Aparna: ಅಪರ್ಣಾ ಸಾ*ಗೆ ಅಸಲಿ ಕಾರಣ ತಿಳಿಸಿದ ಬ್ರಹ್ಮಾಂಡ ಗುರೂಜಿ!

ಅಪರ್ಣಾ ಅವರು ಈಗ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬದುಕಿದ್ದ ಅಷ್ಟೂ ದಿನಗಳ ಕಾಲ ಕನ್ನಡ ಅಭಿಮಾನಿಯಾಗಿ, ಕನ್ನಡದ ಅತ್ಯುತ್ತಮ ನಿರೂಪಕಿಯೂ ಆಗಿದ್ದ ಅಪರ್ಣಾ ನಿನ್ನೆ ಮೃತಪಟ್ಟಿದ್ದರು. ಇಂದು ಅಂತ್ಯಕ್ರಿಯೆ ಕೂಡ ನೆರವೇರಿದೆ, ಹೀಗಿದ್ದಾಗಲೇ ಬ್ರಹ್ಮಾಂಡ ಗುರೂಜಿ ಅವರು ಅಪರ್ಣಾ ಅವರ ಸಾವಿನ ಬಗ್ಗೆ ಸ್ಫೋಟಕ ಸತ್ಯ ತಿಳಿಸಿದ್ದಾರೆ.

ಆಂಕರ್ ಅಪರ್ಣಾ ಅವರು ಮೃತಪಟ್ಟ ಸುದ್ದಿ ಕರ್ನಾಟಕ ಮಾತ್ರವಲ್ಲ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡುತ್ತಿದೆ. ಯಾಕಂದ್ರೆ ಅಪರ್ಣಾ ಅವರು ದೇಶದ ಹಲವು ರಾಜ್ಯಗಳಲ್ಲೂ ಫೇಮಸ್ ಆಗಿದ್ದರು. ಇದೇ ಕಾರಣಕ್ಕೆ ಆಂಕರ್ ಅಪರ್ಣಾ ಕೋಟ್ಯಂತರ ಅಭಿಮಾನಿ ಬಳಗ ಕೂಡ ಹೊಂದಿದ್ದರು. ಆದರೆ ಇದೀಗ ಕ್ಯಾನ್ಸರ್ ಕಾರಣಕ್ಕೆ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆಗೆ ಅಪರ್ಣಾ ಅವರ ದೇಹ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಗೆ ಬಿದ್ದಿದೆ. ಆದ್ರೆ ಆಂಕರ್ ಅಪರ್ಣಾ ಅವರ ಸಾವಿಗೆ ಬ್ರಹ್ಮಾಂಡ ಗುರೂಜಿ ಬೇರೆಯದ್ದೇ ಸ್ಫೋಟಕ ಕಾರಣವನ್ನ ಬಿಚ್ಚಿಟ್ಟಿದ್ದಾರೆ.

Brahmanda Guruji Said This About Anchor Aparna

ಅಪರ್ಣಾ ಅವರ ಸಾವಿಗೆ ಇದೇ ಕಾರಣ?

ಬ್ರಹ್ಮಾಂಡ ಗುರೂಜಿ ಇಂದು ಆಂಕರ್ ಅಪರ್ಣಾ ಅವರ ಅಂತಿಮ ದರ್ಶನ ಪಡೆದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕಂಬನಿ ಮಿಡಿದ ಬ್ರಹ್ಮಾಂಡ ಗುರೂಜಿ, ನಟಿ & ನಿರೂಪಕಿಯಾದ ಅಪರ್ಣಾ ಅವರ ಸಾವಿಗೆ ಅಸಲಿ & ಸ್ಫೋಟಕ ಕಾರಣ ಬಿಚ್ಚಿಟ್ಟಿದ್ದಾರೆ. ಇದೀಗ ಬ್ರಹ್ಮಾಂಡ ಗುರೂಜಿ ಅವರು ಹೇಳುವಂತೆ ಆಂಕರ್ ಅಪರ್ಣಾ ಅವರು ಮೃತಪಟ್ಟಿದ್ದು ಶನಿ ಕಾಟದಿಂದ ಅಂತೆ. ಅಷ್ಟಕ್ಕೂ ಯಾರದ್ದೇ ಜೀವನದಲ್ಲಿ ಶನಿ ಕಾಟ ಹೆಚ್ಚಾದರೆ ಕಾಯಿಲೆಗಳು ವಕ್ಕರಿಸಿ, ಸಮಸ್ಯೆಗೆ ಕಾರಣ ಆಗುತ್ತದೆ. ಇದೇ ಕಾರಣಕ್ಕೆ ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ್ದ ಅಪರ್ಣಾ ಅವರು ಇದೀಗ ಮೃಪತಟ್ಟಿದ್ದಾರೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ ಅವರು.

