Shobha Shetty: ತೆಲುಗು ಬಿಗ್ ಬಾಸ್‌ನಲ್ಲಿ ಧೂಳೆಬ್ಬಿಸಿದ್ದ ಶೋಭಾ ಶೆಟ್ಟಿ ಕನ್ನಡದಲ್ಲಿ ಫುಲ್ ಮೊಯೇ..ಮೊಯೇ
ಬಿಗ್ ಬಾಸ್ ಕನ್ನಡ ಸೀಜನ್ 11 ಆರಂಭವಾದ ದಿನದಿಂದಲೂ ದಿನಕ್ಕೊಂದು ರೋಚಕ ಟ್ವಿಸ್ಟ್ ಇದ್ದೇ ಇರುತ್ತದೆ. ಈ ಬಾರಿ ವಲ್ಡ್ ಕಾರ್ಡ್ ಎಂಟ್ರಿ, ಎಲಿಮಿನೇಷನ್ ಎಲ್ಲವೂ ಬಹಳ ಅಪರೂಪದ ಘಟನೆಗಳಂತೆ ನಡೆದು ಹೋಗುತ್ತಿದೆ. ಆರಂಭ ದಿನಗಳಲ್ಲಿ ಬಹಳ ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದ ನಟ ರಂಜಿತ್ ಹಾಗೂ ಲಾಯರ್ ಜಗದೀಶ್ ನೇರವಾಗಿ ಮನೆಯಿಂದ ಹೊರ ಹೋದರು.
ಹೀಗಾಗಿ ಸಿಂಗರ್ ಹನುಮಂತ ವಲ್ಡ್ ಕಾರ್ಡ್ ಎಂಟ್ರಿ ಪಡೆದು ಇದೀಗ ಫಿನಾಲೆ ಸ್ಪರ್ಧಿ ಎನ್ನುವಂತೆ ಗುರುತಿಸಿಕೊಂಡಿದ್ದಾರೆ. ಇನ್ನು ಸೀಜನ್ ಅರ್ಧ ಮುಗಿತು ಎನ್ನುವಷ್ಟರಲ್ಲಿ ಮತ್ತಿಬ್ಬರು ಸ್ಪರ್ಧಿಗಳು ವಲ್ಡ್ ಕಾರ್ಡ್ ಎಂಟ್ರಿ ಕೊಟ್ಟರು. ತೆಲುಗು ಬಿಗ್ ಬಾಸ್ ಖ್ಯಾತಿಯ ಶೋಭಾ ಶೆಟ್ಟಿ ಹಾಗೂ ರಜತ್ ಬುಜ್ಜಿ ಈ ಬಾರಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟರು.

ಬಿಗ್ ಬಾಸ್ ಮನೆಗೆ ಬರುವ ಸಂದರ್ಭದಲ್ಲಿ ಇಬ್ಬರೂ ಸ್ಪರ್ಧಿಗಳು ಘರ್ಜಿಸುತ್ತಲೇ ಮನೆಯೊಳಗೆ ಎಂಟ್ರಿ ಕೊಟ್ಟರು. ಅದರಲ್ಲೂ ತೆಲುಗು ಬಿಗ್ ಬಾಸ್‌ನಲ್ಲಿ ಧೂಳೆಬ್ಬಿಸಿದ್ದ ಶೋಭಾ ಶೆಟ್ಟಿ ಕನ್ನಡದಲ್ಲಿಯೂ ಹವಾ ಎಬ್ಬಿಸುವ ರೇಂಜ್‌ನಲ್ಲಿ ಎಂಟ್ರಿ ಕೊಟ್ಟರು. ಬಂದ ಮೊದಲ ವಾರ ಎಲ್ಲಾ ವಿಚಾರಗಳಿಗೂ ಸ್ಪಷ್ಟನೆ ಕೇಳುತ್ತಾ ಟಾಸ್ಕ್‌ಗಳಲ್ಲಿ ಮಿಂಚಿದ್ದ ಶೋಭಾ ಶೆಟ್ಟಿ ಎರಡನೇ ವಾರ ಸಂಪೂರ್ಣ ಮೂಲೆ ಗುಂಪಾದರು ಅಷ್ಟೇ ಅಲ್ಲದೇ ಕಳಪೆ ಕೂಡ ಆದರು.
ಕಳೆದ ವಾರ ನಾಮೀನೇಟ್ ಆಗಿದ್ದ ಶೋಭಾ ಶೆಟ್ಟಿ ಅತಿ ಹೆಚ್ಚು ಮತ ಪಡೆದು ಸೇಫ್ ಆದರು. ಆದರೆ ಶೋಭಾ ಶೆಟ್ಟಿ ಮಾತ್ರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರನ್ನು ಬಿಗ್ಬಾಸ್ ಶೋನಲ್ಲಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಹ ಶೋಭಾ ಶೆಟ್ಟಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ ಸುದೀಪ್ ಉಳಿದ ಇಬ್ಬರು ಸ್ಪರ್ಧಿಗಳನ್ನು ಸೇವ್ ಮಾಡಿ ಶೋಭಾ ಶೆಟ್ಟಿಗೆ ಮನೆಯಿಂದ ಹೊರಡುವಂತೆ ತಿಳಿಸಿದ್ದಾರೆ.
ಇಲ್ಲಿಗೆ ನಿನ್ನೆಯ ಸಂಚಿಕೆ ಮುಕ್ತಾಯವಾಗಿದ್ದು, ಇಂದಿನ ಪ್ರೋಮೋದಲ್ಲಿ ಶೋಭಾ ಶೆಟ್ಟಿ ಮನೆಯ ಬಾಗಿಲು ತೆರೆದ ಮೇಲೆ ನಾನು ಹೋಗಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬಂದರಾ..? ಅಥವಾ ಮನೆಯಲ್ಲೇ ಉಳಿದುಕೊಂಡರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಅದೇನೆ ಇರಲಿ ತೆಲುಗು ಬಿಗ್ ಬಾಸ್‌ನಲ್ಲಿ ಆರ್ಭಟಿಸಿದ್ದ ಶೋಭಾ ಶೆಟ್ಟಿ ಕನ್ನಡದಲ್ಲೇ ಸಖತ್ ಡಲ್ ಹೊಡೆದಿದ್ದು, ಸುದೀಪ್ ಮುಂದೆ ಉತ್ತರಿಸುವಾಗಲೂ ಸಖತ್ ಗೊಂದಲದಲ್ಲಿದ್ದರು.
ಬಿಗ್ ಬಾಸ್ ತೆಲುಗು ಸೀಸನ್ 7 ರಲ್ಲಿ ಸ್ಪರ್ಧಿಸಿದ್ದ ಶೋಭಾ ಶೆಟ್ಟಿ 98 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಆದರೆ ಕನ್ನಡದಲ್ಲಿ ಎರಡು ವಾರಗಳು ಸಹ ಇರಲು ಒದ್ದಾಡಿದ್ದಾರೆ. ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್ ಕ್ವಿಟ್ ಮಾಡಿದ ಬಗ್ಗೆ ಕೆಲವು ತೆಲುಗು ವೀಕ್ಷಕರು ಪ್ರತಿಕ್ರಿಯೆ ನೀಡುತ್ತಿದ್ದು, ಣ್ಣುಮಕ್ಕಳು ಏನೇ ಮಾಡಿದ್ರೂ ಕ್ಯೂಟ್ ಅನ್ನಲು ಅದೇನು ತೆಲುಗು ಬಿಗ್ ಬಾಸ್ ಅಂದುಕೊಂಡ್ರಾ ಎಂದು ಟೀಕೆ ಮಾಡುತ್ತಿದ್ದಾರೆ. ಇಂತಹ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.












Click it and Unblock the Notifications