Get Updates
Get notified of breaking news, exclusive insights, and must-see stories!

ಬಿಗ್‌ ಬಾಸ್‌ ವಿನ್ನರ್ ಕಿಸ್ಸಿಂಗ್: ನಡುರಾತ್ರಿಲಿ ಜಾಲಿ ಜಾಲಿ ಮೂಡ್‌ ಕಿಸ್ ಸೀನ್ ಫೋಟೋಸ್ ಭಾರೀ ವೈರಲ್‌

Bigg Boss: ಬಿಗ್ ಬಾಸ್‌ ಮನೆಯಲ್ಲಿ ಕೆಲವು ಕಿಸ್ಸಿಂಗ್‌ ಸೀನ್‌ಗಳನ್ನು ನೋಡಿಯೇ ಇರುತ್ತೇವೆ. ಆದರೆ ಇದೀಗ ಬಿಗ್ ಬಾಸ್‌ ವಿನ್ನರ್ ಸಹ ಸ್ಪರ್ಧಿಯೊಬ್ಬರ ಜೊತೆ ಕಿಸ್‌ ಮಾಡಿರುವ ಪೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಭಾರೀ ವೈರಲ್‌ ಆಗುತ್ತಿವೆ. ಅಲ್ಲದೆ ಚರ್ಚೆಗೂ ಎಡೆಮಾಡಿಕೊಟ್ಟಿವೆ. ಹಾಗಾದ್ರೆ ಆ ಚೆಲುವೆ ಯಾರೆಂದು ಇಲ್ಲಿ ತಿಳಿಯಿರಿ.

ಈಗಾಗಲೇ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಮೊನ್ನೆಯಷ್ಟೇ ಮುಗಿದಿದ್ದು, ವಿನ್ನರ್ ಹನುಂತುಗೆ ಇಡೀ ರಾಜ್ಯಾದ್ಯಂತ ಪ್ರಶಂಸೆಗಳ ಸುರಿಮಳೆ ಹರಿದುಬರುತ್ತಿದೆ. ಯಾಕೆಂದರೆ ಉತ್ತರ ಕರ್ನಾಟಕ ಅನ್ನೋದಕ್ಕಿಂತ ಸಾಮಾನ್ಯ ಕುಟುಂಬ, ಅದರಲ್ಲೂ ಒಬ್ಬ ಕುರಿಗಾಯಿ ಇಷ್ಟರ ಮಟ್ಟಿಗೆ ಬಂದು ಬಿಗ್‌ ಬಾಸ್‌ ವಿನ್ನರ್ ಆಗುವುದು ಸುಲಭದ ಮಾತಲ್ಲ. ಇದೀಗ ಅವರು ಈ ಸಾಧನೆ ಮಾಡುವ ಮೂಲಕ ಇಡೀ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ. ಅಲ್ಲದೆ, ಟಾಲೆಂಟ್‌ ಇದ್ದರೆ ಎಂಥವರೂ ಕೂಡ ಇಂತಹ ದೊಡ್ಡ ದೊಡ್ಡ ಶೋಗಳನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ.

