'ಇವರ ಕೆಲಸನೇ ಕೇಸ್ ಹಾಕೋದು': ಪೊಲೀಸ್ ಠಾಣೆಗೆ ಬಂದ ರಕ್ಷಿತ್ ಶೆಟ್ಟಿ ಗರಂ ಆಗಿದ್ದು ಯಾರ ಮೇಲೆ..?
ಬೆಂಗಳೂರು, ಆಗಸ್ಟ್ 02: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ 'ಗಾಳಿಮಾತು' ಹಾಗೂ 'ನ್ಯಾಯ ಎಲ್ಲಿದೆ' ಎಂಬ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿರುವ ಆರೋಪದ ಮೇಲೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಃ ಸ್ಟುಡಿಯೋಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಯಶವಂತಪುರ ಪೋಲಿಸ್ ಠಾಣೆಯಲ್ಲಿ ನಟ ರಕ್ಷಿತ್ ಶೆಟ್ಟಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನವರಿಯಲ್ಲಿ ಬ್ಯಾಚುಲರ್ ಪಾರ್ಟಿ ಅಂತಾ ಸಿನಿಮಾ ರಿಲೀಸ್ ಆಗಿತ್ತು. ಪರಂವಾಃ ಸ್ಟುಡಿಯೋಸ್‌ಯಿಂದ ನಾವು ಪ್ರೊಡ್ಯೂಸ್ ಮಾಡಿದ್ದೇವು. ಅದರಲ್ಲಿ ನಾವು ಮೂರ್ನಾಲ್ಕು ಹಳೆ ಹಾಡುಗಳನ್ನು ಬಳಸಿಕೊಂಡಿದ್ದೇವೆ.

ಕನ್ನಡ ಹಾಡುಗಳೇ ಅದನ್ನು ನಾವು ಬ್ಯಾಂಗ್ರೌಂಡ್ ಅಲ್ಲಿ ಬಳಸಿಕೊಳ್ಳುವಂತಹ ಪರಿಸ್ಥಿತಿ ಇತ್ತು. ಹೀಗಾಗಿ ಸರಿಗಮದಿಂದ ಒಂದು ಎರಡು ಹಾಡು ಇತ್ತು. ಅದನ್ನು ನಾವು ಸರಿಗಮ ಅವರ ಬಳಿ ಹೋಗಿ ಕೇಳಿದೆವು. ಅವರು ಇತ್ತೊಂದೊಂದು ಮೊತ್ತ ಕೊಡಬೇಕು ಅಂದರು. ನಾವು ಸರಿ ಒಕೆ ಅಂದು ಆ ಹಾಡುಗಳನ್ನು ತೆಗೆದುಕೊಂಡೆವು.
ಆಮೇಲೆ ಇನ್ನೆರಡು ಹಾಡುಗಳನ್ನು ಬಳಸಿಕೊಂಡಿದ್ದೇವೆ. ಕಾಪಿ ರೈಟ್ ವೈಲೇಷನ್ ಅಲ್ಲ, ಆದರೂ ಯಾವುದಕ್ಕೂ ಅನುಮತಿ ತೆಗೆದುಕೊಳ್ಳಿ ಅಂತಾ ಹೇಳಿದ್ದೆ. ಪ್ರೊಡಕ್ಷನ್ ಮ್ಯಾನೆಜರ್ ಫೋನ್ ಮಾಡಿದಾಗ ಅವರು ದೊಡ್ಡ ಮೊತ್ತ ಹೇಳಿದ್ದಾರೆ. ಅದು ಕಾಪಿ ರೈಟ್ ವೈಲೇಷನ್ ಅಲ್ಲ, ಹೀಗಿರುವ ಅಷ್ಟು ದೊಡ್ಡ ಮೊತ್ತ ನಮಗೆ ಸರಿ ಅನಿಸಲಿಲ್ಲ. ಮತ್ತೆ ಎರಡು ಮೂರು ಸಲ ಮಾತು ಕತೆಯಾಗಿದೆ. ನಿಮಗೆ ಹೇಳುತ್ತೇವೆ ಅಂತಾ ಹೇಳಿ ಅವರು ವಾಪಸ್ ಬರಲೇ ಇಲ್ಲ.

ಅಷ್ಟರಲ್ಲಿ ನಮ್ಮ ಸಿನಿಮಾ ರಿಲೀಸ್‌ಗೆ ಹತ್ತಿರ ಬರುತ್ತಿತ್ತು. ಹೀಗಾಗಿ ಬಿಡುಗಡೆ ಮಾಡಿದೆವು. ಮೂನಾಲ್ಕು ತಿಂಗಳ ನಂತರ ಇವರು ಸಿನಿಮಾದ ಮೇಲೆ ಕೇಸ್ ಹಾಕಿದ್ದಾರೆ. ಒಂದು ಹಾಡು ಆರು ಸೆಕೆಂಡ್ ಟಿವಿಯಲ್ಲಿ ಬರುತ್ತದೆ. ಇನ್ನೊಂದು ಹಾಡು ಬಳಸಿಕೊಂಡಿದ್ದೇವೆ. ಇದು ಎರಡೂ ಕಾಪಿ ರೈಟ್ ವೈಲೇಷನ್ ಅಲ್ಲ ಎನ್ನುವುದು ನನ್ನ ವಾದ. ಈ ರೀತಿಯ ಮೂರ್ನಾಲ್ಕು ಮ್ಯೂಸಿಕ್ ಕಂಪನಿಗಳಿವೆ. ಇವರ ಕೆಲಸನೇ ಸಿನಿಮಾ ಬಿಡುಗಡೆಯಾದ ಕೂಡಲೇ ಎಲ್ಲೆಲ್ಲಿ ನಾವು ಕೇಸ್ ಹಾಕಬಹುದು ಅಂತಾ' ಎಂದು ಪ್ರಕರಣ ದಾಖಲಿಸಿದವರ ಮೇಲೆ ನಟ ರಕ್ಷಿತ್ ಶೆಟ್ಟಿ ಗರಂ ಆಗಿದ್ದಾರೆ.












Click it and Unblock the Notifications