‘ಪ್ರೇಮ ಬಾಣ ಹೂಡು ಜಾಣ’ ಎಂದ ಕಾಫಿನಾಡು ಚಂದು: ‘ಎಲ್ಲಿದ್ಯಾಪ್ಪ ಕಾಡು..’ ಅಂತಾ ಪ್ರಶ್ನೆ ಕೇಳಿದ್ರು ಜನ!

'ಬರ್ತ್ ಡೇ ಸಿಂಗರ್' ಅಂತಾ ಕರ್ನಾಟಕ ತುಂಬಾ ಖ್ಯಾತಿ ಪಡೆದಿರುವ ಕಾಫಿನಾಡು ಚಂದು ಇದೀಗ ಫುಲ್ ಟೈಂ ಡಾನ್ಸ್ ಮಾಡ್ಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಅದ್ರಲ್ಲೂ ಚಂದು ಹಾಕುವ ಸ್ಟೆಪ್ ಬಗ್ಗೆ ಕೆಲವರು 'ತಿಕ್ಕಲು ತಿಕ್ಕಲು' ಅಂತಾ ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಕಾಫಿನಾಡು ಚಂದು ಪರವಾಗಿ ನಿಲ್ಲುತ್ತಾರೆ. ಅದೇ ರೀತಿ ಇದೀಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಕಾಫಿನಾಡು ಚಂದು ಮಾಡಿದ ಡಾನ್ಸ್ ಬಗ್ಗೆ ಚರ್ಚೆ ಜೋರಾಗಿದೆ!

ಕಾಫಿನಾಡು ಚಂದು ಅವರೆ ಹೇಳುವಂತೆ ಅವರು ಸುಮಾರು 40 ಲಕ್ಷ ಹಾಡುಗಳನ್ನ ಹಾಡಿದ್ದಾರೆ ಅಂತೆ. ಆದ್ರೆ ಇದು ಬರೀ ಓಳು, ಸುಳ್ಳು ಅಂತಾ ಆರೋಪ ಮಾಡುವ ಜನರ ಮಧ್ಯೆ, ಚಂದುಗೆ ಡಾನ್ಸ್ ಮಾಡುವ ಅಭ್ಯಾಸ ಕೂಡ ರೂಢಿಯಾಗಿದೆ. ಅದೇ ರೀತಿ ಈಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಯುವತಿ ಒಬ್ಬರ ಜೊತೆ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಹಾಗೇ ಚಂದು ಡಾನ್ಸ್ ಬಗ್ಗೆ ಇದೀಗ ಡಿಸೈನ್ ಡಿಸೈನ್ ಕಮೆಂಟ್‌ಗಳು ಬರುತ್ತಿವೆ. ಜೊತೆಗೆ ಈ ಕುರಿತು ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಕಾಫಿನಾಡು ಚಂದು ಡಾನ್ಸ್ ಮಾಡಿರುವ ವಿಡಿಯೋ ನೋಡಲು ಮುಂದಕ್ಕೆ ಓದಿ.

Coffee Nadu Chandu New Dance Is Getting Viral On Social Media

ಶಿವಣ್ಣ ಸಿನಿಮಾ ಹಾಡಿಗೆ ಚಂದು ಡಾನ್ಸ್!

2003ರಲ್ಲಿ ರಿಲೀಸ್ ಆಗಿದ್ದ ಡಾ. ಶಿವರಾಜ್‌ಕುಮಾರ್ ಅಭಿನಯದ 'ಶ್ರೀರಾಮ್' ಸಿನಿಮಾದ ಹಾಡು 'ಪ್ರೇಮ ಬಾಣ ಹೂಡು ಜಾಣ' ಫುಲ್ ಫೇಮಸ್. ಅದರಲ್ಲೂ ಈ ಹಾಡನ್ನ ಕನ್ನಡ ನಾಡಿನ ಜನರು ತುಂಬಾ ಮೆಚ್ಚಿಕೊಂಡಿದ್ದರು. ಈಗಲೂ ಈ ಹಾಡು ಅಂದ್ರೆ ಜನರಿಗೆ ಸಖತ್ ಇಷ್ಟವಾಗುತ್ತಿದೆ. ಇದೀಗ ಇದೇ ಹಾಡಿಗೆ ಕಾಫಿನಾಡು ಚಂದು ಡಾನ್ಸ್ ಮಾಡಿದ್ದು, ವೆರೈಟಿ ವೆರೈಟಿ ಕಮೆಂಟ್ಸ್ ಬರುತ್ತಿವೆ.

