Actor Darshan: ರೇಣುಕಾಸ್ವಾಮಿ ಫೋಟೊಗೆ ಸೂಪರ್ ಎಂದು ಕಾಮೆಂಟ್ ಮಾಡಿದ್ದ ಪವಿತ್ರಾ ಗೌಡ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಸದ್ಯ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಎ2 ಆರೋಪಿ ದರ್ಶನ್‌ಗೆ ಜಾಮೀನು ಸಿಗಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಬಲವಾಗಿ ವಾದಿಸಿದ್ದಾರೆ. ಮತ್ತೊಂದು ಕಡೆ ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಕೂಡ ಜಾಮೀನು ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ನಡೆದ ಜಾಮೀನು ಅರ್ಜಿ ಕುರಿತಂತೆ ವಾದ-ಪ್ರತಿವಾದದ ಸಂದರ್ಭದಲ್ಲಿ ಎಸ್‌ಪಿಪಿ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ದರ್ಶನ್, ಪವಿತ್ರಾಗೌಡ ಹಾಗೂ ಮತ್ತೊಬ್ಬ ಆರೋಪಿ ಮನು ಕುಮಾರ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂನಿಂದ ಮೆಸೇಜ್ ಮಾಡಿದ್ದಾನೆ, ಆದರೆ ಆತ ಯಾರು ಅಂತಾನೆ ಗೊತ್ತಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ರೇಣುಕಾಸ್ವಾಮಿ ಫೆಬ್ರವರಿಯಿಂದಲೇ ಪವಿತ್ರಾಗೌಡಗೆ ಮೆಸೇಜ್ ಮಾಡ್ತಿದ್ದ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ವಾದಿಸಿದ್ದಾರೆ.
ಫೋನ್‌ನಲ್ಲಿ ಮಾತನಾಡಿದ್ದಾರೆ
ಫೆಬ್ರವರಿ ತಿಂಗಳಿನಿಂದಲೇ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿದ್ದ, ಜೂನ್‌ನಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ನಿನ್ನ ನಂಬರ್ ಕೊಡು ಎಂದು ಪವಿತ್ರಾ ಗೌಡ ಮೆಸೇಜ್ ಕೂಡ ಮಾಡಿದ್ದಾರೆ. ರೇಣುಕಾಸ್ವಾಮಿ ನಂಬರ್ ಪಡೆದ ಪವಿತ್ರಾ ಗೌಡ, ತಮ್ಮ ನಂಬರ್ ಬದಲಾಗಿ ಪವನ್ ನಂಬರ್ ಅನ್ನು ರೇಣುಕಾಸ್ವಾಮಿಗೆ ಕೊಟ್ಟಿದ್ದಾರೆ ಎಂದು ಎಸ್‌ಪಿಪಿ ವಾದಿಸಿದ್ದಾರೆ.
ರೇಣುಕಾಸ್ವಾಮಿಗೆ ನಂಬರ್ ಕಳಿಸಿದ ಪವಿತ್ರಾ ಗೌಡ ಇದೇ ಕಾಲ್ ಮಾಡುವಂತೆ ಕೇಳಿದ್ದಾರೆ. ರೇಣುಕಾಸ್ವಾಮಿ ಕುಡ ಕೂಡ ಕರೆ ಮಾಡಿ ಮಾತನಾಡಿದ್ದಾನೆ. ಅಶ್ಲೀಲ ಫೋಟೊಗಳನ್ನು ಕಳಿಸಿದ್ದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕೂಡ ಕಳಿಸಿ ಹೇಗಿದೆ ಎಂದು ಕೇಳಿದ್ದು, ಇದಕ್ಕೆ ಸೂಪರ್ ಎಂದು ಪ್ರತಿಕ್ರಿಯೆ ನೀಡಲಾಗಿದೆ ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ರೇಣುಕಾಸ್ವಾಮಿಯಿಂದ ಅಷ್ಟೆಲ್ಲಾ ತೊಂದರೆ ಆಗಿದ್ದರೆ ಪವಿತ್ರಾ ಗೌಡ ಪೊಲೀಸರಿಗೆ ದೂರು ನೀಡಬಹುದಿತ್ತು ಇಲ್ಲ ರೇಣುಕಾಸ್ವಾಮಿ ಅಕೌಂಟ್ ಬ್ಲಾಕ್ ಮಾಡಬಹುದಿತ್ತು. ಆದರೆ ಪವಿತ್ರಾ ಗೌಡ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನೆ ಅಧ್ಯಕ್ಷನನ್ನು ಬಳಸಿಕೊಂಡು ರೇಣುಕಾಸ್ವಾಮಿಯನ್ನು ಪತ್ತೆ ಮಾಡಿದ್ದಾರೆ. ಜೂನ್ 6ರಂದು ಪವಿತ್ರಾ, ಪವನ್, ವಿನಯ್, ರಾಘವೇಂದ್ರ ಹಾಗೂ ದರ್ಶನ್ ಅನೇಕ ಬಾರಿ ಫೋನ್ ಮಾಡಿ ಮಾತನಾಡಿದ್ದಾರೆ. ಆದರೆ ಎ3 ಆರೋಪಿ ಮಾಡಿರುವ ಮೆಸೇಜ್‌ಗಳು ಅನುಮಾನ ಮೂಡಿಸುತ್ತವೆ ಎಂದು ವಾದಿಸಿದರು.
ಬುಧವಾರಕ್ಕೆ ಮುಂದೂಡಿಕೆ
ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದ್ದು, ನಾಳೆಯೇ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ. ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದು, ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ಜೈಲಧಿಕಾರಿಗಳಿಗೆ ತಿಳಿಸಿದ್ದು, ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications