‘ಕಾಟೇರ’ ಅಬ್ಬರಕ್ಕೆ ದಾಖಲೆಗಳು ತತ್ತರ, ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಬಹುನಿರೀಕ್ಷಿತ ಕನ್ನಡ ಸಿನಿಮಾ 'ಕಾಟೇರ' ನಿನ್ನೆಯಷ್ಟೇ, ನೂರಾರು ಸಿನಿಮಾ ಮಂದಿರಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅದರಲ್ಲೂ 2023 ರ ಅಂತ್ಯಕ್ಕೆ ರಿಲೀಸ್ ಆಗಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಕಾಡಿತ್ತು. ನಿನ್ನೆ ಆ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾ ಪ್ರಿಯರಿಗೆ ಮತ್ತೊಂದು ಅದ್ಭುತ ಮೂವಿ ಕೊಟ್ಟಿದ್ದಾರೆ.
ಹೌದು, ಎಲ್ಲೆಲ್ಲೂ ಕಾಟೇರ ಸಿನಿಮಾ ಸದ್ದು ದೊಡ್ಡದಾಗಿದೆ. ಟಿಕೆಟ್ ಬುಕಿಂಗ್ ಬಗ್ಗೆಯೂ ಸಾಕಷ್ಟು ಹೈಪ್ ಕ್ರಿಯೇಟ್ ಆಗಿತ್ತು. ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯುತ್ತಿದ್ದರು. ಹೀಗೆ ಆರಂಭದ ದಿನವೇ, ನೂರಾರು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದ್ದವು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕವೂ ಸೇರಿ ಹಳೇ ಮೈಸೂರು ಭಾಗದಲ್ಲೂ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಇನ್ನು ರಾಜಧಾನಿ ಬೆಂಗಳೂರಲ್ಲೂ 'ಕಾಟೇರ' ನೋಡಿ ಆನಂದಿಸಿದ್ದಾರೆ ಅಭಿಮಾನಿಗಳು. ಹಾಗಾದರೆ ಸಿನಿಮಾ ಮೊದಲನೇ ದಿನ ಗಳಿಸಿದ್ದು ಎಷ್ಟು ಕೋಟಿ?

ಇಷ್ಟು ಕೋಟಿ ಗಳಿಸಿದೆ 'ಕಾಟೇರ'
ಅಂದಹಾಗೆ 'ಕಾಟೇರ' ಸಿನಿಮಾ ಬಿಡುಗಡೆಯಾದ ಮೊದಲ ದಿನ ಎಷ್ಟು ಗಳಿಸಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಮಾಹಿತಿ ನಿಡಿಲ್ಲ. ಆದ್ರೆ ಈ ಮಧ್ಯೆ ಎಲ್ಲೆಲ್ಲೂ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಭರ್ಜರಿ 10 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಕನ್ನಡಿಗರ ಈ ಸಿನಿಮಾ ಗಳಿಸಿದೆ ಎನ್ನಲಾಗಿದೆ. ಜೊತೆಗೆ ಹೊರ ರಾಜ್ಯದಲ್ಲೂ 'ಕಾಟೇರ'ನ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಈ ಸಿನಿಮಾ ಮತ್ತಷ್ಟು ದಾಖಲೆ ಧೂಳ್ ಮಾಡುವ, ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: 'ಕಾಟೇರ' ಸಿನಿಮಾ ನೋಡಲು ಮೈಸೂರಿನ ಆ ಕಾಲೇಜು ರಜೆ ಘೋಷಿಸಿದ್ದು ನಿಜವೇ?
ಫ್ಯಾನ್ಸ್ ಸಂಭ್ರಮ ಹೇಗಿತ್ತು ಗೊತ್ತಾ?
