Bigg Boss: ರಜತ್ ಕುತಂತ್ರಕ್ಕೆ ಮತ್ತೊಂದು ವಿಕೆಟ್: ಫಿನಾಲೆ ಟಿಕೆಟ್ ಕಳೆದುಕೊಂಡ ಮಂಜು
ಬಿಗ್‌ಬಾಸ್ ಕನ್ನಡ ಸೀಸನ್ 11 ಬೆರಳೆಣಿಕೆ ವಾರದಲ್ಲಿ ಮುಗಿಯಲಿದೆ. ಈ ಸಮಯದಲ್ಲಿ ಮೈಂಡ್ ಗೇಮ್ ಆಡಲು ಸ್ಪರ್ಧಿಗಳು ಶುರು ಮಾಡಿದ್ದಾರೆ. ಟಫ್ ಸ್ಪರ್ಧಿಗಳೊಂದಿಗೆ ಸೇರಿಕೊಂಡು ಕುತಂತ್ರದ ಆಟ ಆಡಲು ಆರಂಭಿಸಿದ್ದಾರೆ. ಇದಕ್ಕೆ ಬಿಗ್‌ಬಾಸ್ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ನಿಯತ್ತಾಗಿ ಆಡುವ ಸ್ಪರ್ಧಿಗಳಿಗೆ ಕೆಲ ಸ್ಪರ್ಧಿಗಳು ಮಾಡುವ ಕುತಂತ್ರದಿಂದ ಮೋಸ ಆಗುತ್ತಿದೆ ಎನ್ನುವುದು ಮಾತ್ರ ಇಲ್ಲಿ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಈ ಕುತಂತ್ರದ ಆಟದಲ್ಲಿ ಮುಖ್ಯ ಸೂತ್ರಧಾರಿ ಕ್ಯಾಪ್ಟನ್ ರಜತ್.
ಹೌದು... ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ತಮ್ಮದೇ ಆದ ಹವಾ ಸೃಷ್ಟಿ ಮಾಡಿದ್ದಾರೆ. ಮಾತು, ಜಗಳ ಎಲ್ಲದರ ಜೊತೆಗೆ ಮನೆಯ ಎಲ್ಲಾ ಸ್ಪರ್ಧಿಗಳ ಆಟದ ವೈಖರಿಯನ್ನು ಅರ್ಥ ಮಾಡಿಕೊಂಡ ರಜತ್ ಕಠಿಣ ಪೈಪೋಟಿ ನೀಡುವ ಸ್ಪರ್ಧಿಯೊಂದಿಗೆ ಕೈ ಜೋಡಿಸಿ ಆಡುತ್ತಿರುವುದು ಇಲ್ಲಿ ಕಂಡು ಬಂದಿದೆ. ಹಾಗಾದರೆ ಮಂಜಣ್ಣನನ್ನು ಸೋಲಿಸಲು ಸಂಚು ಮಾಡಿದ್ರಾ ರಜತ್? ಗ್ರ್ಯಾಂಡ್ ಫಿನಾಲೆ ತಲುಪಲು ರಜತ್ ಮಾಡಿದ ಕುತಂತ್ರವೇನು? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.

ಬಿಗ್‌ಬಾಸ್ ಮನೆಯಲ್ಲಿ ಟಫ್ ಸ್ಪರ್ಧಿ ಅಂದರೆ ಅದು ತ್ರಿವಿಕ್ರಮ್ ಹಾಗೂ ಮಂಜು. ಇವರಿಬ್ಬರಲ್ಲಿ ತಾವೂ ಒಬ್ಬರು ಆಗಬೇಕು ಎನ್ನುವ ಛಲದಿಂದ ರಜತ್ ಮೋಸದ ಆಟವನ್ನು ಆಡಿದ್ದಾರೆ. ಈ ವಾರ ರಜತ್ ಮನೆಯ ಕ್ಯಾಪ್ಟನ್ ಆಗಿದ್ದು ಯಾವುದೇ ಟಾಸ್ಕ್‌ನಲ್ಲಿ ಭಾಗವಹಿಸಿಲ್ಲ. ಬದಲಾಗಿ ಅವರು ಟಾಸ್ಕ್ ಮೇಲ್ವಿಚಾರಕರಾಗಿದ್ದರು. ಹೀಗೆ ಟಾಸ್ಕ್ ಮೇಲ್ವಿಚಾರಣೆಯಲ್ಲಿ ರಜತ್ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಾಸ್ಟರ್ ಗೇಮ್ ಆಡಿದ್ದಾರೆ.