Bigg Boss Winner s Kissing Photos Goes Viral

ಬಿಗ್‌ ಬಾಸ್‌ ಗೆಲ್ಲಲ್ಲು ಸ್ಪರ್ಧಿಗಳು ಹರಸಾಹಸ ಪಟ್ಟಿದ್ದನ್ನು ನಾವು ನೋಡಿದ್ದೇವೆ. ಆದರೆ ಹನುಮಂತು ಮಾತ್ರ ಯಾರ ತೆಗಳಿಕೆ ಮಾತುಗಳನ್ನೂ ಕಿವಿಗೆ ಹಾಕಿಕೊಳ್ಳದೆ, ತನ್ನ ಪಾಡಿಗೆ ತಾನು ಟಾಸ್ಕ್‌ಗಳನ್ನು ಉತ್ತಮವಾಗಿ ಆಡುವ ಮೂಲಕ ಇಡೀ ರಾಜ್ಯದ ಜನರ ಮನ ಗೆದ್ದು, ಟ್ರೋಪಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಹೀಗೂ ಆಟ ಆಡಿ ಡೊಡ್ಡ ದೊಡ್ಡ ಶೋಗಳಲ್ಲಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಬರೀ ಮೈಕಟ್ಟು ಬೆಳೆಸಿಕೊಂಡರೆ ಸಾಲದು. ಬದಲಿಗೆ ಯಾರನ್ನೂ ಹೀಯಾಳಿಸದೇ ತಮ್ಮ ಪಾಡಿಗೆ ತಾವು ಉತ್ತಮವಾಗಿ ಆಡುವ ಮೂಲಕ, ಆಟದಲ್ಲಿ ಸ್ನೇಹಿತರು ಎಂದು ನೋಡದೇ ತೀರ್ಪು ಕೊಡುವುದು ಕೂಡ ಒಬ್ಬ ನಿಜವಾದ ಆಟಗಾರನ ಲಕ್ಷಣ ಎಂದು ಹನುಮಂತು ತೋರಿಸಿಕೊಟ್ಟಿದ್ದಾರೆ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಹಿಸುತ್ತದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಆಟ, ಕೆಲಸದ ವಿಚಾರದಲ್ಲಿ ತಮ್ಮವರು, ತಮ್ಮವರು ಎಂಬ ಭಾವನೆಗಳನ್ನು ಬಿಡಬೇಕಾಗುತ್ತದೆ. ಅಲ್ಲಿ ಗುರಿಯೊಂದು ಮುಖ್ಯವಾಗುತ್ತದೆ. ಇದರಿಂದ ಹೊರಗಡೆ ಬಂದ ಮೇಲೆ ಎಲ್ಲಾ ಅಂತಲೂ ಇವರ ಆಟದಿಂದ ತಿಳಿಯಬಹುದಾಗಿದೆ.

ಮತ್ತೊಂದೆಡೆ ನೋಡೋದಾದ್ರೆ ಬಿಗ್ ಬಸ್‌ ಮನೆಯಲ್ಲಿ ಕೆಲವರು ಎಲ್ಲಾ ಟಾಸ್ಕ್‌ಗಳನ್ನು ಮರೆತು ಪ್ರೀತಿ, ಪ್ರೇಮದಲ್ಲಿ ಬಿದ್ದು ಕೊನೆಗೆ ಮನೆಗೆ ಹೋಗಿರುವ ಘಟನೆಗಳು ನಡೆದಿವೆ. ಆದರೆ, ಈ ಎಲ್ಲದರ ನಡುವೆ ಕೆಲವರು ಪ್ರೀತಿಯಲ್ಲಿ ಬಿದ್ದರೂ ಸಹ ಟಾಸ್ಕ್‌ಗಳನ್ನು ಉತ್ತಮವಾಗಿ ಆಡುವ ಮೂಲಕ ಜನಮನ್ನಣೆ ಪಡೆದು ವಿನ್‌ ಆಗಿರುವ ಘಟನೆಗಳು ಇವೆ. ಇದಕ್ಕೆ ಹಿಂದಿ ಬಿಗ್‌ ಸೀಸನ್‌ 18 ಕಾರಣವಾಗಿದೆ.

ಬಿಗ್ ಬಾಸ್ ಹಿಂದಿ 18 ಸೀಸನ್‌ ವಿಜೇತ ಕರಣ್ ವೀರ್ ಮೆಹ್ರಾ ಪ್ರಸ್ತುತ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತನ್ನ ದೊಡ್ಡ ಗೆಲುವಿನ ಮೂಲಕ ಎಲ್ಲರ ಗಮನವ ಸೆಳೆಸಿರುವ ಕರಣ್ ವೀರ್ ಮೆಹ್ರಾ ಮತ್ತು ಚುಮ್ ದರಂಗ್ ಅವರು ಇತ್ತೀಚೆಗೆ ಬಿಗ್ ಬಾಸ್ 18 ರಲ್ಲಿ ಭಾಗವಹಿಸಿ ಅಲ್ಲಿ ಅವರು ಕೆಲವೊಂದು ನೋಟಗಳ ಮೂಲಕ ವೀಕ್ಷಕರ ಗಮನ ಸೆಳೆಸಿದ್ದರು.

