Darshan Thoogudeepa: ಡಿ-ಬಾಸ್ ದರ್ಶನ್‌ರ ಟ್ರೋಲ್ ಮಾಡಿದ ಆಫ್ರಿಕಾ ಮ್ಯಾನ್: ರೊಚ್ಚಿಗೆದ್ದ ಅಭಿಮಾನಿಗಳಿಂದ....
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಅಂದ್ರೆ ಒಂದು ದೊಡ್ಡ ಮಟ್ಟಿಗೆ ಕ್ರೇಜ್ ಇರುತ್ತದೆ. ಕೋಟಿ, ಕೋಟಿ ಅಭಿಮಾನಿಗಳನ್ನು ಹೊಂದಿರುವ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ನೋಡಲು ವರ್ಷಗಟ್ಟಲೇ ಕಾಯ್ತಾರೆ ಫ್ಯಾನ್ಸ್. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಅಂದ್ರೆ ಅಲ್ಲಿ ಫೈಟ್ & ಆಕ್ಷನ್ ಸೀನ್ ಇದ್ದೇ ಇರುತ್ತದೆ. ಆದರೆ ಇದೀಗ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಾಕಷ್ಟು ನೊವು ಅನುಭವಿಸಿ ಈಗ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈ ಕಷ್ಟ & ನೋವು ನೋಡಿ ಅಭಿಮಾನಿಗಳು ಕೊರಗುತ್ತಿದ್ದಾರೆ, ಮರುಗುತ್ತಿದ್ದಾರೆ. ಇಂತಹ ಸಮಯದಲ್ಲೇ ಮುಂದೆ ಯಾವ ಸಿನಿಮಾ ಬರುತ್ತೆ ಅಂತ ಕಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್‌ರ ಟ್ರೋಲ್ ಮಾಡಿದ ಆಫ್ರಿಕಾ ಮ್ಯಾನ್: ರೊಚ್ಚಿಗೆದ್ದ ಅಭಿಮಾನಿಗಳಿಂದ....

ಡಿ-ಬಾಸ್ ಕಾಲು ಎಳೆದ ಆಫ್ರಿಕಾ...
ಕನ್ನಡ ಸಿನಿಮಾ ರಂಗದ ದೊಡ್ಡ ಸ್ಟಾರ್ ಆಗಿ ಬೆಳೆದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಹಲವು ರೀತಿ ಸಂಕಷ್ಟ ಎದುರಾಗುತ್ತಿವೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿ ಹೊರ ಬಂದಿದ್ದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈ ಸಮಯದಲ್ಲಿ ಹಲವು ರೀತಿ ಸಮಸ್ಯೆ ಪ್ರತಿಕ್ಷಣ ಕಾಡುತ್ತಿವೆ. ಈ ನೋವು ಕೋಟಿ ಕೋಟಿ ಅಭಿಮಾನಿಗಳಿಗೆ ಇದೆ.
ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆಕ್ಷನ್ ಅಂದ್ರೆ ಫೈಟ್ ಸೀನ್ ಟ್ರೋಲ್ ಮಾಡಿದ ಆಫ್ರಿಕಾ ಮೂಲದ ವ್ಯಕ್ತಿಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸರಿಯಾಗೇ ಕೊಟ್ಟಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿದೆ ಈ ವಿಚಾರ!
ಡಿ-ಬಾಸ್ ಅಭಿಮಾನಿಗಳು ವಿಡಿಯೋ ನೋಡಿ...
ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಪದೇ ಪದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆಕ್ಷನ್ ಅಂದ್ರೆ ಫೈಟ್ ಸೀನ್ ಟ್ರೋಲ್ ಮಾಡುತ್ತಿದ್ದಾನೆ. ಈ ರೀತಿಯ ವಿಡಿಯೋಗಳು ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿವೆ. ಅಲ್ಲದೆ ಡಿ-ಬಾಸ್ ಅಭಿಮಾನಿಗಳು ಈ ವಿಡಿಯೋ ನೋಡಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಚಾರವು ದೊಡ್ಡ ತಿಕ್ಕಾಟಕ್ಕೆ ಕೂಡ ಕಾರಣ ಆಗಿದೆ. ಒಂದು ಕಡೆ ದರ್ಶನ್ ತೂಗುದೀಪ್‌ರ ವಿರೋಧಿಗಳು ಈ ರೀತಿ ವಿಡಿಯೋ ಶೇರ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ವಿಡಿಯೋಗೆ ಭಾರಿ ಆಕ್ಷೇಪ ಹೊರ ಹಾಕುತ್ತಿದ್ದಾರೆ.
ಒಟ್ನಲ್ಲಿ ದೂರದ ಆಫ್ರಿಕಾ ದೇಶದಲ್ಲಿ ಕೂಡ ಕನ್ನಡ ಸಿನಿಮಾಗಳನ್ನ ನೋಡ್ತಾರಾ? ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಹೀಗಿದ್ದಾಗ ಟ್ರೋಲ್ ಮಾಡುತ್ತಿರುವ ಆಫ್ರಿಕಾ ವ್ಯಕ್ತಿಗೆ ಈಗ, ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಮೊದಲು ನಿಮ್ಮ ದೇಶ ನೋಡಿಕೋ ಅಂತಾನೂ ಅಭಿಮಾನಿ ಬಳಗ ಉತ್ತರ ನೀಡುತ್ತಿದೆ.












Click it and Unblock the Notifications