Daali Dhananjaya: 500ಕ್ಕೂ ಹೆಚ್ಚು ಡೆಲಿವರಿ ಮಾಡ್ಸಿದ್ದಾರಂತೆ ಧನ್ಯತಾ- ಡಾಲಿ ಬಗ್ಗೆ ಮನ ಬಿಚ್ಚಿ ಮಾತನಾಡಿದ ಭಾವಿ ಪತ್ನಿ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ವೈದ್ಯೆಯಾಗಿರುವ ಧನ್ಯತಾ ಇಬ್ಬರೂ ಮದುವೆ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ಡಾಲಿ ಪ್ರೀವೆಡ್ಡಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಬಳಿಕ ಡಾಲಿ ಮದುವೆಯಾಗುವ ಹುಡುಗಿ ಯಾರು ಎನ್ನುವ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದವು. ಇದಕ್ಕೆ ಇಂದು ಈ ಜೋಡಿ ಉತ್ತರ ನೀಡಿದೆ.

ನಟ ಡಾಲಿ ಧನಂಜಯ್ ಹಾಗೂ ಅವರ ಭಾವಿ ಪತ್ನಿ ಧನ್ಯತಾ ಇಂದು ಸುದ್ದಿಗಾರರ ಮುಂದೆ ಪರಸ್ಪರ ಮದುವೆ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು. ಧನ್ಯತಾ ಹಾಗೂ ಡಾಲಿ ಧನಂಜಯ್ ಅವರು ಭೇಟಿ ಮಾಡಿದ್ದು ಯಾವಾಗ? ಹೇಗೆ ಪರಿಚಯ ಆಯ್ತು? ಯಾಕೆ ಇಷ್ಟ ಆಯ್ತು? ಇಬ್ಬರದ್ದೂ ಬೇರೆ ಬೇರೆ ವೃತ್ತಿ ಆದರೂ ಕೂಡ ಇಬ್ಬರು ಇಷ್ಟಪಟ್ಟಿದ್ದು ಹೇಗೆ? ಎಲ್ಲವನ್ನೂ ಈ ಜೋಡಿ ಇಂದು ಹಂಚಿಕೊಂಡಿದೆ. ಹಾಗಾದರೆ ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ?

daali dhananjaya wife dr dhanyatha a gynecologist has delivered more than 500 babies

ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ?

ಡಾಲಿ ಧನಂಜಯ್ ಅವರ ಭಾವಿ ಪತ್ನಿ ಧನ್ಯತಾ ಅವರು ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಅವರು ಡಾಲಿ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು. ಡಾಲಿ ತಮಗೆ ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಧನ್ಯತಾ ಹೇಳಿಕೊಂಡಿದ್ದಾರೆ. ಧನ್ಯತಾ ಡಾಲಿ ಧನಂಜಯ್ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರಂತೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಕುಟುಂಬಸ್ಥರಿಗೆ ಹತ್ತಿರವಾಗಿದೆ. ಬಳಿಕ ಪೋಷಕರು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿ ಮದುವೆಗೆ ಒಪ್ಪಿದ್ದಾರೆ. ಹಾಗಾದರೆ ಇವರಿಬ್ಬರು ಮೊದಲು ಭೇಟಿ ಮಾಡಿದ್ದು ಎಲ್ಲಿ?

ಧನ್ಯತಾ ಧನಂಜಯ್ ಭೇಟಿ ಮಾಡಿದ್ದು ಎಲ್ಲಿ?

ಧನ್ಯತಾ ಹಾಗೂ ಧನಂಜಯ್ ಇಬ್ಬರದ್ದು ಕೂಡ ಬೇರೆ ಬೇರೆ ವೃತ್ತಿ. ಧನ್ಯತಾ ವೈದ್ಯೆಯಾದರೆ ಧನಂಜಯ್ ನಟ. ಆದರೂ ಕೂಡ ಇಬ್ಬರೂ ಮೆಚ್ಚಿಕೊಂಡಿದ್ದಾರೆ. ಇವರಿಬ್ಬರ ಪೋಷಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ಅವರಿಬ್ಬರ ಪರಿಚಯವಾಗಿದೆ. ಇಬ್ಬರ ಪೋಷಕರು ಪರಿಚಯವಾದ ನಂತರ ಈ ಜೋಡಿ ಸ್ನೇಹ ಮಾಡಿಕೊಂಡಿದೆ. ಮೊದಲು ಸ್ನೇಹಿತರಾಗಿದ್ದ ಇವರಿಬ್ಬರೂ ನಂತರ ಇಬ್ಬರ ವೃತ್ತಿಯನ್ನು ಗೌರವಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

daali dhananjaya wife dr dhanyatha a gynecologist has delivered more than 500 babies

ಡಾಲಿಗೆ ಧನ್ಯತಾ ಇಷ್ಟ ಆಗಿದ್ದು ಯಾಕೆ?

