ಚಂದನ್ ಶೆಟ್ಟಿ ದಾಂಪತ್ಯ ಮುರಿದದ್ದು ಮೂರನೇ ವ್ಯಕ್ತಿ! ನಿವೇದಿತಾ ಗೌಡ ಎರಡನೇ ಮದುವೆ ಬಗ್ಗೆ ಹೇಳಿದ್ದೇನು?
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ಪ್ರೀತಿಸಿ ಮದುವೆಯಾಗಿ ಅನ್ಯೋನ್ಯವಾಗಿದ್ದ ಈ ಜೋಡಿ ಬೇರೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು.
ಒಬ್ಬರ ಮೇಲೆ ಒಬ್ಬರು ಆರೋಪ ಮಾಡದೇ ಇಬ್ಬರೂ ಜೊತೆಯಲ್ಲೇ ಬಂದು ವಿಚ್ಛೇದನ ಪಡೆಯುವ ಮೂಲಕ ಗೌರವಯುತವಾಗಿಯೇ ಬೇರೆಯಾದರು. ಸಾಮರಸ್ಯ ಇಲ್ಲದೇ ಇರುವಾಗ ಪರಸ್ಪರ ಗೌರವದಿಂದ ಬೇರೆಯಾಗುವುದು ಹೇಗೆ ಎನ್ನುವುದಕ್ಕೆ ಇವರು ಮಾದರಿಯಾದರು.

ಹೊಂದಾಣಿಕೆ ಕೊರತೆಯಿಂದಾಗಿ ಇಬ್ಬರೂ ಬೇರೆಯಾಗುತ್ತಿರುವುದಾಗಿ ಇಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟಪಡಿಸಿದರೂ, ಇಬ್ಬರ ವಿಚ್ಛೇದನಕ್ಕೆ ಬೇರೆಯದೇ ಕಾರಣಗಳಿವೆ ಎನ್ನುವ ಅನುಮಾಗಳು ವ್ಯಕ್ತವಾಗಿದ್ದವು.
ಮಗು ಪಡೆಯಲು ನಿವೇದಿತಾ ಒಪ್ಪದ ಕಾರಣ ಚಂದನ್ ವಿಚ್ಛೇದನ ಪಡೆದರು ಎನ್ನುವ ಗುಸುಗುಸು ಕೇಳಿಬಂದಿತ್ತು. ನಿವೇದಿತಾ ಗೌಡರ ರೀಲ್ಸ್‌ಗೆ ಬರುವ ಕೆಟ್ಟ ಕಮೆಂಟ್‌ಗಳಿಂದ ಚಂದನ್ ಬೇಸತ್ತಿದ್ದರು ಎಂದು ಕೂಡ ಹೇಳಲಾಯಿತು. ಆದರೆ ಅದೆಲ್ಲವನ್ನೂ ಚಂದನ್ ಅಲ್ಲಗೆಳೆದರು.
ಮೂರನೇ ವ್ಯಕ್ತಿ ಕಾರಣ ಎಂದ ಚಂದನ್
ಸಂದರ್ಶನವೊಂದರಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ನನ್ನ ಮತ್ತು ನಿವೇದಿತಾ ನಡುವೆ ಡಿವೋರ್ಸ್‌ಗೆ ಮೂರನೇ ವ್ಯಕ್ತಿ ಕಾರಣ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ. ಆದರೆ ಮೂರನೇ ವ್ಯಕ್ತಿ ಯಾರು ಎನ್ನುವ ಬಗ್ಗೆ ಎಲ್ಲಿಯೂ ಬಾಯಿ ಬಿಡದ ಅವರು ವೇದಾಂತಿಯಂತೆ ಮಾತನಾಡಿದ್ದಾರೆ.
ಕುಟುಂಬ ಒಡೆಯಲು ಮೂರನೇ ವ್ಯಕ್ತಿ ಕಾರಣವಾಗುತ್ತಾರೆ. ಅವರು ಯಾರು ಎನ್ನುವುದು ಕೆಲವೊಮ್ಮೆ ನಮಗೂ ಗೊತ್ತಿರುವುದಿಲ್ಲ. ಆ ಮೂರನೇ ವ್ಯಕ್ತಿ ನಮ್ಮೊಳಗೂ ಇರಬಹುದು. ಕೆಲವರಿಗೆ ಎರಡೆರಡು ಮುಖಗಳು ಇರಬಹುದು, ಮುಂದೆ ಒಂದು ರೀತಿ ಹಿಂದೆ ಒಂದು ರೀತಿ ಮಾತನಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಎರಡು ವ್ಯಕ್ತಿತ್ವ ಇರುತ್ತವೆ ಎಂದಿದ್ದಾರೆ ಚಂದನ್ ಶೆಟ್ಟಿ, ಅವರ ಗೂಡಾರ್ಥದ ಮಾತು ಕೇಳಿ ಅಭಿಮಾನಿಗಳು ಈಗ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಎರಡನೇ ಮದುವೆ ಬಗ್ಗೆ ಹೇಳಿದ್ದೇನು?
ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ಬಳಿಕ ಮುಂದೇನು, ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿರುವ ಅವರು, ಈಗಿನ್ನೂ ಅದರಿಂದ ಹೊರಗೆ ಬಂದಿದ್ದೇನೆ, ಎರಡನೇ ಮದುವೆ ಬಗ್ಗೆ ಸದ್ಯ ಯೋಚನೆ ಮಾಡಿಲ್ಲ. ಮನಸ್ಸು ಇನ್ನೂ ತಿಳಿಯಾಗಬೇಕಿದೆ. ಅದಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ಯಾರನ್ನು ನಂಬುವುದು ಯಾರನ್ನು ನಂಬಬಾರದು ಎನ್ನುವ ಗೊಂದಲವಿದೆ, 19ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅದಾದ ಮೇಲೆ ಸಿನಿಮಾ ಅಥವಾ ಸಂಗೀತ ಯಾವ ಕ್ಷೇತ್ರದಲ್ಲಿ ಮುಂದುವರೆಯಲಿ ಎಂದು ನಿರ್ಧರಿಸುವುದಾಗಿ ತಿಳಿಸಿದರು.
ನಿವೇದಿತಾ ಗೌಡ ಎರಡನೇ ಮದುವೆಯಾದರೆ ನಿಮ್ಮ ಅಭಿಪ್ರಾಯ ಏನು ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಚಂದನ್ ಶೆಟ್ಟಿ, ಅದಕ್ಕೂ ನನಗೂ ಸಂಬಂಧವಿಲ್ಲ, ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.












Click it and Unblock the Notifications