ದರ್ಶನ್‌ ಜೊತೆ ಹರಟೆ ಹೊಯುತ್ತಾ ಕುಳಿತಿದ್ದ ವಿಲ್ಸನ್‌ ಗಾರ್ಡನ್‌ ನಾಗನ ಟೀ ಶರ್ಟ್‌ ಬೆಲೆ ಎಷ್ಟು ಗೊತ್ತಾ.?

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳುಗಳು ಕಳೆದಿವೆ. ಇನ್ನೂ ಮೊನ್ನೆಯಷ್ಟೇ ಪರಪ್ಪನ ಅಗ್ರಹಾರದಲ್ಲಿ ರೆಸಾರ್ಟ್‌ ರೀತಿಯಲ್ಲಿ ರೌಡಿ ಶೀಟರ್‌ ವಿಲ್ಸನ್‌ ಗಾರ್ಡ್‌ ನಾಗನ ಜೊತೆ ದರ್ಶನ್‌ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋಗಳು ಭಾರೀ ವೈರಲ್‌ ಆಗಿದ್ದವು. ಈ ವೇಳೆ ನಾಗ ಧರಿಸಿದ್ದ ಟೀ ಶರ್ಟ್‌ ಕಣ್ಣು ಕುಕ್ಕುವಂತಿತ್ತು.

ನಟ ದರ್ಶನ್‌ ಜೈಲಿನಲ್ಲೇ ರೌಡಿ ಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ, ಪ್ರಕರಣದ ಆರೋಪಿ ನಾಗರಾಜನ ಜೊತೆ ಕುಳಿತು ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದು ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ಭಾರೀ ವೈರಲ್‌ ಆಗಿತ್ತು. ಇನ್ನೂ ಈ ವೇಳೆ ವಿಲ್ಸನ್‌ ಗಾರ್ಡ್‌ ನಾಗ ಧರಿಸಿದ್ದ ಕಪ್ಪು ಬಣ್ಣದ ಬ್ರಾಂಡೆಡ್‌ ಟೀ ಶರ್ಟ್‌ ಅಂತೂ ನೋಡುಗರ ಕಣ್ಣು ಕುಕ್ಕುವಂತಿತ್ತು. ಹಾಗಾದರೆ ಇದರ ಬೆಲೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Darshan Case Do you know how much price of Wilson Garden Naga s branded t-shirts

ಜೈಲಿಲ್ಲಿ ದರ್ಶನ್‌ ಜೊತೆ ಕುಳಿತು ಹರಟೆ ಹೊಡೆದಿದ್ದ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ ದರ 15-20,000 ರೂಪಾಯಿ ಎನ್ನಲಾಗಿದೆ. ಈತ ದುಬೈ ಸೇರಿದಂತೆ ಫಾರಿನ್ ಬ್ರ್ಯಾಂಡೆಡ್‌ ಟಿ ಶರ್ಟ್‌ಗಳನ್ನು ಧರಿಸುತ್ತಿರುತ್ತಾನೆ. ಅಲ್ಲದೆ, ಬ್ಯಾರಕ್‌ನಲ್ಲಿ ಬರೀ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕೂಡ ಇದ್ದವು ಎನ್ನುವ ಶಾಕಿಂಗ್ ಮಾಹಿತಿ ಹೊರಬಿದ್ದಿತ್ತು.

ಹಾಗಾದರೆ ಜೈಲಿನಲ್ಲಿದ್ದರೂ ಕೂಡ ವಿಲ್ಸನ್‌ ಗಾರ್ಡನ್‌ ನಾಗನಿಗೆ ಹೇಗೆ ಇವೆಲ್ಲ ತಲುಪುತ್ತವೆ ಎನ್ನುವ ಪ್ರಶ್ನೆಗಳು ಕಾಡುತ್ತಲೇ ಇರುತ್ತದೆ. ಹೊರಗಡೆ ಇರುವ ಇವನ ಕಡೆಯ ಹುಡುಗರೇ ಇವುಗಳನ್ನೆಲ್ಲ ನಾಗನಿಗೆ ರವಾನಿಸುತ್ತಾರೆ ಎನ್ನುವ ಆರೋಪ ಇದೆ. ಅಷ್ಟರ ಮಟ್ಟಿಗೆ ಪರಪ್ಪನ ಅಗ್ರಹಾರದ ಜೈಲಿನ ನಿಯಮಗಳು ಉಲ್ಲಂಘಟನೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ.

ವಿಲ್ಸನ್‌ ಗಾರ್ಡ್‌ ನಾಗ ಯಾರು?: ಈಗಾಗಲೇ ವಿಲ್ಸನ್‌ ಗಾರ್ಡನ್‌ ನಾಗರಾಜು ವಿರುದ್ಧ ದರೋಡೆ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ಈತನ ವಿರುದ್ಧ ಯಾವ್ಯಾವಾಗ ಯಾವ ಕೇಸ್‌ಗಳು ದಾಖಲಾಗಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ರೌಡಿ ಮಹೇಶ್ ಕೊಲೆ ನಡೆದಿದ್ದು, ಪ್ರಮುಖ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದರು. "ಸಿದ್ದಾಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿದ್ದ ಮಹೇಶ್‌ನನ್ನು ಆಗಸ್ಟ್ 4ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರೌಡಿ ವಿಲ್ಸನ್‌ ಗಾರ್ಡನ್ ನಾಗ ಹಾಗೂ ಮೋಹನ್ ಅಲಿಯಾಸ್ ಡಬಲ್ ಮೀಟರ್ ತಲೆಮರೆಸಿಕೊಂಡಿದ್ದರು. ಬಳಿಕ ಇಬ್ಬರೂ ನ್ಯಾಯಾಲಯಕ್ಕೆ ಶರಣಾಗಿದ್ದರು ಎಂದು ಪೊಲೀಸ್ ಮುಲಗಳು ತಿಳಿಸಿದ್ದವು ಎಂದು ವರದಿಯಾಗಿದೆ.

2005ರಲ್ಲಿ ಆರ್‌ಆರ್‌ ನಗರ, ಆಡುಗೋಡಿ, ಬನಶಂಕರಿ ಪೊಲೀಸರು ಸರಣಿ ವಾಹನ ಕಳವಿಗೆ ಸಂಬಂಧಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. 2009ರಲ್ಲಿ ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲು ಕೊಲೆ ಪ್ರಕರಣ ದಾಖಲಾಗಿದೆ. 2012ರಲ್ಲಿ ರೌಡಿಶೀಟರ್ ಗುಪ್ಪಾ ಕೊಲೆ ಪ್ರಕರಣ ಸೇರಿ ಈ ನಾಗರ ವಿರುದ್ಧ ಇದುವರೆಗೂ 22 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ 7 ಕೊಲೆ ಪ್ರಕರಣಗಳಲ್ಲಿ ಎ1 ಆರೋಪಿ ಆಗಿದ್ದಾನೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+