Rudra Master: ರುದ್ರ ಮಾಸ್ಟರ್ ಮದುವೆಗೆ ಗ್ರೀನ್ ಸಿಗ್ನಲ್: ಹುಡುಗಿ ಯಾರು..?
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಅಂತಿಮ ಹಂತದತ್ತ ಸಾಗುತ್ತಿದೆ. ಕಪ್ ಗೆಲ್ಲಲು ಸ್ಪರ್ಧಿಗಳ ಹಣಾಹಣಿ ಜೋರಾಗಿದ್ದು, ಒಬ್ಬರಿಗಿಂತ ಒಬ್ಬರು ಸಖತ್ ಆಗಿ ಡಾನ್ಸ್ ಮಾಡುತ್ತಿದ್ದು, ಪ್ರೇಕ್ಷಕರು ಕಣ್ಣು ಮಿಟುಕಿಸದೇ ಶೋ ವೀಕ್ಷಿಸುವಂತೆ ಮಾಡುತ್ತಿದ್ದಾರೆ. ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಡಾನ್ಸ್ ಜೊತೆಗೆ ಮನೋರಂಜನೆಯೂ ಜೋರಾಗಿದೆ.
ಒಂದೆಡೆ ಗಿಲ್ಲಿ ನಟನ ಡಾನ್ಸ್ ಹಾಗೂ ಪ್ರಾಪರ್ಟಿ ಕಾಮಿಡಿ ಶೋನಾ ಟಾಪ್ ಮೂಮೆಂಟ್ ಆದರೆ ಇನ್ನೊಂದೆಡೆ ನೃತ್ಯ ಸಂಯೋಜಕ ರುದ್ರ ಮಾಸ್ಟರ್ ಹಾಗೂ ಕೆಂಡ ಸಂಪಿಗೆ ಧಾರಾವಾಹಿ ನಟಿ ಕಾವ್ಯಾ ಅವರ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯದ್ದೇ ಸದ್ದಾಗಿದ್ದು, ಈ ಜೋಡಿ ನಡುವೆ ಏನೋ ಇದೆ ಎನ್ನುವ ಪ್ರೇಕ್ಷಕರನ್ನು ಕಾಡುತ್ತಿದೆ. ಈ ಬಗ್ಗೆ ಆ್ಯಂಕರ್ ಅನುಶ್ರೀ ವೇದಿಕೆ ಮೇಲೆಯೇ ನೇರವಾಗಿ ಪ್ರಶ್ನಿಸಿದ್ದಾರೆ.

ಈ ಹಿಂದೆ ಕಾವ್ಯ, ರುದ್ರ ಮಾಸ್ಟರ್‌ಗೆ ಪತ್ರವೊಂದನ್ನು ಬರೆದಿದ್ದರು, ಅಲ್ಲದೇ ಮೊದಲ ಬಾರಿಗೆ ತಾವು ಪತ್ರ ಬರೆದಿರುವುದಾಗಿ ವೇದಿಕೆ ಮೇಲೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರದು ಕ್ಯೂಟ್ ಜೋಡಿ, ಸೂಪರ್ ಜೋಡಿ ಎಂದು ಅನೇಕರು ಕಮೆಂಟ್ ಹಾಕಿರುವ ವಿಡಿಯೋವನ್ನು ವೇದಿಕೆ ಮೇಲೆ ತೋರಿಸಲಾಗಿದೆ.
ಅಲ್ಲದೇ ನಿಮಗೆ ಯಾಕೆ ನನ್ನ ಮೇಲೆ ಅಷ್ಟೆಲ್ಲಾ ಇಂಟ್ರಸ್ಟ್. ಇದೆಲ್ಲಾ ಅಭಿಮಾನವೇ? ಅಥವಾ ಅನುರಾಗವೇ? ಎನ್ನುವ ಕಾವ್ಯ ಪ್ರಶ್ನೆಗೆ ರುದ್ರ ಮಾಸ್ಟರ್ ಅನುಕಂಪ ಎಂದು ಉತ್ತರಿಸಿರುವ ವಿಡಿಯೋ ಕೂಡ ಪ್ಲೇ ಮಾಡಲಾಗಿದೆ. ಈ ವೇಳೆ ರುದ್ರ ಮಾಸ್ಟರ್‌ಗೆ ಈ ವಿಡಿಯೋ ನೋಡಿ ಏನು ಅನಿಸಿತು ಅಂತಾ ಕೇಳಿದಾಗ, ಇದೆಲ್ಲಾ ನನಗೆ ಹೊಸತಲ್ಲ, ಇಂತದೆಲ್ಲಾ ನಡೆಯುತ್ತಿರುತ್ತದೆ, ನೋಡುತ್ತೇನೆ, ಖುಷಿಯಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕಾವ್ಯ ಕೂಡ ಮಾತನಾಡಿದ್ದು, ನಮ್ಮ ಫ್ಯಾಮಿಲಿಗೆ ಗೊತ್ತು ಇದೆಲ್ಲಾ ತಮಾಷೆಗೆ ಮಾಡಿರುವುದು ಅಂತಾ. ಅಲ್ಲದೇ ನಾನು ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಇದೆಲ್ಲಾ ಜಸ್ಟ್ ತಮಾಷೆಗಾಗಿ ಅಂತಾ ಸಹ ಸ್ಪಷ್ಟನೆಕೊಟ್ಟಿದ್ದೇನೆ ಎಂದು ಸಹ ಹೇಳಿದ್ದಾರೆ.
ಈ ವೇಳೆ ರುದ್ರ ಅವರ ತಂದೆ ತಾಯಿ ಕೂಡ ವೇದಿಕೆ ಮೇಲೆ ಬಂದಿದ್ದು, ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪರಿಚಯದವರೆಲ್ಲಾ ಹೋದ ಸಲ ಎಲ್ಲಾ ಬೃಂದಾನ ಮದುವೆ ಮಾಡಿಕೊಳ್ಳುತ್ತೀರಾ ಅಂತಾ ಕೇಳುತ್ತಿದ್ದರು, ಈ ಸಲ ಕಾವ್ಯನಾ ಕೇಳುತ್ತಿದ್ದಾರೆ. ಇದನೆಲ್ಲಾ ನೋಡಿ ಖುಷಿ ಆಗುತ್ತದೆ ಎಂದು ಜೋರಾಗಿ ನಕ್ಕಿದ್ದಾರೆ.
ಅಲ್ಲದೇ ಮಗನ ಮದುವೆ ಮಾಡಬೇಕು ಎನ್ನುವ ಆಸೆ ತುಂಬಾ ಇದೆ. ಮೂರು ವರ್ಷದಿಂದ ಕೇಳುತ್ತಿದ್ದೇವೆ. ಏನೋ ಸಾಧಿಸಬೇಕು ಬೇಡ ಬೇಡ ಎನ್ನುತ್ತಿದ್ದ. ಈಗ ಆರು ತಿಂಗಳ ಹಿಂದೆ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ ಈಗ ನೋಡುತ್ತಿದ್ದೇವೆ ಎಂದು ರುದ್ರ ಮಾಸ್ಟರ್ ತಾಯಿ ಹೇಳಿದ್ದು, ಇದೆಲ್ಲಾ ಮಾಡಿರುವುದು ತಮಾಷೆಗಾಗಿ ಎಂದು ಆ್ಯಂಕರ್ ಅನುಶ್ರೀ ವೇದಿಕೆ ಮೇಲೆ ಸ್ಪಷ್ಟನೆ ಕೊಟ್ಟಿದ್ದಾರೆ.












Click it and Unblock the Notifications