Darshan Thoogudeepa: ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬಹುದು: ಎಸ್‌ಪಿಪಿ

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ & ಗ್ಯಾಂಗ್‌ ಜೈಲು ಸೇರಿದೆ. ಇನ್ನು ಅಕ್ಟೋಬರ್ 10ರಂದು 57ನೇ ಸಿಸಿಎನ್‌ ಕೋರ್ಟ್‌ನಲ್ಲಿ ನಟ ದರ್ಶನ್‌ ಜಾಮೀನು ವಿಚಾರಣೆ ನಡೆದಿದ್ದು, ತೀರ್ಪನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಿ ಜಡ್ಜ್‌ ಜೈಶಂಕರ್ ಆದೇಶ ಹೊರಡಿಸಿದ್ದರು. ಇನ್ನು ಇಂದು ದರ್ಶನ್‌ ಸೇರಿ 6 ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ.

ಇನ್ನು ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು ವಾದ ಮಂಡಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬಹುದು, ಆದರೆ ಇನ್ನುಳಿದಂತೆ ನಟ ದರ್ಶನ್‌ ಸೇರಿ ನಾಲ್ವರಿಗೆ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾದರೆ, ಯಾರಿಗೆಲ್ಲ ಬೇಲ್‌ ನೀಡಬಹುದೆಂದು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

Darshan Thoogudeepa Bail May Be Granted to Renukaswamy murder s Two Accused SPP

ಪ್ರಕರಣದ A1 ಆರೋಪಿ ಪವಿತ್ರಾ ಗೌಡ, A2 ಆರೋಪಿ ನಟ ದರ್ಶನ್, A8 ರವಿಶಂಕರ್, A11 ನಾಗರಾಜ್, A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ಇಂದು (ಅಕ್ಟೋಬರ್ 14) ನಿರ್ಧಾರ ಆಗಲಿದೆ. ಈ ಪೈಕಿ ಈಗಾಗಲೇ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು. ಆದರೆ, ನಟ ದರ್ಶನ್ ಸೇರಿ ನಾಲ್ವರಿಗೆ ಜಾಮೀನು ನೀಡಬಾರದೆಂದು ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖಿಸಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ‌ ಸಿ.ವಿ.ನಾಗೇಶ್, ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಈ ವೇಳೆ ಸರ್ಕಾರಿ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್ ನಟ ದರ್ಶನ್‌ ಸೇರಿ ಪ್ರಮುಖ ನಾಲ್ಕು ಆರೋಪಿಗಳಿಗೆ ಜಾಮೀನು ನೀಡಬಾರದೆಂದು ವಾದ ಮಂಡಿಸಿದ್ದರು.

ಇನ್ನು ದರ್ಶನ್‌ ಜಾರ್ಮಿನು ಅರ್ಜಿ ಸಂಬಂಧ ಬೆಂಗಳೂರಿನ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಸುದೀರ್ಘ ವಾದ-ಪ್ರತಿವಾದ ಆಲಿಸಿರುವ ನ್ಯಾಯಾಧೀಶ ಜೈಶಂಕರ್‌ ಅಕ್ಟೋಬರ್‌ 14ಕ್ಕೆ ಅಂತಿಮ ಆದೇಶದ ತೀರ್ಪನ್ನು ಕಾಯ್ದಿರಿಸಿದ್ದರು.

ಈಗಾಗಲೇ ದರ್ಶನ್‌ನ್ನು ಹೊರತರು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಅಭಿಮಾನಿಗಳು ಸಹ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ. ಇನ್ನು ಇಂದು ಎಲ್ಲರ ಚಿತ್ತ ನ್ಯಾಯಾಲಯದ ತೀರ್ಪಿನತ್ತ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+