Darshan Thoogudeepa: ಲೈಲಾ-ಮಜ್ನು, ಸಲಿಂ ಅನಾರ್ಕಲಿ, ಶಹಜಹಾನ್-ಮಮ್ತಾಜ್ ಪಟ್ಟಿಗೆ ಸೇರಲಿದ್ದಾರೆ ದರ್ಶನ್-ಪವಿತ್ರಾ!

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ಇದೀಗ ಜಗತ್ತಿಗೆ ಗೊತ್ತಾಗಿದೆ. ಹೀಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಸಮಯದಲ್ಲೇ, ರೇಣುಕಾಸ್ವಾಮಿ ಬಲಿ ಕಾ ಬಕ್ರಾ ಆಗಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದು ಕಡೆ ಕೊಲೆ ಆರೋಪಿಯಾಗಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೆಂಟ್ರಲ್ ಜೈಲು ಸೇರಿ ಮುದ್ದೆ ಮುರಿಯುತ್ತಿದ್ದಾರೆ. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ವೈರಲ್ ಆಗುತ್ತಿದ್ದು, ಲೈಲಾ-ಮಜ್ನು, ಸಲಿಂ ಅನಾರ್ಕಲಿ, ಶಹಜಹಾನ್-ಮಮ್ತಾಜ್ ಪಟ್ಟಿಗೆ ಸೇರಲಿದ್ದಾರಂತೆ...

'ಬುಲ್ ಬುಲ್' ಸಿನಿಮಾ ಟೈಮಲ್ಲಿ, ದರ್ಶನ್ ತೂಗುದೀಪ್ ಹಿಂದೆ ಬಿದ್ದಿದ್ದಳಂತೆ ಪವಿತ್ರಾ ಗೌಡ. ಹೀಗೆ 'ಬುಲ್ ಬುಲ್' ಸಿನಿಮಾದಲ್ಲಿ ಒಂದು ಚಾನ್ಸ್ ಕೇಳಿಕೊಂಡು ಹೋಗಿದ್ದ ಇದೇ ಪವಿತ್ರಾ ಗೌಡಳನ್ನ ಪ್ರೀತಿಯಲ್ಲಿ ಲಾಕ್ ಮಾಡಿದ್ದನಂತೆ ದರ್ಶನ್ ತೂಗುದೀಪ್. ಹೀಗೆ ಇಬ್ಬರ ನಡುವೆ ಪ್ರೀತಿಯ ಮಧುರ.. ಮಧುರ.. ಅನುಭವ ಶುರುವಾಗಿ ಹೋಗಿತ್ತು. ಆ ಕಡೆಯಿಂದ ದರ್ಶನ್ ತೂಗುದೀಪ್ ಹೆಂಡ್ತಿ.. ಹೆಂಡ್ತಿ.. ಅಂತಾ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸುತ್ತಿದ್ದ. ಹಾಗೇ ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್‌ಗೆ, ಸುಬ್ಬ.. ಸುಬ್ಬ.. ಅಂತಾ ಮೆಸೇಜ್ ಕಳುಹಿಸಿ ಖುಷಿ ಖುಷಿ ಆಗಿದ್ದಳು. ಹೀಗಿದ್ದಾಗಲೇ ನೋಡಿ ಶೂರುವಾಗಿದ್ದು ಹೊಸ ಕಂಟಕ!

Darshan Thoogudeepa And Pavitra Gowda Love Story

ಪ್ರೇಯಸಿಗಾಗಿ ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡುವಾಗ, ಇದೇ ಲವ್ ಸ್ಟೋರಿ ದರ್ಶನ್ ತೂಗುದೀಪ್ ಅವರ ಲೀಗಲ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಗೊತ್ತಾಗಿಬಿಟ್ಟಿತ್ತು. ಆ ನಂತರ ದೊಡ್ಡ ಗಲಾಟೆ ಕೂಡ ಆಗಿ ಹೋಗಿತ್ತು. ಹೀಗೆ ಪವಿತ್ರಾಳಿಗೆ ಜೀವ ಬೇಕಾದರೂ ಕೊಡುತ್ತೇನೆ ಅಂತಾ ದರ್ಶನ್ ತೂಗುದೀಪ್ ಬದುಕುತ್ತಿದ್ದ.

ಆಕೆಗೆ ಅಂದ್ರೆ ಪವಿತ್ರಾ ಗೌಡಗೆ ಬೇಕಾದ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನ ಕೂಡ ಕೊಟ್ಟು ಖುಷಿಪಡುತ್ತಿದ್ದ ನಟ ದರ್ಶನ್ ತೂಗುದೀಪ್. ಪರಿಸ್ಥಿತಿ ಹೀಗಿದ್ದಾಗಲೇ ಪವಿತ್ರಾ ಗೌಡಗಳಿಗೆ, ಕೆಟ್ಟ ಕೆಟ್ಟದಾಗಿ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅಂತಾ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಹೀಗಾಗಿಯೇ ದರ್ಶನ್ ತೂಗುದೀಪ್ & ಗ್ಯಾಂಗ್ ಈಗ ಕಂಬಿ ಎಣಿಸುವ ಪರಿಸ್ಥಿತಿ ಕೂಡ ಬಂದಿದೆ.

