ಫ್ಯಾನ್ಸ್‌ಗೆ ದರ್ಶನ್‌ ಬುದ್ಧಿ ಹೇಳಬೇಕಿತ್ತು: ಕಮೀಷನರ್‌ಗೆ ದೂರು ಕೊಟ್ಟು ರಮ್ಯಾ ಹೇಳಿದ್ದೇನು?

ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿರುವ ಡಿಬಾಸ್‌ (ದರ್ಶನ್‌) ಅಭಿಮಾನಿಗಳಿಗೆ ನಡುಕ ಶುರುವಾಗಿದೆ. ಇಲ್ಲಿವರೆಗೆ ಸೋಷಿಯಲ್‌ ಮೀಡಿಯಾದಲ್ಲಿ ಗುದ್ದಾಡುತ್ತಿದ್ದ ಈ ಪ್ರಕರಣ ಈಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು, ಡಿಬಾಸ್‌ ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸ್‌ ಕಮೀಷನರ್‌ಗೆ ನಟಿ ರಮ್ಯಾ ದೂರು ನೀಡಿದ್ದಾರೆ. ಕಮೀಷನರ್‌ ದೂರು ಸ್ವೀಕರಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ರಮ್ಯಾ ತಿಳಿಸಿದ್ದಾರೆ. ಬಳಿಕ ಮಾಧ್ಯಮಗಳ ಮುಂದೆ ರಮ್ಯಾ ಅವರು ಏನೆಲ್ಲ ಬೆಳವಣಿಗೆ ನಡೆದಿದೆ ಎಂಬುದನ್ನು ವಿವರಿಸಿದ್ದಾರೆ.

'ರೇಣುಕಾಸ್ವಾಮಿ ಕೇಸ್‌ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಡೆದ ಬೆಳವಣಿಗೆ ಕುರಿತು ಪೋಸ್ಟ್‌ ಹಾಕಿದ್ದ ಬಳಿಕ ಟ್ರೋಲ್‌ ಶುರುವಾಗಿತ್ತು. ನಟಿಯಾಗಿ ಟ್ರೋಲ್‌ ಇದ್ದೇ ಇರುತ್ತೆ. ಆದರೆ ಈ ಮಟ್ಟಕ್ಕೆ ಇದೆ ಕೆಟ್ಟದಾಗಿ ಇದೆ ಎಂದು ಗೊತ್ತಿರಲಿಲ್ಲ. ನಮ್ಮ ಸಮಾಜ ಇಂತಹ ಕೀಳುಮಟ್ಟಕ್ಕೆ ಹೋಗಿದೆ ಅಂತ ಗೊತ್ತಿರಲಿಲ್ಲ. ಹೀಗಾಗಿ ದೂರು ಕೊಟ್ಟಿದ್ದೇನೆ. ಇದರಿಂದ ಸಮಾಜಕ್ಕೆ ಒಂದು ಸಂದೇಶ ಹೋಗಬೇಕು ಎಂದು ಬಯಸುತ್ತೇನೆ' ಎಂದಿದ್ದಾರೆ.

Darshan Could Have Advised His Fans Actress Ramya Complaint To Bengaluru Police Commissioner

'ಇಂಡಸ್ಟ್ರಿಯವರಿಗೆ ಭಯ ಇದೆ, ನನಗಿಲ್ಲ!'

'ಧರ್ಮಸ್ಥಳದಲ್ಲಿ ನಡೆದಿರುವುದು ಕೂಡ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿಚಾರ. ಅಲ್ಲಿ ಶವ ಇದೆ ಎನ್ನುತ್ತಿರುವುದು ಕೂಡ ಹೆಣ್ಣುಮಕ್ಕಳದ್ದೇ. ನಾನು ಕೊಟ್ಟಿರುವ ದೂರು ನನ್ನ ಪರ ಅಲ್ಲ, ಎಲ್ಲ ಹೆಣ್ಣುಮಕ್ಕಳ ಪರವಾಗಿ ಈ ದೂರು ಕೊಟ್ಟಿದ್ದೀನಿ. ನಟ ಪ್ರಥಮ್‌ ಕೂಡ ಬಂದು ದೂರು ಕೊಡ್ತಾರೆ ಅಂದುಕೊಂಡಿದ್ದೀನಿ ಎಂದಿದ್ದಾರೆ. ತುಂಬಾ ಹೆಣ್ಣುಮಕ್ಕಳು ನನಗೆ ಸಪೋರ್ಟ್‌ ಮಾಡಿದ್ದಾರೆ. ಇಂಡಸ್ಟ್ರಿಯವರಿಗೆ ಸಂಕೋಚ, ಭಯ ಇದೆ. ಆದರೆ ಪರ್ಸನಲ್‌ ಆಗಿ ನನಗೆ ತುಂಬಾ ಜನ ಮೆಸೇಜ್‌ ಮಾಡಿದ್ದಾರೆ. ಹೆಣ್ಣುಮಕ್ಕಳು ಹೆದರುತ್ತಾರೆ, ಆದರೆ ನಾನು ಹಾಗಲ್ಲ' ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