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಧಾರವಾಡ & ಹುಬ್ಬಳ್ಳಿ ಮತ್ತು ಗಡಿನಾಡ ಜಿಲ್ಲೆಗಳಲ್ಲೂ 'ಕಾಟೇರ' ಸಂಭ್ರಮ ಜೋರಾಗಿದೆ. ಮಾಸ್ ಎಂಟರ್‌ಟೈನ್‌ಮೆಂಟ್‌ನ ಜೊತೆ ಗಟ್ಟಿಯಾದ ಕಥೆಯನ್ನ ಈ ಸಿನಿಮಾ ಒಳಗೊಂಡಿರುವುದು ಫ್ಯಾನ್ಸ್ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ರೈತರ ಕುರಿತಾಗಿ ಈ ಸಿನಿಮಾದಲ್ಲಿ ತೋರಿಸಿದ ಕಂಟೆಂಟ್ ಕೂಡ ಅಭಿಮಾನಿಗಳಿಗೂ ಇಷ್ಟವಾಗಿದೆ. ಹೀಗಾಗಿಯೇ ಕೈಯಲ್ಲಿ ಕರ್ಪೂರ ಹಿಡಿದು ಆಕಾಶದೆತ್ತರ ನಿಂತಿದ್ದ ನಟ ದರ್ಶನ್ ಅವರ ಕಟೌಟ್‌ಗಳಿಗೆ ಫ್ಯಾನ್ಸ್ ಪ್ರೀತಿಯಿಂದ ನಮಿಸಿದರು. ನಿನ್ನೆ ಎಲ್ಲೆಲ್ಲೂ ಇದೇ ಸಂಭ್ರಮ, ಸಡಗರ ಕಂಡುಬಂತು.
ಸಾಲು ಸಾಲು ರಜೆಯ ಸಂಭ್ರಮ
2023 ದರ್ಶನ್ ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದ್ದು ಇದೇ ವರ್ಷವೇ ಎರಡೆರಡು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ತಿಂಗಳ ಹಿಂದಷ್ಟೇ ಕ್ರಾಂತಿ ಸಿನಿಮಾ ರಿಲೀಸ್ ಆಗಿ, ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದ್ದು. ಸಿನಿಮಾ ಬಿಡುಗಡೆ ಹಿನ್ನೆಲೆ ಅಭಿಮಾನಿಗಳು ಎಲ್ಲೆಲ್ಲೂ ಸಂಭ್ರಮಿಸಿದ್ದಾರೆ. ಇಂದು ಶನಿವಾರ & ನಾಳೆ ಭಾನುವಾರ ಇರುವ ಕಾರಣ ಬಾಕ್ಸ್ ಆಫಿಸ್ ಧೂಳ್ ಆಗೋದು ಗ್ಯಾರಂಟಿ ಅಂತಿದ್ದಾರೆ ನಟ ದರ್ಶನ್ ಅಭಿಮಾನಿಗಳು. ಜೊತೆಗೆ ಸೋಮವಾರ ಹೊಸವರ್ಷ ಬಂದಿರುವ ಹಿನ್ನೆಲೆ ಇದೀಗ ಮತ್ತಷ್ಟು ಸಂಭ್ರಮ ಹೆಚ್ಚಾಗಿದೆ.
ಒಟ್ನಲ್ಲಿ ಕನ್ನಡ ಸಿನಿಮಾಗಳು ಅಬ್ಬರಿಸುತ್ತಿವೆ ಅದರಲ್ಲೂ ಕ್ರಾಂತಿ ಬಳಿಕ ಮತ್ತೊಮ್ಮೆ ಹೀಗೆ ಬಹುದೊಡ್ಡ ಮಟ್ಟದಲ್ಲಿ ನಟ ದರ್ಶನ್ ಅವರ ಸಿನಿಮಾ ಅಬ್ಬರಿಸಿದೆ. ಈ ಮೂಲಕ ಫ್ಯಾನ್ಸ್ ಪಾಲಿನ ಪ್ರೀತಿಯ 'ಡಿ-ಬಾಸ್' ದರ್ಶನ್ ಅವರು 2023ಕ್ಕೆ ಸಂಭ್ರಮದಿಂದ ಗುಡ್‌ಬೈ ಹೇಳ್ತಾ ಇದ್ದಾರೆ. ಹಾಗೆ ದೊಡ್ಡ ಹಿಟ್ ಮೂಲಕ 2024ರ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications