Darshan Thoogudeepa: ಪವಿತ್ರಾ ಗೌಡ ಜೊತೆಗೆ ದರ್ಶನ್ ತೂಗುದೀಪ್ ಒಂದೇ ಕೋಣೆಯಲ್ಲಿ?
ದರ್ಶನ್ ತೂಗುದೀಪ್ ಇದೀಗ ಜೈಲಲ್ಲಿ ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಾ ಆರಾಮವಾಗಿ ಮಟನ್ ಬಿರಿಯಾನಿ ತಿಂದು ಜಾಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗ ದರ್ಶನ್ ತೂಗುದೀಪ್ & ಗ್ಯಾಂಗ್ ಜೈಲಿನ ಆವರಣದಲ್ಲೇ ಚೇರ್ & ಟೇಬಲ್ ಹಾಕಿಕೊಂಡು ಸಿಗರೇಟು ಸೇದುತ್ತಾ, ಟೀ ಕುಡಿಯುತ್ತಿರುವ ಫೋಟೋ ಕೂಡ ವೈರಲ್ ಆಗುತ್ತಿದೆ. ಇಂತಹ ಸಮಯದಲ್ಲೇ ಪವಿತ್ರಾ ಗೌಡ ಹಾಗೂ ದರ್ಶನ್ ತೂಗುದೀಪ್ ಒಂದೇ ಕೋಣೆಯಲ್ಲಿ ಇದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಾಗಾದ್ರೆ ಇಬ್ಬರನ್ನೂ ಒಟ್ಟಿಗೆ ಇರಲು ಬಿಟ್ಟಿದ್ದಾರಾ ಅಧಿಕಾರಿಗಳು?
ದರ್ಶನ್ ತೂಗುದೀಪ್ ತಮ್ಮ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕೊಲೆ ಮಾಡಿರುವ ಆರೋಪ ಇದೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ 2ನೇ ಆರೋಪಿ ಆಗಿದ್ದು, ಇದೀಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಹೀಗೆ ಹೊರಗಡೆ ಮಾತ್ರ ನಟ & ಕೊಲೆಯ ಆರೋಪಿ ದರ್ಶನ್ ತೂಗುದೀಪ್ ಅವರು ಕಷ್ಟ ಪಡುತ್ತಿದ್ದಾರೆ ಎಂಬ ಮಾಹಿತಿ ಇತ್ತು, ಆದರೆ ಈಗ ನೋಡಿದರೆ ಒಳಗಡೆ ನಟ ದರ್ಶನ್ ತೂಗುದೀಪ್ ಮತ್ತು ಗ್ಯಾಂಗ್ ಫುಲ್ ಮಸ್ತಿ & ಮಜಾ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲ ದರ್ಶನ್ ತೂಗುದೀಪ್ ಹಾಗೂ ಪವಿತ್ರಾ ಗೌಡ ಕೂಡ ಒಂದೇ ರೂಂನಲ್ಲಿ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ!

ಪವಿತ್ರಾ ಗೌಡ ಜೊತೆ ದರ್ಶನ್?
ದರ್ಶನ್ ತೂಗುದೀಪ್ ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದ್ದು, ಪರಪ್ಪನ ಅಗ್ರಹಾರ ಜೈಲಿನ ಒಳಗೆ ಮಜಾ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ನಟ ದರ್ಶನ್ & ಗ್ಯಾಂಗ್ ತಮಗೆ ಬೇಕಾದ ಎಲ್ಲಾ ವಸ್ತುಗಳನ್ನ ಜೈಲಿಗೆ ತರಿಸಿಕೊಳ್ಳುವ ಜೊತೆಗೆ, ಪವಿತ್ರಾ ಗೌಡ ಜೊತೆ ದರ್ಶನ್ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗ ಹೊರಗಡೆ ಈ ಕುರಿತು ಆಕ್ರೋಶ ಮೊಳಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಇದರ ಜೊತೆಗೆ ಪವಿತ್ರ ಗೌಡ ರೂಂಗೆ ಒಂದು ಸಿಸಿ ಕ್ಯಾಮೆರಾ ಹಾಕಿ ಅಂತಿದ್ದಾರೆ ಜನ.
ಪರಪ್ಪನ ಅಗ್ರಹಾರದ ಮೇಲೆ ರೇಡ್?
ಕೊಲೆ, ದರೋಡೆ, ಕಳ್ಳತನ ಹೀಗೆ ಒಂದಲ್ಲ ಒಂದು ರೀತಿಯ ಸಮಾಜ ವಿರೋಧಿ ಕೃತ್ಯವನ್ನ ಎಸಗಿದವರಿಗೆ ಅಂತಾನೆ ಪರಪ್ಪನ ಅಗ್ರಹಾರ ಜೈಲು ಇದೆ. ಜೈಲಿಗೆ ಒಬ್ಬ ಅಪರಾಧಿ ಅಥವಾ ಆರೋಪಿಯನ್ನು ಹಾಕುವುದು ಯಾಕೆ ಅಂದ್ರೆ ಆತನಿಗೆ ಬುದ್ಧಿ ಬರಲಿ ಅಂತಾ. ಆದರೆ ನಮ್ಮ ಕರ್ನಾಟಕದ ಜೈಲಲ್ಲಿ ಈಗ ಆರೋಪಿಗಳಿಗೆ & ಅಪರಾಧಿಗಳಿಗೂ ಮಜಾ ಮಾಡಲು ಅವಕಾಶ ಸಿಗುತ್ತಿದೆ. ಹಾಗಾದ್ರೆ ಕರ್ನಾಟಕದ ಕಾನೂನು & ಸುವ್ಯವಸ್ಥೆಗೆ ಏನಾಗಿದೆ ಅಂತಾ ಕರ್ನಾಟಕ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಸ್ಪೆಂಡ್ ಆಗ್ತಾರಾ? ಎಂಬ ಪ್ರಶ್ನೆ ನಡುವೆ ಇದೀಗ ಹೊಸ ಬಿರುಗಾಳಿಯೇ ಎದ್ದಿದೆ.
ಜೈಲಿನಲ್ಲಿ ಹೆಂಡ & ಸಿಗರೇಟ್ ಸಪ್ಲೈ?
ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಈ ಫೋಟೋ ಬಿರುಗಾಳಿ ಎಬ್ಬಿಸಿದ್ದು, ಅಲ್ಲದೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಇದರ ಜೊತೆಗೆ ಪವಿತ್ರ ಗೌಡ & ದರ್ಶನ್ ತೂಗುದೀಪ್ ಇದೀಗ ಒಂದೇ ರೂಂನಲ್ಲಿ ಇರುವ ಆರೋಪ ಕೂಡ ಕೇಳಿಬಂದಿದೆ.
ಕನ್ನಡ ನಾಡಿನಲ್ಲಿ ಏನಿದು?
ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.












Click it and Unblock the Notifications