ದರ್ಶನ್ ತೂಗುದೀಪ್ ಇತಿಹಾಸದ ಪುಟ...

ಹೀಗೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ತೂಗುದೀಪ್ ತನ್ನ ಗ್ಯಾಂಗ್ ಜೊತೆಗೆ ಪ್ಲಾನ್ ಮಾಡಿ, ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಅಪರಹರಣ ಮಾಡಿ ಕರೆಸಿಕೊಂಡು ಬಂದಿದ್ದ ಎಂಬ ಆರೋಪ ಇದೆ. ಅಲ್ಲದೆ ರೇಣುಕಾಸ್ವಾಮಿಯ ಮೇಲೆ ಪೊಲೀಸ್ ಲಾಠಿ, ರಾಡ್, ಕರೆಂಟ್ ಶಾಕ್, ಸಿಗರೇಟ್‌ನ ಬರೆ ಹೀಗೆ ಚಿತ್ರ ಹಿಂಸೆ ನೀಡುತ್ತಾ, ಮರ್ಮಾಂಗದ ಸಿಪ್ಪೆ ಸುಲಿದು ಕೊಲೆ ಮಾಡಿಸಿದ್ದಾನೆ ದರ್ಶನ್ ತೂಗುದೀಪ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಿಂದೆ ನೆಮ್ಮದಿಯಾಗಿದ್ದು, ಈಗ ಕೊಲೆ ಆರೋಪಿ ಆಗಿರುವ ದರ್ಶನ್ ತೂಗುದೀಪ್ ಸೊರಗಿ, ಮೂಳೆ ಕಾಣುವ ಪರಿಸ್ಥಿತಿ ಬರುತ್ತಿದ್ದಾರೆ. ಇಂತಹ ಸಮಯದಲ್ಲೇ ಪ್ರೇಯಸಿಗಾಗಿ ಮರ್ಡರ್ ಮಾಡುವ ಹಂತಕ್ಕೆ ದರ್ಶನ್ ಬಂದ ಎಂಬ ಆರೋಪದಡಿ ಲೈಲಾ-ಮಜ್ನು, ಸಲಿಂ ಅನಾರ್ಕಲಿ, ಶಹಜಹಾನ್-ಮಮ್ತಾಜ್ ಪಟ್ಟಿಗೆ ಸೇರಲಿದ್ದಾರಂತೆ ದರ್ಶನ್-ಪವಿತ್ರಾ ಗೌಡ. ಹೀಗಂತ ಜನರು ಇದೀಗ ಮಾತನಾಡುತ್ತಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಬಾಸ್ ಒದ್ದಾಟ!

ಮನುಷ್ಯ ಮತ್ತೊಬ್ಬ ಮನುಷ್ಯನನ್ನ ಈ ರೀತಿ ವಿಕೃತವಾಗಿ ಮರ್ಮಾಂಗದ ಸಿಪ್ಪೆ ಸುಲಿದು, ಕೊಲೆ ಮಾಡಿಸಿರುವ ಆರೋಪ ಕೇಳಿಬಂದ ನಂತರ ಪೊಲೀಸರು ದರ್ಶನ್ ತೂಗುದೀಪ್ & ಗ್ಯಾಂಗ್ ಬಂಧಿಸಿದ್ದಾರೆ. ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ, ಸಿಗರೇಟ್ ಅಂತಾ ಮಜಾ ಮಾಡುತ್ತಿದ್ದ ಅಭಿಮಾನಿಗಳ ಡಿ-ಬಾಸ್ ಈಗ ಬಳ್ಳಾರಿ ಜೈಲು ಸೇರುವ ಪರಿಸ್ಥಿತಿಯೇ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಊಟ ಸೇರದೆ, ವಾತಾವರಣ ಹಿಡಿಸದೆ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾನೆ.

ಇಂತಹ ಕಠಿಣ ಸಮಯದಲ್ಲೂ ಮೀಡಿಯಾಗಳು ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ 4ನೇ ಅಂಗಕ್ಕೆ ಅವಮಾನ ಮಾಡಿದ್ದಾನೆ ನಟ ದರ್ಶನ್ ತೂಗುದೀಪ ಅನ್ನೋ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಧೈರ್ಯ ಇದ್ದರೆ ಮಧ್ಯದ ಬೆರಳನ್ನು ನೇರವಾಗಿ ಮೇಲೆ ಎತ್ತಿ ತೋರಿಸಬೇಕಿತ್ತು, ಆದರೆ ನೆಲಕ್ಕೆ ಹಿಡಿದು ಈ ರೀತಿ ಬೆರಳಿನ ಮೂಲಕ ಸಿಗ್ನಲ್ ಕೊಟ್ಟು ಹೇಡಿ ಅನಿಸಿಕೊಂಡಿದ್ದಾನೆ ದರ್ಶನ್ ತೂಗುದೀಪ್ ಎಂಬ ಮಾತನ್ನ ಇದೀಗ ಕನ್ನಡ ನಾಡಿನ ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.

ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+