ರಜತ್ ಕುತಂತ್ರಕ್ಕೆ ಮತ್ತೊಂದು ವಿಕೆಟ್
ಕಳೆದ ದಿನ ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ವೊಂದನ್ನು ನೀಡಲಾಗಿತ್ತು. ಈ ಆಟದಲ್ಲಿ ಎರಡು ತಂಡದಲ್ಲಿ ಇಬ್ಬರು ಸ್ಪರ್ಧಿಗಳು ಇದ್ದರು. ಒಂದರಲ್ಲಿ ಮೋಕ್ಷಿತಾ ಭವ್ಯಾ ಹಾಗೂ ಮತ್ತೊಂದರಲ್ಲಿ ಮಂಜು ಹಾಗೂ ಗೌತಮಿ. ಆಟ ಏನು ಅಂದರೆ ಇಬ್ಬರು ಸ್ಪರ್ಧಿಗಳ ಪೈಕಿ ಒಬ್ಬರು ನೀರಿನ ತೊಟ್ಟಿಯಲ್ಲಿ ಮಲಗಬೇಕು. ಆ ತೊಟ್ಟಿಯಲ್ಲಿ ನೀರು ತುಂಬಲು ಆರಂಭವಾಗುತ್ತದೆ. ಆ ನೀರನ್ನು ಇನ್ನೊಬ್ಬ ಸ್ಪರ್ಧಿ ಬಿಂದಿಗೆಯಿಂದ ತೆಗೆದು ಹಾಕಬೇಕು, ಜೊತೆಗೆ ಆ ತೊಟ್ಟಿಯಲ್ಲಿ ನೀರು ತುಂಬುತ್ತಿದಂತೆ ಉಸಿರಾಟವನ್ನು ಮಲಗಿರುವ ಸ್ಪರ್ಧಿ ಬ್ಯಾಲೆನ್ಸ್ ಮಾಡಬೇಕು.

ಈ ಟಾಸ್ಕ್ ನಿಯಮ ತೊಟ್ಟಿಯಲ್ಲಿ ಮಲಗಿರುವ ಸ್ಪರ್ಧಿ ಕಾಲನ್ನು ಮಡಚುವಂತಿಲ್ಲ. ಕಾಲನ್ನು ನೇರವಾಗಿ ಇಟ್ಟು ಮಲಗಬೇಕು. ನೀರು ತುಂಬಿದಂತೆ ಉಸಿರಾಟವನ್ನು ಬ್ಯಾಲೆನ್ಸ್ ಮಾಡಬೇಕು. ಈ ಆಟದ ಮೇಲ್ವಿಚಾರಣೆ ಮಾಡಿದ ರಜತ್ ಸರಿಯಾಗಿ ತಮ್ಮ ಕಾರ್ಯವನ್ನು ನಿಭಾಯಿಸಿಲ್ಲ. ಆಟದಲ್ಲಿ ಮೋಕ್ಷಿತಾ ಕಾಲನ್ನು ಮಡಚುತ್ತಾರೆ. ಆದರೆ ರಜತ್ ಈ ಬಗ್ಗೆ ಗಮನವಿದ್ದರೂ ಕೂಡ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ಇತ್ತ ಕಾಲು ಮಡಚದೇ ನೀರಿನಲ್ಲಿ ಸರಿಯಾಗಿ ಮಲಗಿದ್ದ ಮಂಜು ಅವರ ತೊಟ್ಟಿಯಲ್ಲಿ ನೀರು ಹೆಚ್ಚಾಗಿ ಉಸಿರುಗಟ್ಟಲು ಶುರುವಾದಾಗ ಮಂಜು ನೀರಿನಿಂದ ಮೇಲೆ ಎದ್ದು ಬರುತ್ತಾರೆ. ಇಲ್ಲಿಗೆ ಮಂಜು ಹಾಗೂ ಗೌತಮಿ ಆಟದಲ್ಲಿ ಸೋತು ಮೋಕ್ಷಿತಾ ಹಾಗೂ ಭವ್ಯಾ ಆಟದಲ್ಲಿ ಜಯ ಸಾಧಿಸುತ್ತಾರೆ.
ರಜತ್ ಬಿಗ್ ಪ್ಲ್ಯಾನ್ ಹೇಗಿದೆ..?
