Lawyer Jagadish: ರಂಜಿತ್ ಮೆಣಸಿನಕಾಯಿ, ಅನುಶಾ ಬೆಂಡೆಕಾಯಿ, ಮಾನಸಾ? ಬಿಗ್‌ಬಾಸ್ ಸ್ಪರ್ಧಿಗಳಿಗೆ ತರಕಾರಿಗಳ ಹೆಸರು ಇಟ್ಟ ಲಾಯರ್
ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ಸದ್ದು ಮಾಡಿದ್ದ ಲಾಯರ್ ಜಗದೀಶ್ ದೊಡ್ಮೆಯಿಂದ ಹೊರಬಂದ ಬಳಿಕ ಅಡುಗೆ ಕೂಡ ತಯಾರಿಸಿದ್ದಾರೆ. ಕಲರ್ಸ್ ಕನ್ನಡದ ಸವಿರುಚಿ ಕಾರ್ಯಕ್ರಮದಲ್ಲಿ ಇಂದು ಅಡುಗೆ ತಯಾರಿಸಿದ ಜಗದೀಶ್ ತರಕಾರಿಗಳ ಹೆಸರನ್ನು ಬಿಗ್‌ಬಾಸ್ ಸ್ಪರ್ಧಿಗಳಿಗೆ ಇಟ್ಟಿದ್ದಾರೆ. ಒಂದೊಂದು ಹೆಸರನ್ನು ಒಬ್ಬೊಬ್ಬರಿಗೆ ಇಟ್ಟು ನಿರೂಪಕಿ ಜಾನವಿ ಜೊತೆಗೆ ಕಾಮಿಡಿ ಮಾಡಿದ್ದಾರೆ. ಹಾಗಾದರೆ ಯಾವ ತರಕಾರಿ ಹೆಸರು ಯಾರಿಗೆ ಇಟ್ಟರು, ಅಡುಗೆ ಮಾಡುತ್ತಾ ಜಗದೀಶ್ ಯಾವೆಲ್ಲಾ ವಿಚಾರಗಳನ್ನು ಹಂಚಿಕೊಂಡರು ಅನ್ನೋದನ್ನು ತಿಳಿಯೋಣ.
ಇಂದು ಲಾಯರ್ ಜಗದೀಶ್ ಸವಿರುಚಿ ಕಾರ್ಯಕ್ರಮದಲ್ಲಿ ಜಾನವಿ ಜೊತೆಗೂಡಿ 'ಜಗ್ಗು ಆಂಡ್ ಜಾನ್ಸ್ ಬದನೆಕಾಯಿ ಗೊಜ್ಜು' ತಯಾರಿಸಿದರು. ಈ ವೇಳೆ ರಂಜಿತ್ ಅವರನ್ನು ಹಸಿ ಮೆಣಸಿನಕಾಯಿ, ಅನುಶಾ ಬೆಂಡೆಕಾಯಿ, ಮಾನಸ ಬದನೆಕಾಯಿ ಎಂದು ಕಾಮಿಡಿ ಮಾಡಿದ್ದಾರೆ. ಮಾನಸಾ ಬದನೆಕಾಯಿ ಎನ್ನುತ್ತಿದ್ದಂತೆ ಜಾನವಿ ಜೋರಾಗಿ ನಗಾಡಿದ್ದಾರೆ. ಜೊತೆಗೆ ಬಿಗ್‌ಬಾಸ್‌ಗೆ ನೆಚ್ಚಿನ ಖಾದ್ಯದ ಬಗ್ಗೆಯೂ ಜಗದೀಶ್ ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್‌ಗೆ ಇದು ತುಂಬಾ ಇಷ್ಟ....
ಬಿಗ್‌ಬಾಸ್‌ಗೆ ಯಾವ ಅಡುಗೆ ಅಂದ್ರೆ ಇಷ್ಟ ಅಂತ ನನ್ನೊಬ್ಬನಿಗೆ ಗೊತ್ತು. ಬಿಗ್‌ಬಾಸ್‌ಗೆ ಇಡ್ಲಿ ಅಂದ್ರೆ ಇಷ್ಟ, ಅದ್ರಲ್ಲೂ ಗ್ರೀನ್ ಚಟ್ನಿ ಹಾಗೂ ಕೆಂಪು ಚಟ್ನಿ ಅಂದ್ರೆ ಬಿಗ್‌ಬಾಸ್‌ಗೆ ತುಂಬಾನೇ ಇಷ್ಟ. ಅದನ್ನು ನಾನು ಬಿಗ್‌ಬಾಸ್‌ಗೆ ತಿನ್ನಿಸುತ್ತಿದ್ದೆ. ನೀನು ನಿಮ್ಮ ಸವಿರುಚಿ ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ಗೆ ಇಷ್ಟವಾಗುವ ಖಾದ್ಯಗಳನ್ನು ಮಾಡಿ ಬಡಿಸು, ಬಿಗ್‌ಬಾಸ್ ಕೂಡ ಸವಿರುಚಿ ಕಾರ್ಯಕ್ರಮಕ್ಕೆ ಬರುತ್ತಾರೆ ಅಂತ ಜಗದೀಶ್ ಜಾನವಿಗೆ ಕಾಲೆಳೆದಿದ್ದಾರೆ.
ಅಷ್ಟೇ ಅಲ್ಲ ಬಿಗ್‌ಬಾಸ್‌ಗೆ ಧಮ್ ಬಿರಿಯಾನಿ ಅಂದ್ರೆ ಇಷ್ಟ. ಅದನ್ನು ಮಧ್ಯಾಹ್ನ ಊಟಕ್ಕೆ ತಯಾರಿಸು, ರಾತ್ರಿಗೆ ಮುದ್ದೆ ನಾಟಿ ಕೋಳಿ ಸಾರು ಮಾಡಿಬಿಡು. ಧಮ್ ಬಿರಿಯಾನಿ ಮಾಡ್ಬೇಕು ಅಂದ್ರೆ ಧಮ್ ಇರಬೇಕು, ಅದು ಇದೆ ತಾನೆ ನಿಂಗೆ ಅಂತ ಜಗದೀಶ್ ಜಾನವಿಗೆ ಪ್ರಶ್ನೆ ಮಾಡಿ ರೇಗಾಡಿಸಿದ್ದಾರೆ.
ಹಂಸ ಮೇಲೆ ಲವ್ ಇತ್ತಾ..?
ಜಾನವಿ ಅಡುಗೆ ಮಾಡುತ್ತಲೇ ಜಗದೀಶ್ ನಿಮಗೆ ಹಂಸ ಮೇಲೆ ಲವ್ ಶುರುವಾಗಿತ್ತಾ ಅಂತ ಪ್ರಶ್ನೆ ಮಾಡುತ್ತಾರೆ. ಆಗ ಜಗದೀಶ್... ಹಂಸ ಗುಡ್ ಫ್ರೆಂಡ್.. ಸಾರಿ ಆಕೆಯನ್ನು ನಾನು ಕೊನೆಯಲ್ಲಿ ತುಂಬಾ ನೋಯಿಸಿಬಿಟ್ಟೆ. ನಾನು ಹಂಸ್ ಅಂದ್ರೆ ಸಾಕು ಖುಷಿಯಾಗಿ ಬಿಡ್ತಾಯಿದ್ಲು. ನನ್ನ ಬಗ್ಗೆ ಕೇಳಿದಾಗ ಖುಷಿಯಾಗಿ ಮಾತನಾಡೋಳೋ. ಸುಮ್ನೆ ನಾನು ಅವಳಿಗೆ ಕಾಲೆಳೆಯುತ್ತಿದೆ. ಆಕೆಗೆ ನಾನು ಹರ್ಟ್ ಮಾಡಿದ್ದೇನೆ. ಅದಕ್ಕೆ ನಾನು ಸುಮಾರು ಬಾರಿ ಸಾರಿ ಕೇಳಿದ್ದೇನೆ. ಈಗಲೂ ಸಾರಿ ಕೇಳ್ತೇನೆ. ಸಾರಿ ಹಂಸ್... ಅಂತ ತಮ್ಮದೇ ಆದ ಸ್ಟೈಲ್‌ನಲ್ಲಿ ಜಗದೀಶ್ ಹೇಳಿದರು.

ಜಗದೀಶ್ ನಿಮಗೆ ಅಡುಗೆ ಬರುತ್ತಾ?
ಈ ಪ್ರಶ್ನೆಗೆ ಉತ್ತರಿಸಿದ ಜಗದಿಶ್... ಅಮ್ಮ ಅಡುಗೆ ಮಾಡೋದ್ ಕಲಿಸಿದ್ರು. ಚಿತ್ರನ್ನ, ಉಪ್ಪಿಟ್ಟು, ಮುದ್ದೆ, ರುಚಿಯಾಗಿ ಮಾಡಿಲ್ಲ ಅಂದ್ರೂ ತಿನ್ನೋತರ ಮಾಡುತ್ತೇನೆ. ಆದರೆ ಇತ್ತೀಚೆಗೆ ಯಾವತ್ತೂ ಕೂಡ ನಾನು ಅಡುಗೆ ಮಾಡಿಲ್ಲ. ಮಾಡಿದಾಗ ಮಾತ್ರ ಸ್ವಲ್ಪ ತಿನ್ನೋತರ ಅಂತೂ ಇರುತ್ತೆ. ತುಂಬಾ ಕೆಟ್ಟದಾಗಿ ಏನೂ ಕೂಡ ಮಾಡಲ್ಲ. ಬರದೇ ಇರೋ ಅಡುಗೆಯನ್ನು ನಾನು ಮಾಡಲು ಹೋಗುವುದೇ ಇಲ್ಲ ಎಂದಿದ್ದಾರೆ ಲಾಯರ್ ಜಗದೀಶ್.












Click it and Unblock the Notifications