‘ಡಿ-ಬಾಸ್’ ದರ್ಶನ್ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್!
ದರ್ಶನ್ ಅವರ ಸಿನಿಮಾಗಳಿಗೆ ಅಭಿಮಾನಿಗಳು ಕಾಯುತ್ತಾ ಕೂರುತ್ತಾರೆ. ಹೀಗಾಗಿಯೇ ಸಾಲು ಸಾಲು ಸಿನಿಮಾಗಳನ್ನ ತೆರೆಗೆ ತರುತ್ತಿದ್ದಾರೆ ನಟ ದರ್ಶನ್. ಇದೇ ಸಮಯದಲ್ಲಿ ದರ್ಶನ್‌ರ 'ಡೆವಿಲ್' ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದರು. ಇದೀಗ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸಿಂಗ್ ಸುದ್ದಿಯೊಂದು ಸಿಕ್ಕಿದ್ದು, ಅದನ್ನ ತಿಳಿಯಲು ಮುಂದೆ ಓದಿ.
ಹೌದು, ಕಾಟೇರ ಸಿನಿಮಾ ನಂತರ ದರ್ಶನ್ ಅವರ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿತ್ತು. ದರ್ಶನ್ ತೂಗುದೀಪ ಅವರ ಮುಂದಿನ ಸಿನಿಮಾ ಯಾವುದು? ಅನ್ನೋ ಪ್ರಶ್ನೆ ಮೂಡಿದ್ದಾಗಲೇ 'ಡೆವಿಲ್' ಸಿನಿಮಾ ಟೀಸರ್ ರಿಲೀಸ್ ಆಗಿ ಅಬ್ಬರಿಸಿತ್ತು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಡೆವಿಲ್' ಸಿನಿಮಾಗೆ ಹೀರೋಯಿನ್ ಆಯ್ಕೆ ಆಗಿದೆ. ಈ ಬಾರಿ ಫ್ಯಾನ್ಸ್ ಸೇರಿದಂತೆ ಇಡೀ ಸಿನಿಮಾ ಇಂಡಸ್ಟ್ರಿಗೆ 'ಡೆವಿಲ್' ಸಿನಿಮಾ ತಂಡ ಸರ್ಪ್ರೈಸ್ ನೀಡಿದೆ. ಹಾಗಾದ್ರೆ ಯಾರು ಹೀರೋಯಿನ್ ಪಟ್ಟ ಪಡೆಯುತ್ತಿದ್ದಾರೆ? 'ಡೆವಿಲ್' ಸಿನಿಮಾ ಸುಂದ್ರಿ ಯಾರು? ಬನ್ನಿ ಪೂರ್ತಿ ಮಾಹಿತಿ ತಿಳಿಯೋಣ.

ಮಂಗಳೂರು ಬೆಡಗಿ ದರ್ಶನ್ ನಾಯಕಿ!
ಅಂದಹಾಗೆ ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಕರಾವಳಿ ಬೆಡಗಿ, ಮಂಗಳೂರು ಮೂಲದ ರಚನಾ ರೈ 'ಡೆವಿಲ್' ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ತುಳು & ಕನ್ನಡ ಸಿನಿಮಾಗಳಲ್ಲಿ ರಚನಾ ರೈ ನಟಿಸಿದ್ದಾರೆ. ಧನ್ವೀರ್ ನಟನೆಯ ವಾಮನ ಸಿನಿಮಾದಲ್ಲಿ, ಈಗಾಗಲೇ ರಚನಾ ರೈ ಬಣ್ಣ ಹಚ್ಚಿದ್ದಾರೆ. ಇದೀಗ ದರ್ಶನ್ ಅವರ ಸಿನಿಮಾಗೂ ರಚನಾ ರೈ ಎಂಟ್ರಿ ಪಡೆದಿದ್ದಾರೆ. ಈ ಮೂಲಕ ಬಹುದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಮತ್ತೊಂದು ಕಡೆ 'ಡೆವಿಲ್' ಸಿನಿಮಾ, 'ಕಾಟೇರ' ದಾಖಲೆ ಮೀರಿಸುತ್ತಾ? ಅಂತಾನೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.
ಶೀಘ್ರದಲ್ಲೇ ಡೆವಿಲ್ ಸಿನಿಮಾ ರಿಲೀಸ್!
ಒಟ್ನಲ್ಲಿ ನಟ ದರ್ಶನ್ ಅವರ ಅಭಿಮಾನಿಗಳಿಗೆ ಈಗ ಫುಲ್ ಖುಷಿ ಖುಷಿಯಾದ ಸುದ್ದಿಯು ಸಿಕ್ಕಿದೆ. ಇನ್ನೇನು ಕೆಲವೇ ದಿನದಲ್ಲಿ ನಟ ದರ್ಶನ್ ಅವರ 'ಡೆವಿಲ್' ಸಿನಿಮಾ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲಿದ್ದು, ಕರಾವಳಿ ಬೆಡಗಿ ಈ ಸಿನಿಮಾದ ನಾಯಕಿ ಆಗಲಿದ್ದಾರೆ. ಈ ನಡುವೆ ದರ್ಶನ್ ಅವರು ಇದೇ ಸಿನಿಮಾ ಶೂಟಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರು. ಆ ನಂತರ ಸುದಾರಿಸಿಕೊಂಡು ಅವರು ಮತ್ತೆ ಚಿತ್ರ ತಂಡದ ಜೊತೆ ಕೈಜೋಡಿಸಿದ್ದಾರೆ. ಈ ಮೂಲಕ ಆದಷ್ಟು ಬೇಗ ಡೆವಿಲ್ ಸಿನಿಮಾ ರಿಲೀಸ್ ಆಗುವುದು ಇದೀಗ ಪಕ್ಕಾ ಆಗುತ್ತಿದೆ.












Click it and Unblock the Notifications