ಸಿನಿಮಾಗೆ ಹಣ ಹಾಕ್ತೀನಿ, ನನ್‌ ಜೊತೆ ರಿಲೇಷನ್‌ಶಿಪ್‌ನಲ್ಲಿರು: ಖ್ಯಾತ ನಟಿ ಹೀಗಂದ್ರಾ?

ಕನ್ನಡದ ಹಲವು ಸಿನಿಮಾಗಳು ಹಾಗೂ ಸೀರಿಯಲ್‌ಗಳಲ್ಲಿ ನಟಿಸಿರುವ ಖ್ಯಾತ ನಟಿಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಿರ್ದೇಶಕರೊಬ್ಬರು ನಟಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಪೋಷಕ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟಿ ಶಶಿಕಲಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ನಿರ್ದೇಶಕ ಹರ್ಷವರ್ಧನ್‌ ಎಂಬುವವರು ಈ ಆರೋಪ ಮಾಡಿದ್ದು, ಶಶಿಕಲಾ ತಮಗೆ ಬೆದರಿಕೆ ಹಾಕಿ ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆ ನಟಿ ಕೂಡ ಹರ್ಷವರ್ಧನ್‌ ವಿರುದ್ಧ ದೂರು ನೀಡಿದ್ದ ಹಿನ್ನೆಲೆ ಜೈಲು ಸೇರಿದ್ದರು. ಆದರೆ ಈಗ ನಿರ್ದೇಶಕನೇ ನಟಿಯ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

Complaint Filed Against Kannada Actress Shashikala By Director

ನಿರ್ದೇಶಕ ಹರ್ಷವರ್ಧನ್ ಅವರ ಸಿನಿಮಾವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಶೂಟಿಂಗ್‌ ವೇಳೆ ಶಶಿಕಲಾ ಅವರ ಪರಿಚಯವಾಗಿ ನಂಬರ್ ಪಡೆದಿದ್ದರು. ಬಳಿಕ ಸಿನಿಮಾಗೆ ಬಂಡವಾಳ ಹಾಕುತ್ತೇನೆ ಎಂದು ನಂಬಿಸಿ, ತನ್ನೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವಂತೆ ಒತ್ತಾಯಿಸಿದ್ದರು. ಸಿನಿಮಾಗಾಗಿ ನಿರ್ದೇಶಕ ಕೂಡ ಆ ಒಪ್ಪಂದಕ್ಕೆ ಒಪ್ಪಿದ್ದರು ಎನ್ನಲಾಗಿದೆ.

ಅಲ್ಲದೆ ನೀವು ಸಿನಿಮಾಗೆ ಹಣ ಹಾಕುತ್ತೀರಿ ಎಂಬ ಕಾರಣಕ್ಕಷ್ಟೇ ನಿಮ್ಮೊಂದಿಗೆ ಸಂಬಂಧ ಬೆಳೆಸಲು ಒಪ್ಪಿದ್ದೇನೆ, ಆದರೆ ಯಾವ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಕಂಡೀಷನ್‌ ಹಾಕಿದ್ದರಂತೆ. ಇದಕ್ಕೂ ನಟಿ ಒಪ್ಪಿಕೊಂಡು ಬಳಿಕ ತನ್ನನ್ನು ಮದುವೆಯಾಗುವಂತೆ ಕಿರುಕುಳ ನೀಡಿದ್ದಾರೆ ಎಂದು ಹರ್ಷವರ್ಧನ್‌ ಆರೋಪಿಸಿದ್ದಾರೆ.

ಮದುವೆಯಾಗದಿದ್ದರೆ ಇಬ್ಬರ ನಡುವೆ ಫೋನಿನಲ್ಲಿ ನಡೆದ ಖಾಸಗಿ ಸಂಭಾಷಣೆ ರೆಕಾರ್ಡಿಂಗ್‌ ಇರುವುದಾಗಿ ಬೆದರಿಸುತ್ತಿದ್ದಾರೆ. ನಾನು ಮದುವೆ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ಕಚೇರಿಗೆ ಬಂದು ಬೆದರಿಕೆ ಹಾಕಿದ್ದರು. ಆಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೊನೆಗೆ ನನ್ನ ವಿರುದ್ಧ ಸುಳ್ಳು ಕೇಸ್‌ ಹಾಕಿಸಿ ಜೈಲಿಗೆ ಕಳಿಸಿದ್ದರು ಎಂದಿದ್ದಾರೆ.

Complaint Filed Against Kannada Actress Shashikala By Director

ಜೈಲಿನಿಂದ ಬಂದ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೆರಿಯರ್‌ ಹಾಳಾಗುತ್ತೆ ಎಂದು ಹಲವರು ನೀಡಿದ ಸಲಹೆ ಮೇರೆಗೆ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಇಬ್ಬರು ಕೂಡ ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿಕೊಂಡಿದ್ದಾರೆ. ಮದುವೆ ನಂತರ ಮನೆಗೆ ನಿರ್ಮಾಪಕರು, ನಿರ್ದೇಶಕರು ಬಂದು ಹೋಗುತ್ತಿದ್ದರು. ಅವರು ಬಂದಾಗ ನನ್ನ ಹೊರಗೆ ಕಳಿಸ್ತಿದ್ರು. ಇದೆಲ್ಲ ಸರಿಯಲ್ಲ ಎಂದು ಹೇಳಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಟಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ಕಳೆದ ವರ್ಷ ಕೂಡ ಜಗಳ ಮಾಡಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ಕೊನೆಗೆ ಅವರಿಂದ ದೂರ ಉಳಿದರೂ ನನಗೆ ಬೆದರಿಕೆ ಹಾಕುತ್ತಲೇ ಇದ್ದಾರೆ ಎಂದು ಆರೋಪಿಸಿ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ. ಸದ್ಯ ನಟಿಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಸ್ಯಾಂಡಲ್‌ವುಡ್‌ ಹಾಗೂ ಕನ್ನಡ ಕಿರುತೆರೆಯಲ್ಲಿ ಸಂಚನಲ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+