ಇಲ್ಲಿ ರಜತ್ ಬಿಗ್ ಪ್ಲ್ಯಾನ್ ಅನ್ನೇ ಮಾಡಿದ್ದಾರೆ. ಫಿನಾಲೆ ಟಿಕೆಟ್ ಪಡೆಯಲು ಈಗಾಗಲೇ ತ್ರಿವಿಕ್ರಮ್, ರಜತ್, ಹನುಮಂತ ಸೆಲೆಕ್ಟ್ ಆಗಿದ್ದಾರೆ. ಈ ಆಟದಲ್ಲಿ ಮಂಜು ಇದ್ದರೆ ಮಂಜು ಹಾಗೂ ತ್ರಿವಿಕ್ರಮ್ ಅವರನ್ನು ಫಿಸಿಕಲ್ ಟಾಸ್ಕ್‌ನಲ್ಲಿ ಸೋಲಿಸುವುದು ಕಷ್ಟವಾಗಬಹುದು. ಹೀಗಾಗಿ ಮಂಜು ಅವರನ್ನು ಈಗಲೇ ಟಿಕೆಟ್ ಟು ಫಿನಾಲೆಯಿಂದ ಹೊರಗಿಟ್ಟರೆ ಆಟ ಸುಲಭವಾಗುತ್ತದೆ ಎಂದು ರಜತ್ ಬಿಗ್ ಪ್ಲ್ಯಾನ್ ಮಾಡಿದ್ದು ಸಕ್ಸಸ್ ಆಗಿದೆ.
ಇನ್ನೂ ಮೋಕ್ಷಿತಾ ಹಾಗೂ ಭವ್ಯಾ ಗೌಡ ಈ ಇಬ್ಬರಲ್ಲಿ ಒಬ್ಬರು ಅಂದರೆ ಭವ್ಯಾ ಗೌಡ ಫಿನಾಲೆ ಟಿಕೆಟ್ ಪಡೆದರು. ಭವ್ಯಾ ಹಾಗೂ ಹನುಮಂತ ಇಬ್ಬರನ್ನು ಫಿಸಿಕಲ್ ಟಾಸ್ಕ್‌ನಲ್ಲಿ ತುಂಬಾ ಸುಲಭವಾಗಿ ಸೋಲಿಸಬಹುದು. ಆದರೆ ಮಂಜು ಈ ಸ್ಥಾನದಲ್ಲಿ ಇದ್ದರೆ ಆಟದಲ್ಲಿ ಇಬ್ಬರು (ತ್ರಿವಿಕ್ರಮ್ ಹಾಗೂ ಮಂಜು) ಕಠಿಣ ಸ್ಪರ್ಧಿಗಳೊಂದಿಗೆ ಹೋರಾಡಬೇಕಾಗಿತ್ತು. ಇದೇ ಗೇಮ್ ಪ್ಲ್ಯಾನ್‌ನಿಂದ ರಜತ್ ಆಟದ ಮೇಲುಸ್ತುವಾರಿಯನ್ನು ಸರಿಯಾಗಿ ಮಾಡಲೇ ಇಲ್ಲ. ಮೋಕ್ಷಿತಾ ಆಟದ ನಿಯಮ ಪಾಲಿಸದೇ ಇದ್ದರೂ ಕೂಡ ರಜತ್ ಸುಮ್ಮನೆ ನೋಡಿಕೊಂಡು ನಿಂತಿದ್ದರು. ಆದರೆ ಮಂಜು ಅವರಿಗೆ ಮಾತ್ರ ಸರಿಯಾಗಿ ಆಟದ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡುತ್ತಲೇ ಇದ್ದರು.
ಹಾಗೇ ನೋಡಿದರೆ ಮೋಕ್ಷಿತಾ ಆಟದ ನಿಯಮ ಪಾಲಿಸದೇ ಇದ್ದಿದ್ದಕ್ಕಾಗಿ ಮಂಜು ಗೆಲ್ಲಬೇಕಿತ್ತು. ಆದರೆ ರಜತ್ ತಪ್ಪಾದ ನಿರ್ಧಾರದಿಂದ ಮೋಕ್ಷಿತಾ ಹಾಗೂ ಭವ್ಯಾ ಗೆಲುವು ಸಾಧಿಸಿದ್ದಾರೆ. ರಜತ್ ಮೋಸದ ಆಟವನ್ನು ಹನುಮಂತನ ವಿಚಾರದಲ್ಲಿ ಆಡಿದರು. ಆದರೆ ಹನುಮಂತ ಆಡಿ ಗೆದ್ದು ಫಿನಾಲೆ ಟಿಕೆಟ್ ಪಡೆದರು. ಇದೀಗ ಮಂಜು ಅವರಿಗೂ ಮೋಸ ಆಗಿದೆ. ಇದಕ್ಕೆ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ರಜತ್ ಅವರಿಗೆ ತರಾಟೆ ತೆಗೆದುಕೊಳ್ಳುವುದು ಮಾತ್ರ ಗ್ಯಾರಂಟಿ.
ಒಟ್ಟಿನಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲು ರಜತ್ ಮೋಸದ ಆಟ ಆಡುತ್ತಿದ್ದು ವೀಕ್ಷಕರಿಗೆ ಬೇಸರ ತಂದಿದೆ. ಇದು ರಜತ್ ಅವರ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications