Darshan-Pavitra Gowda: ನಟ ದರ್ಶನ್‌ರನ್ನು ಕೊನೆಗೂ ಜೈಲಿಗೆ ಕಳುಹಿಸಿದ ವಿವಾಹೇತರ ಸಂಬಂಧ!?
ಬೆಂಗಳೂರು, ಜೂನ್. 11: ಚಂದನವನದ ಬಹು ಬೇಡಿಕೆಯ ಮತ್ತು ಪ್ರತಿಭಾವಂತನ ನಟ ದರ್ಶನ್ ತೂಗುದೀಪ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಪೊಲೀಸರು ನಟನನ್ನು ವಶಕ್ಕೆ ಪಡೆದಿದ್ದಾರೆ.
ತಮ್ಮ ಗೆಳತಿ ನಟಿ ಪವಿತ್ರಾ ಗೌಡ ಅವರ ಜೊತೆಗಿನ ಸಂಬಂಧವೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ. ನಿಜ... ನಟ ದರ್ಶನ್ ಈಗಾಗಲೇ ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಇದ್ದಾರೆ. ಆದರೆ, ಪದೆ ಪದೆ ಇವರ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. 2011 ರಲ್ಲಿ ಹೆಂಡತಿ ಮೇಲೆ ಕೈ ಮಾಡಿ ಸೆರೆಮನೆ ವಾಸ ಅನುಭವಿಸಿದ್ದ ಇವರು ಬಳಿಕವೂ ಬುದ್ದಿ ಕಲಿತಿಲ್ಲ. ಮತ್ತೊಂದು ಸಂಬಂಧಕ್ಕೆ ಜೊತೆಯಾಗಿ ತಮ್ಮ ಜೀವನವನ್ನೇ ಸೆರೆಮನೆಯಲ್ಲಿ ಕಳೆಯುವ ಹಂತದಲ್ಲಿದ್ದಾರೆ.

ಕಳೆದ ವರ್ಷದಿಂದ ದೊಡ್ಡ ಸುದ್ದಿಯಲ್ಲಿ ದರ್ಶನ್ -ಪವಿತ್ರಾ ಗೌಡ
ನಟಿ ಪವಿತ್ರಾ ಗೌಡ ಅವರು ದರ್ಶನ್ ಜೊತೆಗಿನ ಹಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬರೋಬ್ಬರಿ ಒಂದು ದಶಕದಿಂದ ತಾವು ಸಂಬಂಧದಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಫೋಟೋಗಳಲ್ಲಿ ಇಬ್ಬರು ತುಂಬಾ ಆತ್ಮೀಯರಾಗಿ ಇರುವುದು ಕೂಡ ಕಾಣಿಸುತ್ತಿದೆ. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಬ್ಬರು ನೇರಾ ನೇರಾ ಜಗಳಕ್ಕೆ ನಿಂತಿದ್ದಾರೆ.
ಇಷ್ಟೆಲ್ಲಾ ಆದರೂ ಕೂಡ ನಟ ದರ್ಶನ್ ವಿಜಯಲಕ್ಷ್ಮೀ ಪರವಾಗಿ ಮಾತನಾಡಿಲ್ಲ. ಇದು ಇಬ್ಬರ ಸಂಬಂಧವನ್ನು ಖಚಿತ ಪಡಿಸುತ್ತದೆ. ಇದರ ಜೊತೆಗೆ ದರ್ಶನ್ ಈಗ ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅದು ಕೂಡ ಪವಿತ್ರಾ ಗೌಡಾಗಾಗಿಯೇ. ಅವರ ಫೋಟೋಗಳಿಗೆ ಅಸಬ್ಯವಾಗಿ ಕಾಮೆಂಟ್ ಮಾಡುತ್ತಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರ ಕೊಲೆ ಕೇಸ್ ಅವರ ತಲೆ ಮೇಲೆ ತೂಗುಗತ್ತಿಯಾಗಿದೆ.
ವಿವಾಹೇತರ ಸಂಬಂಧ ಮತ್ತು ಕೊಲೆ ಪ್ರಕರಣ
ಇನ್‌ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿ ನಟಿ ಪವಿತ್ರಾ ಗೌಡ ತಾನು ಮತ್ತು ದರ್ಶನ್ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಮಂದಿ ಇದಕ್ಕೆ ಕಾಮೆಂಟ್ ಕೂಡ ಮಾಡುತ್ತಾರೆ. ಅಶ್ಲೀಲ ಕಾಮೆಂಟ್‌ಗಳು ಸೆಲಬ್ರಿಟಿಗಳಿಗೆ ಸಾಮಾನ್ಯವಾಗಿ ಬರುತ್ತಲೆ ಇರುತ್ತವೆ. ಇದಕ್ಕೆ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ, ಕೊಲೆಯಲ್ಲಿ ಅಂತ್ಯವಾಗಿದ್ದು ದುರಂತ.

ತಮ್ಮ ಗೆಳತಿ, ನಟಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ಕೊಲೆ ಮಾಡಿಸುವುದು ನಿಜಕ್ಕೂ ಆತಂಕವಾದದ್ದು. ಒಂದೆರಡು ಮಾತುಗಳಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಕೊಲೆಯವರೆಗೂ ಹೋಗಬಾರದಿತ್ತು. ಒಮ್ಮೆ ಮೇಲಿನ ಪ್ರೇಮ ಇನ್ನೊಬ್ಬರ ಜೀವ ತೆಗೆಯುವುದು ಸಿನಿಮಾಗಳಲ್ಲಿ ನೋಡಿದ್ದ ಕನ್ನಡಿಗರಿಗೆ ಅಂತಹ ನಟರೇ ಇಂತಹ ಕೊಲೆಗಳಿಗೆ ಕುಮ್ಮಕ್ಕು ನೀಡಿರುವುದು ಆಘಾತವೆ ಸರಿ.
ಇನ್ನು, ನಟಿ ಪವಿತ್ರಾ ಗೌಡ ಕಳೆದ ವರ್ಷ ಮಾತ್ರವಲ್ಲ , 2017 ರಲ್ಲಿ, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ನಟಿಯ ಪ್ರೊಫೈಲ್ ಫೋಟೋದಲ್ಲಿ ಒಟ್ಟಿಗೆ ಇರುವ ಪೋಟೋಗಳನ್ನು ಹಂಚಿಕೊಂಡು ವಿವಾದ ಉಂಟು ಮಾಡಿದ್ದರು. ದರ್ಶನ್ ಅಭಿಮಾನಿಗಳ ಆಕ್ರೋಶದ ಹಿನ್ನೆಲೆಯಲ್ಲಿ ಪವಿತ್ರಾ ಅದನ್ನು ತೆಗೆದು ಹಾಕಿದ್ದರು. ಕಳೆದ ನವೆಂಬರ್ ಅವರು ತಮ್ಮ ಮಗಳು ಖುಷಿಯ ಹುಟ್ಟುಹಬ್ಬದ ಆಚರಣೆಯಲ್ಲಿ ದರ್ಶನ್ ಇರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಬಳಿಕ ದಶಕಗಳ ಸಂಬಂಧ ಎಂದು ವಿಡಿಯೋ ಹಂಚಿಕೊಂಡಿದ್ದರು.












Click it and Unblock the Notifications