BBK-12:ಬಿಗ್‌ಬಾಸ್ ಸೀಸನ್-12ರ ಸ್ಪರ್ಧಿಗಳು ಇವರೇನಾ? ವೈರಲ್ ಲಿಸ್ಟ್‌ನಲ್ಲಿ ಯಾರೆಲ್ಲರ ಹೆಸರಿದೆ?
ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಇನ್ನೂ ಹತ್ತೇ ದಿನ ಬಾಕಿ ಇದೆ. ಹೊಸತನದೊಂದಿಗೆ ಮೂಡಿಬರುತ್ತಿರುವ ಈ ಸೀಸನ್‌ನಲ್ಲಿ ಯಾರೆಲ್ಲ ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯೊಂದು ವೈರಲ್ ಆಗಿದೆ. ಇದರಲ್ಲಿ 18 ಮಂದಿಯ ಹೆಸರುಗಳು ಕೂಡ ಇದ್ದು, ಇವರೇ ಈ ಬಿಗ್‌ಬಾಸ್ ಸೀಸನ್‌ನ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿರುವವರೇ ಫೈನಲ್ ಆಗಿದ್ದು, ಇತ್ತೀಚೆಗೆ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಯಾರೆಲ್ಲರ ಹೆಸರಿದೆ ಗೊತ್ತಾ?
ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿರ್ತಾರೆ. ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫೇಮಸ್ ಆಗಿರುವವರು ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆ ಸೇರ್ತಾರೆ. ಈ ಬಾರಿಯೂ ಕಿರುತೆರೆ ಹಾಗೂ ಸಿನಿಮಾ ರಂಗದ ಹಲವರ ಹೆಸರು ಓಡಾಡುತ್ತಿದೆ. ವೈರಲ್ ಆಗಿರುವ ಪೋಸ್ಟ್‌ನಲ್ಲಿ 18 ಮಂದಿಯ ಹೆಸರು ಬಹಿರಂಗವಾಗಿದ್ದು, ಅವರ ಹೆಸರು ಹಾಗೂ ಹಿನ್ನೆಲೆ ಇಲ್ಲಿದೆ ನೋಡಿ.

ಸಾಗರ್ ಬಿಳಿಗೌಡ: ಸತ್ಯ ಸೀರಿಯಲ್‌ನಲ್ಲಿ ಅಮೂಲ್ ಬೇಬಿ ಕಾರ್ತಿಕ್ ಪಾತ್ರದ ಮೂಲಕ ಮನೆಮಾತಾಗಿದ್ದ ಸಾಗರ್ ಬಿಳಿಗೌಡ ಕಳೆದ ವರ್ಷವಷ್ಟೇ ನಟಿ ಸಿರಿ ರಾಜು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಬಾರಿ ಇವರು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.
ಸಂಜನಾ ಬುರ್ಲಿ: "ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ ಕೂಡ ಈ ಬಾರಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಹೋಗಲಿದ್ದಾರೆ. ಇವರ ಹೆಸರು ಹೆಚ್ಚಾಗಿ ಹರಿದಾಡುತ್ತಿದೆ.
ಸಮೀರ್ ಎಂಡಿ: ಧರ್ಮಸ್ಥಳ ಕೇಸ್ ಮೂಲಕ ಮನೆಮಾತಾಗಿರುವ ಯುಟ್ಯೂಬರ್ ಸಮೀರ್ ಎಂಡಿ ಈ ಸೀಸನ್‌ನ ಪ್ರಬಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ಪಟ್ಟಿಯಲ್ಲೂ ಸಮೀರ್ ಹೆಸರಿದೆ. ಯುಟ್ಯೂಬ್ ಮೂಲಕ ಸಮೀರ್ ಭಾರೀ ಫೇಮಸ್ ಮಾಡಿದ್ದಾರೆ.
ದಿವ್ಯಾ ವಸಂತ್: ಕನ್ನಡದ ