Get Updates
Get notified of breaking news, exclusive insights, and must-see stories!

ಕೆಜಿಎಫ್ ಕ್ಯಾಪ್ಟನ್‌ ಯಶ್‌ಗೆ, ಕಾಟೇರ ಅಭಿಮಾನಿಗಳ ವಿಶ್!

ದರ್ಶನ್ ಅವರ ಕಾಟೇರ ಸಿನಿಮಾ ಎಲ್ಲೆಲ್ಲೂ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಕೂಡ ಬಂದಿದೆ. ಹೀಗಾಗಿ ನಟ ದರ್ಶನ್ ಅವರ ಫ್ಯಾನ್ಸ್ ಈ ಶುಭ ಸಂದರ್ಭದಲ್ಲಿ, ಯಶ್‌ಗೆ ಭರ್ಜರಿ ವಿಶ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾಕಿಭಾಯ್ ಯಶ್‌ರ ಹುಟ್ಟುಹಬ್ಬ ವಿಚಾರ ಟ್ರೆಂಡ್ ಆಗಿರುವ ಸಮಯದಲ್ಲೇ ದರ್ಶನ್ ಅವರ ಅಭಿಮಾನಿಗಳ ವಿಶ್ ಹೇಗಿದೆ ಗೊತ್ತಾ?

ನಟ ಯಶ್ ಅಂದುಕೊಂಡ ಗುರಿ ಸಾಧಿಸುವ ತನಕ ನಿಲ್ಲಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ, ಸಾರ್ವಕಾಲಿಕ ವಿಚಾರ. ಅದ್ರಲ್ಲೂ ಕನ್ನಡ ಸಿನಿಮಾಗಳಿಗೆ ಜಾಗತಿಕ ಕೀರ್ತಿಯನ್ನು, ಆಧುನಿಕ ಕಾಲದಲ್ಲಿ ಗಳಿಸಿಕೊಟ್ಟ ಯಶಸ್ಸು ಯಶ್‌ಗೆ ಸಲ್ಲಬೇಕು. ನಟ ಯಶ್ ಇಂದು ತಮ್ಮ ಬರ್ತ್ ಡೇ ಸಂಭ್ರಮದಲ್ಲಿ ಇದ್ದು, 38 ತುಂಬಿ 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹೀಗಾಗಿ 'ಕೆಜಿಎಫ್' ಕೋಟೆಯ ಕ್ಯಾಪ್ಟನ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ, ಶುಭಾಶಯಗಳ ಸುರಿಮಳೆ ಇದೀಗ ಸುರಿಯುತ್ತಿದೆ. ಅದರಲ್ಲೂ ನಟ ದರ್ಶನ್ ಅವರ ಅಭಿಮಾನಿಗಳು ಯಶ್ ಅವರಿಗೆ ಸ್ಪೆಷಲ್ ವಿಶ್ ಮಾಡುತ್ತಿದ್ದಾರೆ.

Challenging Star Darshan Fans Birthday Wishes To Rocking Star Yash

ನಟ ದರ್ಶನ್ ಫ್ಯಾನ್ಸ್ ವಿಶ್‌ ಹೇಗಿತ್ತು?

ಹೌದು, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ ಡಿ-ಬಾಸ್ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ಅಬ್ಬರಿಸಿದ್ದಾರೆ. ಹೀಗೆ ಕಾಟೇರ ಅಬ್ಬರದ ಎದುರು ಹಲವಾರು ದಾಖಲೆಗಳು ಧೂಳ್ ಧೂಳ್ ಆಗಿವೆ. ಹೀಗಿದ್ದಾಗ 'ಕಾಟೇರ' ಅಭಿಮಾನಿಗಳು ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ನಟ ದರ್ಶನ್ ಅವರ ಆಪ್ತ ಮಿತ್ರರೂ ಆಗಿರುವ, ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದರ್ಶನ್ ಅವರ ಫ್ಯಾನ್ಸ್ ಕೂಡ ವಿಶ್ ಮಾಡಿದ್ದಾರೆ. ಹೀಗೆ ಕೆಜಿಎಫ್ ಕ್ಯಾಪ್ಟನ್ ರಾಕಿ ಭವಿಷ್ಯದ ಪ್ರಾಜೆಕ್ಟ್‌ಗಳಿಗೂ ಶುಭ ಕೋರುತ್ತಿದ್ದಾರೆ.