'ದರ್ಶನ್‌ ಬುದ್ಧಿ ಹೇಳಿದ್ರೆ ರೇಣುಕಾಸ್ವಾಮಿ ಉಳಿಯುತ್ತಿದ್ದ'

'ಎರಡು ವರ್ಷದ ಹಿಂದೆಯೇ ಯಶ್‌-ಸುದೀಪ್‌ ಫ್ಯಾನ್‌ ವಾರ್‌ ಬಗ್ಗೆ ಪೋಸ್ಟ್‌ ಮಾಡಿದ್ದೆ. ಅದನ್ನು ನೋಡಿ ನನಗೇ ಬೇಸರವಾಗಿತ್ತು. ಆಗಲೇ ಯಾರಾದರೂ ದೂರು ಕೊಡಬೇಕಿತ್ತು ಎಂದು ರಮ್ಯಾ ಹೇಳಿದ್ದಾರೆ. ದರ್ಶನ್‌ ಮೊದಲೇ ಎಚ್ಚೆತ್ತುಕೊಂಡು ಅವರ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದರೆ ರೇಣುಕಾಸ್ವಾಮಿ ಕೊಲೆಯೇ ಆಗುತ್ತಿರಲಿಲ್ಲ. ಈಗ ಇಷ್ಟೆಲ್ಲ ಆಗಿದ್ದರೂ ದರ್ಶನ್‌ ತಮ್ಮ ಫ್ಯಾನ್ಸ್‌ಗೆ ಬುದ್ಧಿ ಹೇಳಬಹುದಿತ್ತು ಎಂದಿದ್ದಾರೆ. ನಾನು ದರ್ಶನ್‌ ಜೊತೆಗೆ ಹೆಚ್ಚಾಗಿ ಮಿಂಗಲ್‌ ಆಗುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ ಅವರೊಂದಿಗೆ ಇದ್ದೆ' ಎಂದೂ ರಮ್ಯಾ ಕ್ಲಾರಿಟಿ ಕೊಟ್ಟಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ ಹಾಗೂ ನಟಿ ರಕ್ಷಿತಾ ಪ್ರೇಮ್‌ ಅವರ ಪೋಸ್ಟ್‌ ಬಗ್ಗೆಯೂ ಪ್ರತಿಕ್ರಿಯಿಸಿದ ರಮ್ಯಾ, 'ಅವರಿಬ್ಬರೂ ನನಗೇ ಹಾಕಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ರಕ್ಷಿತಾ ಹೇಳಿದ್ದು ಟ್ರೋಲ್‌ಗಳಿಗೆ ಇರಬಹುದು. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ನನಗೆ ಯಾರೋ ಹೆಣ್ಣುಮಕ್ಕಳ ಹೆಸರಿಟ್ಟುಕೊಂಡು ಮೆಸೇಜ್‌, ಕಾಮೆಂಟ್‌ ಮಾಡಿದ್ದಾರೆ. ನನ್ನ ಪ್ರಕಾರ ಹೆಣ್ಣುಮಕ್ಕಳು ಅಷ್ಟೆಲ್ಲ ಕೆಟ್ಟ ಪದಗಳನ್ನು ಬಳಸುವುದಿಲ್ಲ. ಕೆಲವರು ಹೆಣ್ಣುಮಕ್ಕಳ ಫೋಟೋ ಬಳಸಿ ಈ ಕೃತ್ಯ ಮಾಡಿದ್ದಾರೆ. 40ಕ್ಕೂ ಹೆಚ್ಚು ಸ್ಕ್ರೀನ್‌ಶಾಟ್‌ಗಳಲ್ಲಿ ಅತಿ ಕೆಟ್ಟದಾಗಿ ಇದ್ದ ಮೆಸೇಜ್‌ಗಳನ್ನಷ್ಟೇ ಶೇರ್‌ ಮಾಡಿದ್ದೇನೆ. ಇದಕ್ಕೆ ನ್ಯಾಯ ಸಿಗುತ್ತೆ ಎಂದು ಭಾವಿಸಿದ್ದೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ರಮ್ಯಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+