"ದರ್ಶನ್, ಸುದೀಪ್‌ಗೆ ಈಗಿರುವ ರೇಂಜ್ ಆಗಲೇ ಮಾಲಾಶ್ರೀ ಅವರಿಗಿತ್ತು"
ಚಂದನವನದ ಗೊಂಬೆ, ಕನಸಿನ ರಾಣಿ ಎಂದೇ ಕರೆಸಿಕೊಂಡಿರುವ ನಟಿ ಮಾಲಾಶ್ರೀ ಅವರ ಅಭಿನಯಕ್ಕೆ ಸರಿಸಾಟಿ ಇಲ್ಲ. ದಶಕಗಳಿಂದಲೂ ಹಲವು ಸಿನಿಮಾಗಳು ಮಾಡಿರುವುದು ಇತಿಹಾಸವಾದರೆ, ಸಂಭಾವನೆ ವಿಚಾರದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ್ದರು ಮಾಲಾಶ್ರೀ. ಆಗಿನ ಕಾಲಕ್ಕೇ ಅವರ ಸಂಭಾವನೆ ಸ್ಟಾರ್ ನಟರಿಗಿಂತಲೂ ಹತ್ತು ಪಟ್ಟಿದ್ದರೆ, ಮಾಲಾಶ್ರೀ ಇದ್ದರೆ ಆ ಸಿನಿಮಾ ಹಿಟ್ ಆಗೋದು ಪಕ್ಕಾ ಎನ್ನುವ ಪ್ರಖ್ಯಾತಿ ಕೂಡ ಇತ್ತು. ಆಗಿನ ಕಾಲದಲ್ಲೇ ಮಾಲಾಶ್ರೀ ಅವರ ಹವಾ ಹೇಗಿತ್ತು? ಎಂದು ನಟ ಫ್ರೆಂಡ್ಸ್ ವಾಸು ಕಣ್ಣಾರೆ ಕಂಡಿದ್ದನ್ನು ಇತ್ತೀಚಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
́'ನನ್ನ ಪ್ರಕಾರ ಮಾಲಾಶ್ರೀ ಅವರಿಗೆ ಆಗಲೇ ಅತ್ಯಧಿಕ ಸಂಭಾವನೆ. ನಟಿಯರ ವಿಭಾಗದಲ್ಲಿ ಆಂಧ್ರದಲ್ಲಿ ವಿಜಯ್ ಶಾಂತಿ ಅವರು ಅತಿ ಹೆಚ್ಚು ಸಂಭಾವನೆ ಪಡೀತಿದ್ರು. ಇಲ್ಲಿ ಕರ್ನಾಟಕದಲ್ಲಿ ಮಾಲಾಶ್ರೀ ಅವರೇ ಟಾಪ್ ಅಲ್ಲಿದ್ರು. ಇವರು ಸಂಭಾವನೆಯಲ್ಲಿ ಕನ್ನಡದ ಅಮಿತಾಬ್ ಬಚ್ಚನ್ ಅಂತಿದ್ರು. ಈಗಿನ ಟಾಪ್ ನಟರಾದ ದರ್ಶನ್, ಸುದೀಪ್ ರೇಂಜ್ ಆಗಿನ ಕಾಲಕ್ಕೇ ಮಾಲಾಶ್ರೀ ಅವರಿಗಿತ್ತು' ಎಂದು ಹೆಗ್ಗದ್ದೆ ಸ್ಟುಡಿಯೋ ಸಂದರ್ಶನದಲ್ಲಿ ಆ ದಿನಗಳನ್ನು ವಾಸು ಮೆಲುಕು ಹಾಕಿದ್ದಾರೆ.

ಹೀರೋಗೆ 1 ಲಕ್ಷ, ಮಾಲಾಶ್ರೀಗೆ 10 ಲಕ್ಷ!
'ಹೀರೋಗೆ 1 ಲಕ್ಷ ಸಂಭಾವನೆಯಾದರೆ, ಮಾಲಾಶ್ರೀಯವರ ಸಂಭಾವನೆ 10 ಲಕ್ಷ ರೂ. ಇರುತ್ತಿತ್ತು. ಅವರ ಮುಂದೆ ಹೀರೋಗೆ ವ್ಯಾಲ್ಯೂ ಇರುತ್ತಿರಲಿಲ್ಲ. ಒಂದೇ ದಿನಕ್ಕೆ ನಾಲ್ಕು ಸಿನಿಮಾ ಶೂಟಿಂಗ್ ಮಾಡ್ತಿದ್ರು. ಅದರಲ್ಲಿ ಸಾಯಿಪ್ರಕಾಶ್ ಅವರದ್ದೇ ಮೂರು ಸಿನಿಮಾ ಇರುತ್ತಿತ್ತು. ಮಾಲಾಶ್ರೀ ಅವರೊಂದಿಗೆ ಸಿನಿಮಾ ಮಾಡಿದ ನಟರಾದ ಸುನಿಲ್, ಶಶಿಕುಮಾರ್ ಅವರಿಗೂ ಸಂಭಾವನೆ ಒಂದೇ ಲಕ್ಷ. ಅವರು ಇನ್ನೂ ಎಲ್ಲೋ ಬೇರೆ ಲೆವೆಲ್‌ನಲ್ಲಿ ಇರಬೇಕಿತ್ತು' ಎಂದಿದ್ದಾರೆ ವಾಸು.
ಈಗಿನ ರಾಜಕೀಯವೇ ಹೊಲಸು!
'ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಅಥವಾ ಬೇರೆ ಉನ್ನತ ಹುದ್ದೆಗಳನ್ನು ಸರ್ಕಾರ ಕೊಡಬೇಕಿತ್ತು. ಅವರು ಕನ್ನಡಕ್ಕೆ ಅಷ್ಟು ಕೊಡುಗೆ ನೀಡಿದ್ದಾರೆ. ಆದರೆ ನಮ್ಮವರು ಯಾಕೋ ಅಂತವರನ್ನು ಗುರುತಿಸುವುದೇ ಇಲ್ಲ. ಬೇರೆ ಯಾರಿಗೋ ಕೊಡ್ತಾರೆ. ರಾಮಾಚಾರಿ ಸಿನಿಮಾದಲ್ಲಿ ಮಾಲಾಶ್ರೀ ಅವರ ನಟನೆಗೇ ಅವರಿಗೇ ಏನೇನೋ ಕೊಡಬೇಕಿತ್ತು. ಕನಿಷ್ಠ ರಾಜ್ಯಸಭಾ ಮೆಂಬರ್ ಮಾಡಬೇಕು. ಇಲ್ಲಿ ನಿಯತ್ತಿಗೆ ಬೆಲೆ ಇಲ್ಲ. ಅದಕ್ಕೆ ರಾಜಕೀಯ ಅಂದ್ರೆ ನನಗೆ ಇಷ್ಟ ಆಗಲ್ಲ. ರಾಜಕೀಯವೇ ಹೊಲಸು, ಕಚಡಾ ಆಗೋಗಿದೆ. ನಿಯತ್ತಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲವಾಗಿದೆ' ಎಂದು ಬೇಸರ ಹಂಚಿಕೊಂಡಿದ್ದಾರೆ.
'ಸಿನಿಮಾ ಶೂಟಿಂಗ್‌ನಲ್ಲಿ ಅವರು ಬ್ಯುಸಿ ಇರ್ತಿದ್ರು. ಮಾಲಾಶ್ರೀ ಮೇಡಂ ಇದ್ರೆ ಆ ಸಿನಿಮಾ ಓಡೋದು ಫಿಕ್ಸ್. ಆಗೆಲ್ಲ ಸಿನಿಮಾ ಅಂದ್ರೆ ಹಾಗಿತ್ತು. ಅಂದಿನ ಒಂದು ಸಿನಿಮಾ ಖರ್ಚು ಇವತ್ತು ಒಂದೇ ದಿನಕ್ಕೆ ಖರ್ಚಾಗುತ್ತೆ. ನಾನು ಕೂಡ ಆಗ 30 ದಿನಗಳಲ್ಲಿ ಒಂದು ಸಿನಿಮಾ ಮುಗಿಸುತ್ತಿದ್ದೆ. ಸಾಯಿ ಪ್ರಕಾಶ್ ಅವರು 18 ದಿನದಲ್ಲಿ ಸಿನಿಮಾ ಮಾಡಿ ಸೂಪರ್ ಹಿಟ್ ಆಗಿತ್ತು. ಆಗಿನ ಚಿತ್ರರಂಗವೇ ಹಾಗಿತ್ತು' ಎಂದು ನೆನೆದಿದ್ದಾರೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications