ಪ್ರಥಮ್ ರೊಚ್ಚಿಗೆದ್ದು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ... Darshan Thoogudeepa
ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದ ಪ್ರಥಮ್ ಸದಾ ಒಂದಲ್ಲ ಒಂದು ವಿವಾದದ ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ ಅನ್ನೋ ಆರೋಪ ಇದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ವಿರುದ್ಧ ಮಾತನಾಡಿದ ನಂತರ ಒಳ್ಳೇ ಹುಡುಗ ಅಂತಾ ಕರೆಯಲ್ಪಡುವ ಪ್ರಥಮ್ ಸಾಲು ಸಾಲು ಸಂಕಷ್ಟ ಎದುರಿಸುತ್ತಿದ್ದಾರೆ. ಅದ್ರಲ್ಲೂ ಒಳ್ಳೇ ಹುಡುಗ ಪ್ರಥಮ್ ಜೀವಕ್ಕೆ ಕಂಟಕ ಎದುರಾಗಿತ್ತು ಅನ್ನೋ ಗಂಭೀರ ಆರೋಪ ಕೇಳಿಬಂದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, ಪ್ರಥಮ್ ರೊಚ್ಚಿಗೆದ್ದು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...
ಹೌದು, ನಟ ಪ್ರಥಮ್ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ಇದೀಗ ಬಹುದೊಡ್ಡ ಫೈಟಿಂಗ್ ಶುರುವಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಸಮಯದಲ್ಲಿ ಜೈಲಿಗೆ ಹೋಗಿದ್ದಾಗ, ನಟ ಪ್ರಥಮ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರ ಮುಂದೆ ದೊಡ್ಡ ಗಲಾಟೆಗೆ ಕೂಡ ಕಾರಣವಾಗಿತ್ತು. ಹೀಗೆ ಈ ಘಟನೆಗಳು ನಡೆದು ಒಂದು ವರ್ಷ ಕಳೆದು ಹೋಗಿದ್ದರೂ, ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್ & ನಟ ಪ್ರಥಮ್ ನಡುವೆ ತಿಕ್ಕಾಟ ಕಡಿಮೆ ಆಗಿರಲಿಲ್ಲ. ಇಂತಹ ಸಮಯದಲ್ಲೇ...

ಪ್ರಥಮ್ & ಡಿ-ಬಾಸ್ ಫ್ಯಾನ್ಸ್ ವಾರ್!
ನನಗೆ ಜೀವ ಬೆದರಿಕೆ ಹಾಕಿರುವುದಾಗಿ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳ ವಿರುದ್ಧ ಭಾರಿ ಗಂಭೀರ ಆರೋಪ ಮಾಡಿದ್ದ ನಟ ಪ್ರಥಮ್, ಇದೀಗ ಡೈರೆಕ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. ದರ್ಶನ್ ಸರ್ ನೀವು ಈಗ ಒಳ್ಳೆಯ ವ್ಯಕ್ತಿಗಳ ಸಹವಾಸ ಇಟ್ಟುಕೊಳ್ಳಿ. ಆದರೆ ಇಂತಹ ಗೂಂಡಾಗಳನ್ನು ಯಾಕೆ ಸಾಕುತ್ತಿದ್ದೀರಾ? ಮನೆಯಲ್ಲಿ ನಾಯಿ ಸಾಕಿ, ಬೆಕ್ಕು, ಗಿಳಿ, ಪಾರಿವಾಳ ಸಾಕಿ, ಇದೆಲ್ಲ ಬೇಡ ಅಂತಾನೂ ಹೇಳುವ ಮೂಲಕ ಇದೀಗ ದರ್ಶನ್ ಅವರಿಗೆ ಪ್ರಥಮ್ ಸಲಹೆ ನೀಡಿದ್ದಾರೆ. ಇದರ ಜೊತೆಗೆ ಕಲಾವಿದರು ಕಲಾವಿದರಾಗಿ ಇರಿ, ಅಂತಾನೂ ಹೇಳಿದ್ದು ವೈರಲ್ ಆಗುತ್ತಿದೆ....
ರಮ್ಯಾ ವಿರುದ್ಧವೂ ಡಿ-ಬಾಸ್ ಫ್ಯಾನ್ಸ್...
ಕನ್ನಡ ನಟ ದರ್ಶನ್ ತೂಗುದೀಪ್ ಅವರಿಗೆ ಈಗ ಸುಪ್ರೀಂಕೋರ್ಟ್ ವಿಚಾರಣೆ ಆಘಾತವನ್ನೇ ನೀಡಿ ಜಾಮೀನು ರದ್ದು ಮಾಡುವ ಸಾಧ್ಯತೆ ಇದೆಯಾ? ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾನ್ಯ ಸುಪ್ರೀಂ ಕೋರ್ಟ್ ಇನ್ನು 7 ದಿನಗಳಲ್ಲಿ ಮಹತ್ವದ ತೀರ್ಪು ನೀಡುವ ಸಾಧ್ಯತೆ ದಟ್ಟವಾಗಿದೆ. ಅಕಸ್ಮಾತ್ ತೀರ್ಪಿನ ಮೂಲಕ, ಮಾನ್ಯ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ಕನ್ನಡದ ನಟ ದರ್ಶನ್ ತೂಗುದೀಪ್ ಸೇರಿದಂತೆ ಪವಿತ್ರಾ ಗೌಡ ಜೊತೆಗೆ ಹಲವು ಆರೋಪಿಗಳು ಮತ್ತೆ ಸೆಂಟ್ರಲ್ ಜೈಲಿಗೆ ಹೋಗುತ್ತಾರಾ? ಎಂಬ ಚರ್ಚೆ ಕೂಡ ಜೋರಾಗಿದೆ. ಇದೇ ಸಮಯದಲ್ಲಿ ಪ್ರಥಮ್ ರೀತಿ ನಟಿ ರಮ್ಯಾ ವಿರುದ್ಧ ಕೂಡ ಇದೀಗ ಡಿ-ಬಾಸ್ ಅಭಿಮಾನಿಗಳು ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ.











Click it and Unblock the Notifications