ಫುಲ್ ಫೇಮಸ್ ಕಾಫಿನಾಡು ಚಂದು!

ಕಾಫಿನಾಡು ಚಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಡು ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಕಾಫಿನಾಡು ಚಂದು ಕೆಟ್ಟದಾಗಿ ಹಾಡುತ್ತಾರೆ ಆತನಿಗೆ ಹಾಡೋದಕ್ಕೆ ಬರೋದಿಲ್ಲ ಅಂತಾ ಕೆಲವರು ಹೇಳಿದರೆ. ಇನ್ನೂ ಹಲವು ಜನ ಚಂದು ಅವರ ಹಾಡು ಕೇಳಿ, ಭೇಷ್ ಭೇಷ್ ಅಂತಿದ್ದರು. ಹೀಗೆ ಕಾಫಿನಾಡು ಚಂದು ಎರಡೂ ಬಣಗಳಿಗೆ ಬೇಕಾದ ಹಾಡುಗಾರ ಆಗಿ ಬೆಳೆದು, ಸದ್ದು ಮಾಡಿದ್ದು ಉಂಟು. ಆದರೆ ಕೆಲ ತಿಂಗಳು ಮರೆಯಾಗಿದ್ದ ಈ ಸೋಷಿಯಲ್ ಮೀಡಿಯಾ ಸ್ಟಾರ್‌ಗೆ, ಈಗ ಹಾಡು ಹಾಡುವ ಹುಚ್ಚು ಇಲ್ಲ. ಬದಲಾಗಿ ಸಿಕ್ಕಾಪಟ್ಟೆ ಡಾನ್ಸ್ ಮಾಡುತ್ತಿದ್ದಾರೆ ಕಾಫಿನಾಡು ಚಂದು.

ಬೇರೆ ಬೇರೆ ಹಾಡಿಗೂ ಡಾನ್ಸ್!

ಕಾಫಿನಾಡು ಚಂದು ಈಗ 'ಪ್ರೇಮ ಬಾಣ ಹೂಡು ಜಾಣ' ಹಾಡಿಗೆ ಡಾನ್ಸ್ ಮಾಡಿದ ರೀತಿಯೇ, ಕನ್ನಡದ ಅನೇಕ ಹಾಡು & ಸಂಗೀತಕ್ಕೆ ಕುಣಿದಿದ್ದಾರೆ ಚಂದು. ಇತ್ತೀಚೆಗಷ್ಟೆ ಕರಿಮಣಿ ಮಾಲೀಕ ಹಾಡಿಗೂ ಹೀಗೆ ಚಂದು ಡಾನ್ಸ್ ಮಾಡಿದ್ದು ವೈರಲ್ ಆಗಿತ್ತು. ಜನರು ಕೂಡ, ವೆರೈಟಿ ವೆರೈಟಿ ಕಮೆಂಟ್‌ನ ಮಾಡುತ್ತಾ, ಕಾಫಿನಾಡು ಚಂದು ವಿರುದ್ಧ ಗರಂ ಆಗಿದ್ದರು. ಇದರ ಜೊತೆಯಲ್ಲಿ ದಿಢೀರ್ ಹುಲಿ ಕುಣಿತ ಹಾಕಿ ಚರ್ಚೆಗೆ ಗ್ರಾಸವಾಗಿದ್ದರು. ಈಗ ನೋಡಿದ್ರೆ ಮತ್ತೊಂದು ಡಾನ್ಸ್ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+