ಆಗ ಇವರಿಬ್ಬರ ನಟುವೆ ಏನೋ ನಡುಯುತ್ತಿದೆ ಎಂದು ಅಭಿಮಾನಿಗಳು ಸೇರಿದಂತೆ ತುಂಬಾ ಜನ ಮಾತನಾಡಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗಳು ಜೋರಾಗಿ ನಡೆಯುತ್ತಿದ್ದವು. ಇನ್ನು ಕರಣ್ ವೀರ್ ವಿಜೇತರಾಗಿ ಹೊರಗಡೆ ಬಂದ ಕೆಲ ದಿನಗಳ ಬಳಿಕ ಮತ್ತೆ ಇತ್ತೀಚಿನ ಪೋಸ್ಟ್ ಫ್ಯಾನ್ಸ್‌ ಗಮನ ಸೆಳೆದಿದೆ. ಚುಮ್ ದಾರಂಗ್ ಜೊತೆ ಡೇಟೆಂಗ್ಸ್ ಮಾಡುತ್ತಿದ್ದಾರಾ ಎಂದು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದೆ.

ನಟ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಂತೆ ಚುಮ್ ಅವರು ಮತ್ತಷ್ಟು ಹತ್ತಿರಕ್ಕೆ ಬಂದು ಪೋಸ್‌ ನೀಡಿದ್ದು, ಇದರಲ್ಲಿ ಚುಮ್ ಕರಣ್ ಹಣೆಗೆ ಮುತ್ತಿಟ್ಟಂತೆ ಕಾಣುತ್ತಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡ ತಕ್ಷಣ ಚುಮ್‌ವೀರ್ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನೀವು ಕ್ಯೂಟೀಸ್ ಎಂದು ಅಭಿಮಾನಿಗಳಲ್ಲೊಬ್ಬರು ಎಂದು ಬರೆದಿದ್ದಾರೆ. ಅಲ್ಲದೆ, ನೀವು ಒಟ್ಟಿಗೆ ತುಂಬಾ ಮುದ್ದಾಗಿ ಕಾಣುತ್ತೀರಿ ಎಂದು ಕಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಗ್ ಬಾಸ್ 18ರ ಫೈನಲ್ ನಂತರ ತಮ್ಮ ಸ್ನೇಹದ ಬಗ್ಗೆ ಕರಣ್‌ ಪ್ರತಿಕ್ರಿಯಿಸಿದ್ದು, ಈ ಸ್ನೇಹ ಮುಂದುವರಿಯುತ್ತದೆ. ಮನೆಯ ಹೊರಗೆ ಕೂಡ ಸ್ನೇಹ ಮುಂದುವರಿಯುತ್ತದೆ ಎಂದು ಹೇಳಿದರು. ಇನ್ನು ಬಿಗ್ ಬಾಸ್ 18 ಜನವರಿ 19ರಂದು ಮುಕ್ತಾಯಗೊಂಡಿತು. ಕರಣ್ ವೀರ್ ಮೆಹ್ರಾ ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದರು. ಚುಮ್ ಕೂಡ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಬಿಗ್ ಬಾಸ್ 18ರ ವಿಜೇತರಾಗಿ ಕರಣ್ 50,00,000 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿಯನ್ನು ಗೆದ್ದರು.

ಹೀಗೆ ಮನರಂಜನೆ ಕ್ಷೇತ್ರಕ್ಕೆ ಬಂದರೆ ಕೆಲವೊಂದು ಸೀನ್‌ಗಳು ಭಾರೀ ವೈರಲ್‌ ಆಗಿಬಿಡುತ್ತವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಕಣ್ಣಾಯಿಸುವುದೇ ಮನರಂಜನೆ ಕಾರ್ಯಕ್ರಮಗಳ ಮೇಲೆ. ಅದರಲ್ಲೂ ರಿಯಾಲಿಟಿ ಶೋಗಳಲ್ಲಿ ಬಿಗ್‌ ಬಾಸ್‌ ಅತ್ಯಂತ ದೊಡ್ಡ ಶೋ ಆಗಿದ್ದು, ಇದನ್ನು ಕನ್ನಡ, ಹಿಂದಿ, ತೆಲುಗಿನಲ್ಲಿ ಮಾಡಲಾಗುತ್ತದೆ. ಇನ್ನೂ ಈ ಶೋ ಆರಂಭವಾದರೆ ಸಾಕು ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತಾರೆ. ಅದರಲ್ಲೂ ಈ ಶೋನ ಪ್ರತಿಯೊಂದು ಸೀನ್‌ಗಳನ್ನು ವೀಕ್ಷಣೆ ಮಾಡುತ್ತಾರೆ. ಇದು ಒಳಗಡೆ ಇರುವ ಸ್ಪರ್ಧಿಗಳಿಗೆ ಗೊತ್ತಾಗುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+