Darshan Thoogudeepa: ಪವಿತ್ರಾ ಗೌಡ & ಪ್ರೇಮ್ ಹೆಂಡತಿ, ಮಗಳ ವಿಡಿಯೋ ವೈರಲ್!

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಕೊಲೆ ಆರೋಪದಲ್ಲಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದು, ಇನ್ನೂ 6 ತಿಂಗಳು ಹೊರಗೆ ಬರಲ್ಲ ಅಂತಾ ದರ್ಶನ್ ಅವರ ವಿರೋಧಿಗಳು ಹೇಳುತ್ತಿದ್ದಾರೆ. ಈ ನಡುವೆ 'ನಮ್ಮ ಹೀರೋ ಬೇಗ ಹೊರಗೆ ಬರ್ತಾರೆ' ಅಂತಾ ದರ್ಶನ್ ಅವರ ಫ್ಯಾನ್ಸ್ ನಂಬಿಕೆಯನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ. ಹಾಗೇ ಕರ್ನಾಟಕದ ಮೂಲೆ ಮೂಲೆಯಲ್ಲೂ ಪೂಜೆ ಮಾಡ್ತಾ ಸುದ್ದಿಯಾಗುತ್ತಿದ್ದಾರೆ. ಹೀಗಿದ್ದಾಗ ಪವಿತ್ರಾ ಗೌಡ ಜೊತೆಗೆ ಪ್ರೇಮ್ ಹೆಂಡತಿ & ಮಗಳ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನ ಹತ್ಯೆ ಮಾಡಿರುವ ಆರೋಪ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ವಿರುದ್ಧ ಕೇಳಿಬಂದಿದೆ. ಈ ಕಾರಣಕ್ಕೆ ಅರೆಸ್ಟ್ ಆಗಿರುವ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಆಂಡ್ ಟೀಂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಪವಿತ್ರಾ ಗೌಡ ಜೊತೆ ಪ್ರೇಮ್ ಹೆಂಡತಿ & ಮಗಳು ಇರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಹಾಗಾದ್ರೆ ವಿಡಿಯೋ ವೈರಲ್ ಆಗುತ್ತಿರುವುದು ಏಕೆ? ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜನ ವಿಡಿಯೋ ನೋಡಿ ಏನ್ ಹೇಳುತ್ತಿದ್ದಾರೆ? ಮುಂದೆ ಓದಿ.

Darshan Thoogudeepa Close Friend Pavithra Gowda With Actor Prem Family

ಪವಿತ್ರಾ ಗೌಡ ಜೊತೆ ಪ್ರೇಮ್ ಫ್ಯಾಮಿಲಿ!

ನೆನಪಿರಲಿ ಪ್ರೇಮ್ ಅವರ ಹೆಂಡತಿ & ಮಗಳು ಪವಿತ್ರಾ ಗೌಡ ಜೊತೆ ಇರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಪವಿತ್ರಾ ಗೌಡ ಅವರು ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಒಂದನ್ನ ಮಾಡುತ್ತಿದ್ದರು. ಈ ಜಾಗಕ್ಕೆ ಕನ್ನಡ ಸಿನಿಮಾ ರಂಗದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಅಂದ್ರೆ ನಟಿಯರು ಬರ್ತಾ ಇದ್ದರು.

ಅದೇ ಜಾಗದಲ್ಲಿ ತೆಗೆದಿರುವ ವಿಡಿಯೋ ಇದು ಎನ್ನಲಾಗುತ್ತಿದೆ. ನಟಿಯರ ಕಾಸ್ಟ್ಯೂಮ್ ಡಿಸೈನ್ ಮಾಡುವ ಸ್ಟುಡಿಯೋ ಒಂದನ್ನು ಇದೇ ಪವಿತ್ರಾ ಗೌಡ ನಡೆಸಿಕೊಂಡು ಹೋಗುತ್ತಿದ್ದರು. ಅದೇ ರೀತಿ, ಆ ಸ್ಟುಡಿಯೋಗೆ ಪ್ರೇಮ್ ಹೆಂಡತಿ & ಮಗಳು ಹೋಗಿದ್ದಾಗ ತೆಗೆದಿರುವ ವಿಡಿಯೋ ಇದು ಎನ್ನಲಾಗುತ್ತಿದೆ. ಹೀಗಿದ್ದಾಗ ಕೆಲವು ಕಿಡಿಗೇಡಿಗಳು ಮಾತ್ರ ಈ ವಿಡಿಯೋ ವೈರಲ್ ಮಾಡುತ್ತಾ, ಇರುವ ಬಗ್ಗೆ ಆರೋಪ ಕೇಳಿಬಂದಿದೆ.

ದರ್ಶನ್ & ಪ್ರೇಮ್ ನಡುವೆ ದೋಸ್ತಿ!

ಒಟ್ನಲ್ಲಿ ನಟ ನೆನಪಿರಲಿ ಪ್ರೇಮ್ ಕೂಡ ದರ್ಶನ್ ಅವರ ಜೊತೆಗೆ ದೋಸ್ತಿ ಹೊಂದಿದ್ದರು. ಈ ಇಬ್ಬರ ನಡುವೆ ಹಲವು ವರ್ಷಗಳಿಂದ ಗಟ್ಟಿಯಾದ ಫ್ರೆಂಡ್‌ಶಿಪ್ ಇದೆ. ಹೀಗಿದ್ದಾಗ ಪವಿತ್ರಾ ಗೌಡ ಜೊತೆಗೂ ಪ್ರೇಮ್ & ಕುಟುಂಬ ಉತ್ತಮ ಒಡನಾಟ ಹೊಂದಿತ್ತು. ಇದೀಗ ಹಳೆಯ ವಿಡಿಯೋನ ಕೆಲವರು ಬೇಕು ಅಂತಲೇ ವೈರಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದೇ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು, ಡಿಸೈನ್ ಡಿಸೈನ್ ಕಮೆಂಟ್ ಮಾಡುತ್ತಾ ಪವಿತ್ರಾ ಗೌಡ ಜೈಲು ಸೇರಿದ ಬಗ್ಗೆ ಇದೀಗ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.

ಪವಿತ್ರಾ ಗೌಡ ಈಗ ಪ್ರೆಗ್ನೆಂಟ್?

ಹೌದು, ಇದೀಗ ಪವಿತ್ರಾ ಗೌಡ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಸೋಷಿಯಲ್ ಮೀಡಿಯಾ ವೇದಿಕೆಯಿಂದ ಹಿಡಿದು ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರು ಆಗುವಂತೆ ಮಾಡಿದೆ. ಅಷ್ಟಕ್ಕೂ ಪವಿತ್ರಾ ಗೌಡ ಅವರಿಗೆ ಈಗಾಗಲೇ ಒಬ್ಬ ಮಗಳು ಇದ್ದು, ಮೊದಲ ಗಂಡನಿಂದ ಪವಿತ್ರಾ ಗೌಡ ಒಂದು ಮಗುವನ್ನ ಪಡೆದಿದ್ದಾರೆ. ಆದರೆ ಇದೀಗ ಪವಿತ್ರಾ ಗೌಡ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಪವಿತ್ರಾ ಗೌಡ ಇದೀಗ 2ನೇ ಮಗು ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಗಾಳಿ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟ್ರೋಲ್ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+