Darshan Thoogudeepa: ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಜೈಲಿನ ಫೋಟೋ ಲೀಕ್?

ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ದುಡ್ಡಿನ ದರ್ಪ ತೋರಿಸುತ್ತಾ, ಅಧಿಕಾರಿಗಳಿಗೂ ಹಣ ನೀಡಿ ಕುಡಿತ, ಸಿಗರೇಟ್, ಬಿರಿಯಾನಿ ಅಂತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈಗಾಗಲೇ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಂದ ಒಟ್ಟಾರೆ 7 ಜೈಲು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಇಂತಹ ಸಮಯದಲ್ಲೇ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಜೈಲಿನ ಒಳಗೆ ಒಟ್ಟಿಗೆ ಇರುವ ಫೋಟೋ ಲೀಕ್ ಆಗಲಿದೆ, ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೂ, ಇಬ್ಬರ ಜೈಲು ಕೋಣೆಗಳ ನಡುವೆ ತುಂಬಾ ಅಂತರ ಇರುತ್ತದೆ. ಹಾಗೇ ಬ್ಯಾರಕ್ ಕೂಡ ಬೇರೆಯೇ ಆಗಿರುತ್ತದೆ. ಹೀಗಿದ್ರೂ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದೇ ಕೋಣೆಯಲ್ಲಿದ್ದಾರೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಇದು ಸಾಲದು ಎಂಬಂತೆ ಪವಿತ್ರಾ ಗೌಡ & ದರ್ಶನ್ ಜೈಲಿನ ಆವರಣದಲ್ಲಿ ವಾಕಿಂಗ್ ಮಾಡ್ತಾ ಇರುತ್ತಾರೆ, ಇದಕ್ಕೆಲ್ಲಾ ಜೈಲು ಅಧಿಕಾರಿಗಳೇ ಸಾಥ್ ನೀಡಿ ಬೆಂಬಲ ಕೊಡುತ್ತಿದ್ದಾರೆ ಎಂಬ ಆರೋಪ ಕೂಡ ಇತ್ತು. ಇದು ಸಾಲದು ಎನ್ನುವಂತೆ ಈಗ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಒಟ್ಟಿಗೆ ಇರುವ ಫೋಟೋ ಇನ್ನೇನು ಕೆಲವೇ ಕ್ಷಣಗಳಲ್ಲಿ ಲೀಕ್ ಆಗಲಿದೆಯಂತೆ!

Darshan Thoogudeepa And Pavithra Gowda Photo From Parappana Agrahara

ಪವಿತ್ರಾ ಗೌಡ & ದರ್ಶನ್ ಫೋಟೋ ಲೀಕ್?

ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿದೆ ಎಂಬ ಆರೋಪದಲ್ಲಿ, ಪರಪ್ಪನ ಅಗ್ರಹಾರ ಸೇರಿದೆ. ಆದರೂ ದರ್ಶನ್ ತೂಗುದೀಪ್ ತಮ್ಮ ರಾಜಕೀಯ ಪ್ರಭಾವ & ಹಣದ ಪ್ರಭಾವ ಬಳಸಿ ಇದೀಗ ಜೈಲಿನಲ್ಲಿ ತಮಗೆ ಏನೆಲ್ಲಾ ಮಸ್ತಿ ಮಾಡಲು ಬೇಕೋ ಅದನ್ನೆಲ್ಲಾ ಮಾಡ್ತಿದ್ದಾರೆ ಎಂಬ ಆರೋಪ ಇದೆ. ಈ ಆರೋಪಗಳಿಗೂ ಸಾಕ್ಷಿ ಎನ್ನುವಂತೆ ಇದೀಗ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಒಟ್ಟಿಗೆ ಇರುವ ಫೋಟೋ ಲೀಕ್ ಆಗಲಿದೆ ಎಂದು, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಿರಾತಕರು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಹಾಗಾದ್ರೆ ಇದು ನಿಜನಾ? ಕನ್ನಡಿಗರು ಏನು ಹೇಳುತ್ತಿದ್ದಾರೆ? ಮುಂದೆ ಓದಿ.

ಕನ್ನಡ ನಾಡಿನಲ್ಲಿ ಏನಿದು?

ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು.

ಸಾಲು ಸಾಲು ಸಿನಿಮಾ ರಿಲೀಸ್!

ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+