ಇನ್ನೂ ಧನ್ಯಾತಾ ಅವರು ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಕೂಡ ಧನಂಜಯ್ ಹೇಳಿಕೊಂಡಿದ್ದಾರೆ. ನನಗೆ ಧನ್ಯತಾ ಇಷ್ಟ ಆಗಿದ್ದು ಅವರು ಯಾವಾಗಲೂ ಸಮಾಜ ಸೇವೆಯಲ್ಲಿ ನಿರತರಾಗಿರುತ್ತಾರೆ. ಯಾವಾಗಲೂ ಅಲ್ಲಿ ಕ್ಯಾಂಪ್ ಇಲ್ಲಿ ಕ್ಯಾಂಪ್ ಮಾಡ್ತಾಯಿದ್ದೇನೆ ಅಂತಲೇ ಹೋಳುತ್ತಲೇ ಇರುತ್ತಾರೆ. ಅದು ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ. ನಾನು ಬ್ಯೂಸಿ ಇದ್ದಾಗ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಅವರದ್ದೂ ಬ್ಯೂಸಿ ಪ್ರೋಫೇಷನ್ ಅದು ನನಗೂ ಅರ್ಥ ಆಗುತ್ತೆ. ಹೊಂದಿಕೊಂಡು ಹೋಗಲು ಇಷ್ಟು ಸಾಕು ಎಂದಿದ್ದಾರೆ.

ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಕೂಡ ಸಾಮಾನ್ಯ ಕುಟುಂಬದಿಂದ ಬಂದವರು. ಕೆಲವೊಮ್ಮೆ ಜನ ಜೈ ಕಾರ ಹಾಕಿದಾಗ ಈ ವಿಚಾರವನ್ನು ನಾವು ಮರೆಯೋದು ಸಹಜ. ಆದರೆ ನಾವು ಸಾಮಾನ್ಯ ವರ್ಗದಿಂದ ಬಂದವರು ಎನ್ನುವುದನ್ನು ಆಗಾಗ ಧನ್ಯತಾ ಎಚ್ಚರಿಸುತ್ತಿರುತ್ತಾರೆ. ಈ ಗುಣ ನನಗೆ ಇಷ್ಟ ಆಯ್ತು ಎಂದು ಡಾಲಿ ಹೇಳಿದ್ದಾರೆ.

ಧನ್ಯತಾ ಧನಂಜಯ್ ಮದುವೆ ಹೇಗಿರುತ್ತೆ?

ಜನ ಹೆಚ್ಚು ಸೇರುತ್ತಾರೆ ಅನ್ನೋ ಕಾರಣಕ್ಕೆ ಮದುವೆಯಲ್ಲಿ ಸೆಟ್ ಕ್ರಿಯೇಟ್ ಮಾಡಿಸುತ್ತಿದ್ದಾರಂತೆ ಡಾಲಿ. ಆ ಸೆಟ್‌ ಅನ್ನು ಅರುಣ್ ಸಾಗರ್‌ ಅವರು ಹಾಕುತ್ತಿದ್ದಾರೆ. ಸೆಟ್ ಹಾಕುವವರು ಎಲ್ಲರೂ ಸಿನಿಮಾದವರೇ. ನಾವು ಸರಳವಾಗಿ ಮದುವೆ ಆಗುತ್ತೇವೆ ಅಷ್ಟೆ. ಎಷ್ಟು ಜನ ಇರ್ತಾರೋ ಗೊತ್ತಿಲ್ಲ. ಜನ ಇದ್ದಷ್ಟು ಖರ್ಚು ಬರುತ್ತದೆ ಎಂದು ಡಾಲಿ ಹೇಳಿದ್ದಾರೆ.

ಸಿನಿಮಾ, ಸ್ನೇಹಿತರು ಕುಟುಂಬಸ್ಥರ ಬಳಗ ದೊಡ್ಡದಿದೆ. ವಿದೇಶದಿಂದಲೂ ಬಳಗದವರು ಬರುತ್ತಾರೆ. ಸಿಂಪಲ್ಲಾಗಿ ರಿಜಿಸ್ಟರ್ ಮ್ಯಾರೇಜ್ ಆಗೋಣ ಅಂತ ಅಂದುಕೊಂಡಿದ್ದೆ. ಸಿನಿಮಾ, ಅಭಿಮಾನಿಗಳು ಎಲ್ಲರೂ ಕೂಡ ನೆನಪು ಮಾಡಿಕೊಂಡು ಈ ಮದುವೆಯನ್ನು ದೊಡ್ಡದಾಗಿ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ ಅದ್ಧೂರಿ ಮದುವೆ ಅಲ್ಲ ಎಂದು ಧನಂಜಯ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+