Darshan Arrest: ಪರಪ್ಪನ ಅಗ್ರಹಾರದಲ್ಲಿ 50 ದಿನ ಪೂರೈಸಿದ ದರ್ಶನ್‌ & ಗ್ಯಾಂಗ್; ಜಾಮೀನು ಸಿಗೋದು ಯಾವಾಗ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಎಲ್ಲಾ ಸಂಕಷ್ಟಗಳ ನಡುವೆ ದರ್ಶನ್ ಮತ್ತು ತಂಡ ಪರಪ್ಪನ ಅಗ್ರಹಾರದಲ್ಲಿ 50 ದಿನ ಪೂರೈಸಿದೆ. ಒಂದು ಕಡೆ ದರ್ಶನ್‌ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು, ಕುಟುಂಬದವರು ದೇವರ ಮೊರೆ ಹೋಗಿದ್ದರೆ, ಪೊಲೀಸರು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ಕೊಡಿಸುವ ವಿಶ್ವಾಸದಲ್ಲಿದ್ದಾರೆ.

ದರ್ಶನ್ಪರಪ್ಪನ ಅಗ್ರಹಾರ ಸೇರಿ ಆಗಸ್ಟ್ 10ಕ್ಕೆ ಸರಿಯಾಗಿ 50 ದಿನ ಮುಕ್ತಾಯವಾಗಿದೆ. ಜೂನ್ 11ರಂದು ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಬಳಿಕ ಜೂನ್ 20ರಂದು ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಜೂನ್ 22ರಂದು ದರ್ಶನ್‌ ಮತ್ತು ಇತರ ಮೂವರು ಆರೋಪಿಗಳಿಗೆ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಆಗಸ್ಟ್ 14ರವರೆಗೂ ದರ್ಶನ್‌ ಮತ್ತು ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಳಿಕ ಕೋರ್ಟ್ ಮುಂದೆ ಹಾಜರಾಗಬೇಕಿದೆ.

Darshan Thoogudeepa and his team complete 50 days in Parappana Agrahara Jail

ಜಾಮೀನು ಸಿಗೋದು ಯಾವಾಗ?

ನಟ ದರ್ಶನ್‌ಗೆ ಜಾಮೀನು ಸಿಗಲು ಇನ್ನೂ ಸಾಕಷ್ಟು ಸಮಯ ಕಾಯಬೇಕಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್‌ಶೀಟ್ ಸಲ್ಲಿಸಲು ಕೃತ್ಯ ನಡೆದ 90 ದಿನಗಳ ಒಳಗಾಗಿ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕವಷ್ಟೇ ದರ್ಶನ್‌ ಮತ್ತು ತಂಡಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಪೊಲೀಸರು ಕೂಡ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದು ಚಾರ್ಜ್‌ಶೀಟ್‌ ಸಿದ್ದಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸುವವರೆಗೂ ದರ್ಶನ್ ಮತ್ತು ತಂಡಕ್ಕೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+