Darshan Thoogudeepa: ತಪ್ಪೇ ಮಾಡಿಲ್ಲ ದರ್ಶನ್ ಹಾಗೂ ಪವಿತ್ರ! ಚಾರ್ಜ್‌ಶೀಟ್‌ನಲ್ಲಿ ತಪ್ಪು ಮಾಡಿದ್ದೆಲ್ಲವೂ ಈತನೇ..?
ದರ್ಶನ್ ತಪ್ಪೇ ಮಾಡಿಲ್ಲ. ಅಷ್ಟೇ ಯಾಕೆ ಪವಿತ್ರಾ ಗೌಡ ಕೂಡ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದೆಲ್ಲವೂ ಈ ವ್ಯಕ್ತಿ. ಹೀಗಂತ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೌದು... ಚಾರ್ಜ್‌ಶೀಟ್ ಪ್ರಕಾರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೆಚ್ಚು ಪಾತ್ರವಿರುವುದು ಎ2 ಆರೋಪಿ ದರ್ಶನ್ ಅವರದ್ದೂ ಅಲ್ಲ ಎ1 ಆರೋಪಿ ಪವಿತ್ರಾ ಗೌಡ ಅವರದ್ದೂ ಅಲ್ಲ. ಬದಲಿಗೆ ಪವಿತ್ರಾ ಗೌಡರನ್ನ ಅಕ್ಕ ಅಕ್ಕ ಅಂತ ಕರೆಯುತ್ತಾ, ಆಕೆ ಹೇಳಿದ ಕೆಲಸವನ್ನೆಲ್ಲಾ ಮಾಡುತ್ತಿದ್ದ ಪವನ್‌ದ್ದು.
ಹೌದು.... ಪವನ್ ಪವಿತ್ರಾ ಗೌಡ ಅವರ ಮನೆ ಕೆಲಸ ಮಾಡಿಕೊಂಡು ಇದ್ದವನು. ಪವನ್‌ಗೆ ಪವಿತ್ರಾ ಗೌಡ ಕೆಲ ಕೆಲಸಗಳನ್ನು ಹೇಳುತ್ತಿದ್ದರು. ಆ ಕೆಲಸಗಳನ್ನು ಮಾಡುವುದು ಮಾತ್ರ ಪವನ್‌ದು ಕೆಲಸವಾಗಿತ್ತು. ಇಷ್ಟು ಮಾಡಿಕೊಂಡು ಇದ್ದಿದ್ದರೆ ಬಹುಶ: ರೇಣುಕಾಸ್ವಾಮಿಯ ಕೊಲೆ ನಡೆಯುತ್ತಿರಲಿಲ್ಲವೆನೋ.. ಯಾಕೆಂದರೆ ಈ ಪವನ್ ಪವಿತ್ರಾ ಗೌಡ ಅವರ ಸೋಷಿಯಲ್ ಮೀಡಿಯಾದಲ್ಲಿ ಖಾತೆಗೆ ಬರುವ ಕಾಮೆಂಟ್‌ಗಳನ್ನು ನೋಡುತ್ತಿದ್ದನು. ಅದಕ್ಕೆ ಪ್ರತಿಕ್ರಿಯೆ ಕೂಡ ನೀಡುತ್ತಿದ್ದನು.

ಹೀಗೆ ಪವನ್ ರೇಣುಕಾಸ್ವಾಮಿ ಕಳುಹಿಸಿದ ಅಶ್ಲೀಲ ಮೆಸೇಜ್‌ಗಳನ್ನು ನೋಡಿ ಪವಿತ್ರಾ ಹಾಗೂ ದರ್ಶನ್ ಅವರೇ ಸುಮ್ಮನಿರುವಾಗ, ಪವನ್ ಅಕ್ಕಾ.... ನೋಡಕ್ಕಾ.... ಇವನು ಹೇಗೆ ಮೆಸೇಜ್ ಕಳುಹಿಸಿದ್ದಾನೆ? ಇವನ್ನನ್ನು ಸುಮ್ಮನೆ ಬಿಡಬಾರದು.. ದರ್ಶನ್ ಅಣ್ಣನಿಗೆ ಈ ಎಲ್ಲಾ ಮೆಸೇಜ್ ತೋರಿಸ್ತೀನಿ ಅಕ್ಕಾ.. ಅಂತೆಲ್ಲಾ ನಾಟಕ ಆಡಿದ್ದಾನೆ. ರೇಣುಕಾಸ್ವಾಮಿ ಮೆಸೇಜ್ ನೋಡಿ ಪವಿತ್ರಾ ಗೌಡ ಸುಮ್ಮನಾಗಿದ್ದರಂತೆ. ಯಾವುದಕ್ಕೂ ಏನೂ ಕೂಡ ರಿಪ್ಲೈ ಮಾಡಿರಲಿಲ್ಲವಂತೆ. ಆದರೆ ಪವನ್ ಮಾತ್ರ ಸುಮ್ಮನಿರದೆ ಪವಿತ್ರಾ ಗೌಡನ ಕಿವಿ ಊದಿದ್ದ. ರೇಣುಕಾಸ್ವಾಮಿ ಮೇಲೆ ಕೋಪ ಹುಟ್ಟುವಂತೆ ಮಾಡಿದ್ದವನು ಪವನ್ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟು ಮಾತ್ರವಲ್ಲದೆ ರೇಣುಕಾಸ್ವಾಮಿಗೆ ರಿಪ್ಲೈ ಮಾಡಿದವನು ಇದೇ ಪವನ್. ಈ ಪವನ್ ಪವಿತ್ರಾ ಗೌಡ ಅವರಂತೆ ರೇಣುಕಾಸ್ವಾಮಿಗೆ ಮೆಸೇಜ್ ಮಾಡಿ ಆತನ ಬಗ್ಗೆ ತಿಳಿದುಕೊಂಡು ಪಾಠ ಕಲಿಸೋಣ ಅಕ್ಕ ಅಂತ ಪವಿತ್ರಾ ಗೌಡಗೆ ಹೇಳಿದ್ದಾನೆ. ಅಷ್ಟೇ ಅಲ್ಲದೆ ರೇಣುಕಾಸ್ವಾಮಿ ವಿಚಾರದಲ್ಲಿ ಪವಿತ್ರಾ ಗೌಡ ದರ್ಶನ್ ಜೊತೆ ಜಗಳ ಆಡಿದ್ದು ಕೂಡ ಇದೇ ಪವನ್ ಕೊಟ್ಟ ಪ್ರಚೋದನೆಯೇ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಕೋಪಗೊಂಡ ದರ್ಶನ್ ರೇಣುಕಾಸ್ವಾಮಿ ಮೇಲೆ ಕೈ ಮಾಡಿ ಹೀನಾಮಾನವಾಗಿ ಥಳಿಸಿದ್ದಾರೆ. ಆದರೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಪವಿತ್ರಾ ಗೌಡಗೆ ಆಗಲಿ ಅಥವಾ ದರ್ಶನ್‌ಗೇ ಆಗಲಿ ಕೊಲೆ ಮಾಡುವಷ್ಟು ಕೋಪ ಇರಲಿಲ್ಲ. ಪವನ್ ರೇಣುಕಾಸ್ವಾಮಿ ಮೇಲೆ ಇಬ್ಬರಿಗೂ ಕೋಪ ಹೆಚ್ಚಾಗುವಂತೆ ಪ್ರಚೋದನೆ ನೀಡಿದ್ದಾನೆ ಎಂದು ಹೇಳಲಾಗಿದೆ.
ಅಲ್ಲಿಗೆ ಚಾರ್ಜ್‌ಶೀಟ್ ಪ್ರಕಾರ ನೋಡುವುದಾದರೇ ಇಲ್ಲಿ ದರ್ಶನ್ ಅವರದ್ದಾಗಲಿ ಪವಿತ್ರಾ ಗೌಡ ಅವರದ್ದಾಗಲಿ ತಪ್ಪಿಲ್ಲ. ಬದಲಿಗೆ ತಪ್ಪು ಇರುವುದೆಲ್ಲಾ ಪವನ್‌ದ್ದು ಎನ್ನುವುದು ಸ್ಪಷ್ಟವಾಗಿದೆ. ರೇಣುಕಾಸ್ವಾಮಿ ಅವರನ್ನು ಅಪಹರಣ ಮಾಡಿ, ಆತನನ್ನು ಪಟ್ಟಣಗೆರೆ ಶೆಡ್ಡಿಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ಪವಿತ್ರಾ ಗೌಡ ಹಾಗೂ ದರ್ಶನ್‌ಗೆ ಕಾಲ್ ಮಾಡುವವರೆಗೂ ಪವನ್ ಪಾತ್ರ ಪ್ರಮುಖವಾಗಿದೆ.
ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದು ನಿಜ, ಆದರೆ ದರ್ಶನ್ ಹಲ್ಲೆ ಮಾಡಿರುವುದರಿಂದಲೇ ರೇಣುಕಾಸ್ವಾಮಿ ಪ್ರಾಣ ಬಿಟ್ಟರಾ ಎನ್ನುವುದಕ್ಕೆ ಇನ್ನೂ ಕೂಡ ವರದಿ ಬರಬೇಕಿದೆ. ಒಂದು ವೇಳೆ ದರ್ಶನ್ ಅವರ ಹಲ್ಲೆಯಿಂದ ರೇಣುಕಾಸ್ವಾಮಿ ಪ್ರಾಣ ಬಿಟ್ಟಿಲ್ಲ ಅನ್ನೋದಾದರೆ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ.
ಜೊತೆಗೆ ಪವಿತ್ರಾ ಗೌಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದು ಪವನ್ ಪ್ರಚೋದನೆಯಿಂದಲೇ ಅನ್ನೋದಾದರೆ ಆಕೆಗೂ ಕೂಡ ಜಾಮೀನು ಸಿಗುವ ಸಾಧ್ಯತೆ ಇದೆ. ಚಾರ್ಜ್‌ಶೀಟ್ ಉಲ್ಲೇಖಿಸಿರುವ ಎಲ್ಲಾ ವಿಷಯಗಳನ್ನು ಪರಿಗಣಿಸುವುದಾದರೆ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಜೈಲು ವಾಸದಿಂದ ಹೊರಬರುವ ಸಾಧ್ಯತೆಗಳು ಹೆಚ್ಚಾಗಿವೆ.












Click it and Unblock the Notifications