Darshan Thoogudeepa Case: ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಇನ್ಸ್ಟಾ ಪೋಸ್ಟರ್‌ ಭಾರೀ ವೈರಲ್

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಸೇರಿದೆ. ಈ ಹಿನ್ನೆಲೆ ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಈ ಬಾರಿ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿಲ್ಲ. ಇದರ ಬೆನ್ನಲ್ಲೇ ಇದೀಗ ಡಿಂಪಲ್‌ ಕ್ವೀನ್‌ ನಟಿ ರಚಿತಾರಾಮ್‌ ಇನ್ಸ್ಟಾಗ್ರಾಂ ಪೋಸ್ಟರ್‌ವೊಂದು ಭಾರೀ ಸದ್ದು ಮಾಡುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ವಿಜಯಲಕ್ಷ್ಮಿ ಅವರು ದರ್ಶನ್‌ಗಾಗಿ ಮಾಡದ ವ್ರತಗಳಿಲ್ಲ. ಮತ್ತೊಂದೆಡೆ ಅಭಿಮಾನಿಗಳು ಕೂಡ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಲೇ ಇದ್ದಾರೆ.

Darshan Thoogudeepa Case Actress Rachita Ram s Instagram poster has goes viral

ದರ್ಶನ್‌ ಜೈಲು ಸೇರಿರುವ ಹಿನ್ನೆಲೆ ಆಪ್ತರು ಸೇರಿದಂತೆ ಹಲವು ನಟ, ನಟಿಯರು ಈ ಬಾರಿ ಹುಟ್ಟಿದ ಹಬ್ಬವನ್ನು ಆಚರಣೆ ಮಾಡಿಕೊಂಡಿಲ್ಲ. ಇನ್ನು ನಾಳೆ ಅಂದರೆ ಅಕ್ಟೋಬರ್‌ 3ರಂದು ರಚಿತಾ ರಾಮ್‌ ಬರ್ತಡೇ ಇದ್ದು, ಅವರು ಕೂಡ ಈ ಬಾರಿ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಇನ್ಸ್ಟಾ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದಾರೆ. ಹಾಗಾದರೆ ಆ ಪೋಸ್ಟ್‌ನಲ್ಲಿ ಏನಿದೆ ಎಂದು ಇಲ್ಲಿ ತಿಳಿಯಿರಿ.

"ಎಲ್ಲಾರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತಾ ಈ ಬಾರಿ ಚಿತ್ರಕರಣ ಇರುವುದರಿಂದ ನಾಳೆ (ಅಕ್ಟೋಬರ್‌ 3) ನನ್ನ ಹುಟ್ಟುಹಬ್ಬ ಆಚರಣೆಯನ್ನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲಾರಿಗೂ ಕ್ಷಮೆಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರಿಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ. ನಿಮ್ಮ ಪ್ರೀತಿ ರಚ್ಚು," ಎಂದು ಬರೆದಿರುವ ಪೋಸ್ಟ್‌ ಅನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಸಿನಿಮಾ ಚಿತ್ರಿಕರಣ ನೆಪದಲ್ಲಿ ದರ್ಶನ್‌ ಜೈಲು ಸೇರಿರುವುದಿಂದ ನಟಿ ರಚಿತಾ ರಾಮ್‌ ಹುಟ್ಟುಹಬ್ಬವನ್ನು ಅಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇನ್ನು ಸೆಪ್ಟೆಂಬರ್‌ 8ರಂದು ನಟ ಧನ್ವೀರ್‌ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಕೂಡ ಹುಟ್ಟು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಹೀಗೆ ದರ್ಶನ್‌ ಜೈಲು ಸೇರಿದಾಗಿನಿಂದ ಕನ್ನಡ ಚಿತ್ರರಂಗದ ಹಲವರು ತಮ್ಮ ಬರ್ತಡೆಗೇ ಸದ್ಯ ಬ್ರೇಕ್‌ ಹಾಕಿದ್ದಾರೆ. ಇದೀಗ ನಟಿ ರಚಿತಾ ರಾಮ್‌ ಕೂಡ ಇಂತಹದ್ದೇ ಒಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಂದರೆ ಆಗಸ್ಟ್‌ 22ರಂದು ರಚಿತಾ ರಾಮ್‌ ಜೈಲಿನಲ್ಲಿ ನಟ ದರ್ಶನ್‌ನನ್ನು ಭೇಟಿಯಾಗಿದ್ದರು. ಭೇಟಿ ಬಳಿಕ ದರ್ಶನ್‌ ಬಗ್ಗೆ ನಟಿ ರಚಿತಾ ರಾಮ್‌ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

"ದರ್ಶನ್​ ಅವರನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಕಷ್ಟ ಆಗುತ್ತದೆ. ಅವರನ್ನು ನಾವೆಲ್ಲರೂ ತುಂನಾ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು, ಕುಟುಂಬದವರು ಅವರನ್ನು ಎಷ್ಟು ಮಿಸ್‌​ ಮಾಡಿಕೊಳ್ಳುತ್ತಿದ್ದಾರೋ ನಾನು ಕೂಡ ಅಷ್ಟೇ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನಾನು ಕೂಡ ದರ್ಶನ್‌ ಅಭಿಮಾನಿ​. ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ, ದಯವಿಟ್ಟು​ ಬೇಗ ಬನ್ನಿ ಎಂದು ಹೇಳಿಬಂದಿದ್ದೇನೆ," ಎಂದು ರಚಿತಾ ರಾಮ್ ಹೇಳಿದ್ದಾರೆ. ​

"ನನಗೆ ಕಾನೂನಿನ ಮೇಲೆ ನಂಬಿಕೆಯಿದೆ. ಆದಷ್ಟು ಬೇಗ ಹೊರಗೆ ಬರುತ್ತೇನೆ ಎಂದು ದರ್ಶನ್​ ನನಗೆ ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಇನ್ನೂ ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ, ಈ ರೀತಿ ನೋಡಲು ತುಂಬಾ ಬೇಜಾರ್‌ ಆಗುತ್ತಿದೆ. ನಾನು ಈವರೆಗೆ ಬೆಳೆಯಲು ಅವರೇ ಕಾರಣ," ಅಂತಲೂ ರಚಿತಾ ರಾಮ್​ ಹೇಳಿದರು. ಇನ್ನು 'ಬುಲ್‌​ಬುಲ್​', 'ಅಂಬರೀಷ', 'ಜಗ್ಗುದಾದ', 'ಕ್ರಾಂತಿ' ಸಿನಿಮಾಗಳಲ್ಲಿ ದರ್ಶನ್​ ಜೊತೆ ರಚಿತಾ ರಾಮ್​ ನಟನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+