ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಎಂಗೆಜ್‌ಮೆಂಟ್ ರಿಂಗ್ ಸದ್ದು.. ಭಾರೀ ವೈರಲ್
ಬಿಗ್ ಬಾಸ್ ಕನ್ನಡ 11 ಸೀಸನ್ ಮನೆಗೆ ಕಾಲಿಟ್ಟ ಚೈತ್ರಾ ಕುಂದಾಪುರ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದರು. ಮೊದಲಿಗೆ ಅವರಪ್ಪನಿಗೆ ಹುಟ್ಟಿದ್ರೆ ಎಂದು ಹೇಳಿಕೆ ನೀಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ತಮಗೆ ತಾವೇ ಪೂಜೆ ಮಾಡಿಕೊಳ್ಳುವ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ಎಂಗೆಜ್‌ಮೆಂಟ್ ರಿಂಗ್ ವಿಚಾರ ಭಾರೀ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಜೋಡಿ ಟಾಸ್ಕ್ ನೀಡಲಾಗಿದೆ. ಈ ಜೋಡಿಗಳು ಬೆಲ್ಟ್ ಕಟ್ಟಿಕೊಂಡೇ ಜೊತೆಗೆ ಆಟದಲ್ಲಿ ಸ್ಪರ್ಧಿಸಿ ಪಾಯಿಂಟ್ಸ್‌ಗಳನ್ನು ಪಡೆಯಬೇಕಾಗುತ್ತದೆ. ಹೆಚ್ಚು ಪಾಯಿಂಟ್ಸ್‌ಗಳನ್ನು ಪಡೆದ ತಂಡ ನಾಮಿನೇಷನ್ ಪ್ರಕ್ರಿಯೆಯಿಂದ ಹೊರಬರುತ್ತದೆ.

ಅದರಂತೆಯೇ ಬಿಗ್ ಬಾಸ್ ಕೆಸರಿನಲ್ಲಿ ಆಡುವ ಆಟವನ್ನು ನೀಡಿದ್ದರು. ಈ ವೇಳೆ ಶಿಶಿರ್ ಜೋಡಿಯಾದ ಚೈತ್ರಾ ಕುಂದಾಪುರ ಅವರು ಕೆಸರಿನಲ್ಲಿ ಆಡುವ ಭರದಲ್ಲಿ ಉಂಗುರವನ್ನು ಕಳೆದುಕೊಂಡಿದ್ದರು. ಬಳಿಕ ಚೈತ್ರಾ ಒಂದು ಕ್ಷಣ ಗಾಬರಿಗೊಂಡು ಮೌನವಾಗಿಬಿಟ್ಟರು. ಅಲ್ಲದೆ, ಕ್ಯಾಮೆರಾ ಮುಂದೆ ಹೋಗಿ ಇದು ನನ್ನ ಎಂಗೇಜ್‌ಮೆಂಟ್ ರಿಂಗ್ ಬಿಗ್ ಬಾಸ್, ಹುಡುಕಿಕೊಡಿ ಎಂದು ಚೈತ್ರಾ ಮನವಿ ಮಾಡಿದ್ದರು.
ಬಳಿಕ, ಬಿಗ್ ಬಾಸ್ ಉಂಗುರ ಕಳುಹಿಸಿಕೊಟ್ಟಿದ್ದು, ಇದನ್ನು ಕಂಡ ಚೈತ್ರಾ ಕುಂದಾಪುರ ಅವರು ಸಂತೋಷದಿಂದ ಕುಣಿದು ಕುಪ್ಪಳಿಸದರು. ಅಲ್ಲದೆ, ಬಿಗ್ ಬಾಸ್ ಮತ್ತು ಕೊರಗಜ್ಜನಿಗೆ ಧನ್ಯವಾದ ಹೇಳಿದರು. ಉಂಗುರು ಕಳೆದಾಗ ಅವರು ಕೊರಗಜ್ಜನಿಗೆ ಪ್ರಾರ್ಥನೆಯನ್ನೂ ಮಾಡಿಕೊಂಡಿದ್ದರು. ಅದರಂತೆಯೇ ಇದೀಗ ಉಂಗುರ ಮತ್ತೆ ಕೈಸೇರಿದೆ.