ಅಪರ್ಣಾ ಅವರಿಗೆ ಮಕ್ಕಳೇ ಇರಲಿಲ್ಲ..

ಹೌದು, ಅಪರ್ಣಾ ಅವರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದರು ಕೂಡ ಅವರಿಗೆ ಮಕ್ಕಳೇ ಇಲ್ಲದ ನೋವು ಕಾಡುತ್ತಿತ್ತು. ಎಷ್ಟೆಲ್ಲಾ ಸಾಧನೆ ಮಾಡಿದ ನಟಿಗೆ ಇದೊಂದು ಮಾತ್ರ ದೊಡ್ಡ ಕೊರಗು ನೀಡಿತ್ತು. ಆದರೂ ಇದನ್ನ ಅವರು ನುಂಗಿಕೊಂಡು & ಸಹಿಸಿಕೊಂಡು ಹೋಗಿದ್ದರು. ಅಲ್ಲದೆ ಅಪರ್ಣಾ ಅವರಿಗೆ ಮಕ್ಕಳು ಇಲ್ಲದ ನೋವನ್ನು ಮರೆಯುವಂತೆ ಮಾಡುತ್ತಿದ್ದ ವಿಚಾರ ನಿರೂಪಣೆ ಮಾತ್ರ. ಆದರೆ ಇದೀಗ ಕ್ಯಾನ್ಸರ್ ಕಾಯಿಲೆಗೆ ಅಪರ್ಣಾ ಅವರು ತುತ್ತಾಗಿದ್ದಾರೆ. ಈ ಕುರಿತು ಸಿನಿಮಾ & ರಾಜಕೀಯ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಅಲ್ಲದೆ ನಟಿ & ನಿರೂಪಕಿ ಅಪರ್ಣಾ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಬನಶಂಕರಿ ಪ್ರದೇಶದಲ್ಲಿ ಮನೆ ಇದೆ

ಸಾಕಷ್ಟು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದ ನಿವಾಸದಲ್ಲಿ ಮೃತಪಟ್ಟಿದ್ದರು ಬೆಂಗಳೂರು ದೂರದರ್ಶನದ ಸೀನಿಯರ್ ಗ್ರೇಡ್ ನಿರೂಪಕಿ ಆಗಿದ್ದ ಅಪರ್ಣಾ ಅವರು ಆಕಾಶವಾಣಿ ನಿರೂಪಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿ ನಿರೂಪಕಿಯಾಗಿ 3 ದಶಕ ಪೂರೈಸಿದ್ದರು. ಹೀಗಿದ್ದಾಗ ಎಲ್ಲರನ್ನೂ ಅಗಲಿ ಹೋಗಿದ್ದಾರೆ ನಟಿ & ಅಪ್ಪಟ ಕನ್ನಡದ ನಿರೂಪಕಿ ಅಪರ್ಣಾ ಅವರು. ಈ ನೋವಿನ ಬೆನ್ನಲ್ಲೇ ಅಪರ್ಣಾ ಅವರ ಜೀವನದ ಕಹಿ ಘಟನೆಗಳು ಅಭಿಮಾನಿಗಳನ್ನ ಮತ್ತಷ್ಟು ನೋಯಿಸುತ್ತಿವೆ ಕೂಡ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+