ನಟ & ನಟಿಯರಿಂದಲೂ ಶುಭಾಶಯ

ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸ್ಟಾರ್ ಕೂಡ ಆಗಿ ಬೆಳೆದಿದ್ದಾರೆ. ರಾಕಿಭಾಯ್ ಹವಾ ಪೂರ ಪಶ್ಚಿಮ ತೀರಕ್ಕೆ ಮಾತ್ರ ಅಲ್ಲ ಇಡೀ ಜಗತ್ತಿನಲ್ಲೇ ಸದ್ದು ಮಾಡುತ್ತಿದೆ. ಹೀಗಿದ್ದಾಗ ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸುಮ್ಮನೆ ಕೂರಲು ಆಗುತ್ತಾ? ಇಲ್ಲ ಇಲ್ಲ ಇದೇ ಕಾರಣಕ್ಕೆ ಅಭಿಮಾನಿಗಳು ಯಶ್ ಅವರಿಗೆ ವೆರೈಟಿ, ವೆರೈಟಿ ವಿಶ್ ಮಾಡುತ್ತಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಹಿರಿಯ ನಟರು ಕೂಡ ಯಶ್ ಅವರಿಗೆ ಶುಭಾಶಯ ಕೋರಿ, ಶುಭ ಹಾರೈಸಿದ್ದಾರೆ.

ಯಶ್-19 ಅಬ್ಬರ ಬಲು ಜೋರು

'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿತ್ತು, ನಂತರ 2022ರಲ್ಲಿ 'ಕೆಜಿಎಫ್-2' 1000 ಕೋಟಿ ಕ್ಲಬ್ ಸೇರಿ ಅಬ್ಬರಿಸಿತ್ತು. ಆದ್ರೆ ಕೆಜಿಎಫ್-2 ಬಳಿಕ ಯಶ್ ಅವರ ಯಾವುದೇ ಸಿನಿಮಾಗಳು ಅನೌನ್ಸ್ ಆಗಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಸಖತ್ ಕುತೂಹಲದಿಂದ ಕಾಯ್ತಾ, ಯಶ್-19 ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದರು. ಹೀಗಿದ್ದಾಗ ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಘೋಷಣೆ ಹೊರಡಿಸಿದ್ದರು ನಟ ಯಶ್. ಯಶ್-19 ಸಿನಿಮಾಗೆ 'ಟಾಕ್ಸಿಕ್' ಎಂಬ ಟೈಟಲ್ ಇಡಲಾಗಿತ್ತು. ಹೀಗೆ ಟೈಟಲ್ ಅನೌನ್ಸ್ ಆದ 1 ತಿಂಗಳ ನಂತರ ರಾಕಿಭಾಯ್ ಯಶ್ ಅವರ ಹುಟ್ಟುಹಬ್ಬ ಕೂಡ ಬಂದಿದೆ.

ಒಟ್ನಲ್ಲಿ ಒಂದು ಕಡೆ ಕಾಟೇರ, ಮತ್ತೊಂದು ಕಡೆ ಕೆಜಿಎಫ್ ಹೀಗೆ ಎರಡೂ ಸಿನಿಮಾಗಳೂ ಕನ್ನಡ ಸಿನಿಮಾಗಳ ಕೀರ್ತಿಯನ್ನ ಬಾನೆತ್ತರಕ್ಕೆ ಹಾರಿಸಿವೆ. ಹೀಗಿದ್ದಾಗಲೇ ನಟ ರಾಕಿಭಾಯ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ಬಲು ಜೋರಾಗಿದೆ. ಈ ಮೂಲಕ ಎಲ್ಲೆಲ್ಲೂ ಕೆಜಿಎಫ್ ಕ್ಯಾಪ್ಟನ್ ಯಶ್ ಅವರ ಹವಾ ಹಬ್ಬಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+