ಮತ್ತೊಂದೆಡೆ ಶಿಶಿರ್ ಜೊತೆ ಆಡುತ್ತೇನೆ ಎಂದು ಹೇಳಿದ್ದ ಚೈತ್ರಾ ಕುಂದಾಪುರ್ ಅವರು ಪ್ಲೇಟ್ ಬದಲಾಯಿಸಿ ಬಳಿಕ ತ್ರಿವಿಕ್ರಮ್ ಜೊತೆ ಆಡುವುದಾಗಿ ಹೇಳಿದ್ದರು. ಇದರಿಂದ ಕೋಪಗೊಂಡ ಶಿಶಿರ್ ಇದಪ್ಪಾ ನಿಯತ್ತ ಅಂದ್ರೆ ಎಂದು ಹೇಳುವ ಮೂಲಕ ಚೈತ್ರಾ ಕುಂದಾಪುರ್ ಅವರಿಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ಹೇಳುತ್ತಾರೆ.
ತ್ರಿವಿಕ್ರಮ್ ಕೊನೆಗೆ ತನ್ನ ಪಾರ್ಟನರ್ ಆಯ್ಕೆಗೆ ಬಿಟ್ಟಾಗ ಅವರು ಆಯ್ಕೆ ಮಾಡಿಕೊಂಡಿದ್ದು ಭವ್ಯ ಗೌಡನನ್ನ. ಬಳಿಕ ಕೋಪಗೊಂಡ ತ್ರಿಶಿರ್ ಚೈತ್ರಾ ಕುಂದಾಪುರಗೆ ಮೋಸದ ಹಣೆಪಟ್ಟಿಯನ್ನು ಕಟ್ಟುವುದಲ್ಲದೆ, ನಂಬಿಕೆಗೆ ನೀವು ಅರ್ಹರಲ್ಲ. ಕೊನೆಯವರೆಗೂ ಜೊತೆಯಲ್ಲೇ ಆಡುತ್ತೇನೆ ಎಂದು ಕೈಕೊಟ್ಟುಬಿಟ್ರಲ್ಲ. ನಂಬಿದ್ದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡೆದುಕೊಳ್ಳಬೇಕು ಎಂದು ಹೇಳಿದರು.
ಬಳಿಕ ಚೈತ್ರಾ ಜೊತೆಗಿದ್ದ ಜೋಡಿ ಬೆಲ್ಟ್‌ನಿಂದ ಹೊರಬರುತ್ತಾರೆ. ಆಗ ಐಶ್ವರ್ಯ ಅವರು ಇದು ಆಟ, ಹಾಗೆಲ್ಲ ಮಾಡಬೇಡಿ ಎಂದು ಮನವೊಲಿಸಿದರೂ ಕೂಡ ಶಿಶಿರ್ ಮಾತ್ರ ಆಗಿದ್ದಾಗಲಿ, ನಾನು ಅವರ ಜೊತೆ ಆಡಲು ಇಷ್ಟ ಪಡುಚುದಿಲ್ಲ ಎಂದು ಚೈತ್ರಾ ಕುಂದಾಪುರ್ ವಿರುದ್ಧ ಕೆಂಡಕಾರುತ್ತಾರೆ ಎದ್ದು ಹೋಗುತ್ತಾರೆ.
ಚೈತ್ರ ಕುಂದಾಪುರ ಆಕ್ರೋಶ: ಇತ್ತೀಚೆಗಷ್ಟೇ ಗೋಲ್ಡ್ ಸುರೇಶ್ ಅವರು ಹಂಸ ಅವರ ಲವ್ ಸ್ಟೋರಿ ನಡೆಯುತ್ತಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಹಂಸ ಚೈತ್ರಾ ಕುಂದಾಪುರ್ ಬಳಿ ಹೇಳಿಕೊಂಡು ಸಾಕಷ್ಟು ಬೇಸರಗೊಂಡಿದ್ದರು. ಬಳಿಕ ಚೈತ್ರಾ ಅವರು ಪ್ರತಿಕ್ರಿಯಿಸಿ, ಹೀಗೆ "ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತನಾಡಿದರೆ, ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ನನಗೆ ಈಗಾಗಲೇ ಮದುವೆ ಫಿಕ್ಸ್ ಆಗಿದೆ. ನನ್ನ ಸುದ್ದಿಗೆ ಯಾರು ಬರಬೇಡಿ," ಅಂತಲೂ ಹೇಳಿದ್ದರು.












Click it and Unblock the Notifications