Orry: 'ಫಾರ್ಮ್ಹೌಸ್ಗೆ ಕರೆದು ಟಚ್ ಮಾಡ್ತಾರೆ, 25 ಲಕ್ಷ ಕೊಡ್ತಾರೆ'
ಬಾಲಿವುಡ್ ಸ್ಟಾರ್‌ಗಳಷ್ಟೇ ಫೇಮಸ್ ಒರಿ. ಬಾಲಿವುಡ್ ನಟ-ನಟಿಯರು ಹಾಗೂ ಇತರ ಸೆಲೆಬ್ರೆಟಿಗಳು ಕೂಡ ಈತನ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬೀಳ್ತಾರಂತೆ. ಇಂಟ್ರಸ್ಟಿಂಗ್ ವಿಚಾರ ಏನೆಂದರೆ ಈತರ ಜೊತೆ ಫೋಟೋ ತೆಗೆದುಕೊಳ್ಳಲು ಮೊದಲು ಈತನಿಗೆ ಲಕ್ಷಾಂತರ ರೂಪಾಯಿ ನೀಡಬೇಕಂತೆ. ಆದರೂ ಕೆಲವು ಸ್ಟಾರ್‌ಗಳು ಹಣ ಪಾವತಿಸಿ ಈತನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಒರಿ ಸೆಲೆಬ್ರೆಟಿಗಳ ಖಾಸಗಿ ಕಾರ್ಯಕ್ರಮಗಳಿಗೆ ಭಾಗಿ ಆದರೆ ಒಂದು ಇವೆಂಟ್‌ಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾರೆ. ಬಾಲಿವುಡ್‌ನ ಅನೇಕ ಸ್ಟಾರ್ ಕಿಡ್ಗಳ ಜೊತೆಗೂ ಒರಿ ಅವರಿಗೆ ಸ್ನೇಹ ಇದೆ. ಹೀಗಾಗಿ ಬಾಲಿವುಡ್‌ನ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಒರಿ ಕೂಡ ಕಾಣಿಸಿಕೊಳ್ಳುತ್ತಾರೆ.

ಇಷ್ಟೆಲ್ಲಾ ಫೇಮಸ್ ಆಗಿರುವ, ಗಂಟೆ ಗಂಟೆಗೂ ಲಕ್ಷಾಂತರ ರೂಪಾಯಿ ಗಳಿಸುವ ಒರಿ ತಮ್ಮ ಗಳಿಕೆಯ ಬಗ್ಗೆ ಇತ್ತೀಚಿಗೆ ಮಾತನಾಡಿದ್ದಾರೆ. ಒಂದು ಫೋಟೋ ಕೇಳಿದರೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ನಾನಾಗೇ ಬಂದು ಫೋಟೋ ಕ್ಲಿಕ್ಕಿಸಿಕೊಂಡರೆ ಹಣ ಇಲ್ಲ. ಯಾರಾದರೂ ಬಂದು ಟಚ್ ಮಾಡುವಂತೆ ಕೇಳಿದರೆ 20 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ. ಎಲ್ಲರೂ ಫಾರ್ಮ್ಹೌಸ್ಗೆ ಕರೆಯುತ್ತಾರೆ. ಅಲ್ಲಿ ನನ್ನನ್ನು ಟಚ್ ಮಾಡುತ್ತಾರೆ. ದಿನಕ್ಕೆ 25 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತೇನೆ ಎಂದು ಒರಿ ಬಹಿರಂಗವಾಗಿ ಹೇಳಿದ್ದಾರೆ.
ಒರಿ ಸಂಪಾದನೆಯ ಮಾರ್ಗ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಒಂದು ಟಚ್‌ಗೆ 25 ಲಕ್ಷ ರೂಪಾಯಿ ಗಳಿಸುತ್ತಾರಾ ಎಂದು ಅಚ್ಚರಿಗೊಂಡಿದ್ದಾರೆ. ಇನ್ನು ಕಷ್ಟಪಟ್ಟು ಕೆಲಸ ಮಾಡುವ ಬಗ್ಗೆ ಯಾರಿಗೆ ಆಲೋಚನೆ ಇರುತ್ತದೆ ಎಂದಿರುವ ಒರಿ. ನನಗೆ ಕೆಲಸ ಅಂದರೆ ಬೇಸರ. ಟಿವಿ, ಸಿನಿಮಾಗಳಲ್ಲಿ ತುಂಬಾನೇ ಕೆಲಸ ಇರುತ್ತದೆ ಎಂದಿದ್ದಾರೆ. ಅಂದಹಾಗೆ ಒರಿ ತಮ್ಮದೇ ಆದ ತಂಡ ಹೊಂದಿದ್ದು, ಈವೆಂಟ್ಗಳನ್ನು ಮ್ಯಾನೇಜ್‌ಮೆಂಟ್ ಮೂಲಕ ಗಳಿಸುತ್ತಾರೆ ಎಂದು ತಿಳಿಸಿದ್ದಾರೆ.












Click it and Unblock the Notifications