ಮಾಡುತ್ತಿಲ್ಲ ಎಂಬ ಆರೋಪ ಇದೆ.

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೆಸರು ಹೇಳಿಕೊಂಡು ಕೆಲವರು ಮಾಡಬಾರದ್ದನ್ನ ಮಾಡುತ್ತಿದ್ದಾರೆ, ಇದರ ಪರಿಣಾಮ ಮುಂದೆ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಕೂಡ ಎದುರಾಗಬಹುದು ಎಂಬ ಭಯ ಆವರಿಸಿದೆ. ಇಂತಹ ಸಮಯದಲ್ಲೇ, ಭೀಕರವಾಗಿ ಕೊಲೆ ಆಗಿರುವ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತ ಅನಿಸಿಕೊಂಡಿರುವ ಕೆಲವರು ಕೆಟ್ಟದಾಗಿ ಮಾತನಾಡುತ್ತಿರುವ ಆರೋಪ ಇದೀಗ ಕೇಳಿ ಬಂದಿದೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಪುಟ್ಟ ಮಗುವಿನ ಮೇಲೂ ಕಣ್ಣಿಟ್ಟಿರುವ ಕಿರಾತಕರು...

Darshan Thoogudeepa Fans Are Doing This To Renukaswamy Son On Social Media Now

ಅಭಿಮಾನಿಗಳಿಂದ ಡಿ-ಬಾಸ್ ದರ್ಶನ್ ಅವರಿಗೆ...

ಅಂದಹಾಗೆ ಕೋಟಿ ಕೋಟಿ ಅಭಿಮಾನಿ ಬಳಗ ಹೊಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ, ಕೆಲವು ಅಭಿಮಾನಿಗಳಿಂದ ಇದೀಗ ಅಪಾಯವೂ ಎದುರಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಅಭಿಮಾನಿಗಳ ಈ ವರ್ತನೆಯಿಂದಲೇ, ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಜೈಲಿಗೆ ಹೋಗಬಹುದು ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಪುಟ್ಟ ಮಗುವಿನ ಮೇಲೂ ಕಣ್ಣಿಟ್ಟಿರುವ ಕಿರಾತಕರು...

ಹೌದು, ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಟ್ರೋಲ್ ಮಾಡುತ್ತಿರುವ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ರೇಣುಕಾಸ್ವಾಮಿ ಮಗನ ಬಗ್ಗೆ ಕೂಡ ಮಾತನಾಡುತ್ತಿದ್ದಾರೆ. ಅಲ್ಲದೆ ಈ ವಿಚಾರ ಇದೀಗ ಕರ್ನಾಟಕದಲ್ಲಿ ಹೊಸ ಸಂಚಲನಕ್ಕೆ ಕೂಡ ಕಾರಣವಾಗಿದೆ. ಯಾಕಂದ್ರೆ ರೇಣುಕಾಸ್ವಾಮಿಯ ಪುಟ್ಟ ಮಗುವಿನ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ ಮೂಲಕ ಪೋಸ್ಟ್ ಹಾಕಿ ವಿಕೃತಿ ಮೆರೆಯುತ್ತಿರುವ ಆರೋಪ ಕೇಳಿ ಬಂದಿದೆ.

ಹಾಗೇ ಹಳೆಯ ಸಿನಿಮಾಗಳಿಗೆ ಹೋಲಿಕೆ ಮಾಡಿ, ರೇಣುಕಾಸ್ವಾಮಿ ಮಗು ಮುಂದೆ ರಿವೇಂಜ್ ತೆಗೆದುಕೊಳ್ಳುತ್ತೆ ಅಂತೆಲ್ಲಾ ಮಾತುಗಳ ಆಡುತ್ತಿದ್ದಾರೆ ಕೆಲವರು. ಇನ್ನೂ ಕೆಲ ದಿನಗಳ ಹಿಂದೆ ಕಣ್ಣು ಬಿಟ್ಟು ಭೂಮಿಗೆ ಬಂದಿರುವ ಮಗುವಿನ ಬಗ್ಗೆ ಈ ರೀತಿಯ ಮಾತುಗಳಾ? ಅಂತಾನೂ ಪ್ರಬುದ್ಧ ಜನಗಳು ಪ್ರಶ್ನೆ ಕೇಳುತ್ತಿದ್ದಾರೆ.

ಕನ್ನಡಿಗರು ಹೇಳುತ್ತಿರುವುದು ಏನು?

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಯಾರದ್ದೋ ವಿಚಾರದಲ್ಲಿ ಪುಟಾಣಿ ಮಗುವಿನ ಬಗ್ಗೆ ಈ ರೀತಿ ಯಾಕೆ ಮಾತನಾಡಬೇಕು? ಅನ್ನೋ ಮಾತು ಕೇಳಿ ಬಂದಿದೆ. ಹಾಗೇ ರೇಣುಕಾಸ್ವಾಮಿ ಪುಟ್ಟ ಮಗುವಿನ ಮೇಲೂ ಕಣ್ಣಿಟ್ಟಿರುವ ಕಿರಾತಕರು... ಮುಂದೆ ಏನಾದ್ರೂ ಮಾಡ್ತಾರಾ? ಅಂತೆಲ್ಲಾ ಕನ್ನಡ ನಾಡಿನ ಜನ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಮಾಡುತ್ತಿದ್ದಾರೆ. ಪೋಸ್ಟ್ & ಕಮೆಂಟ್ಸ್ ಇದೀಗ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶ ಮೊಳಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+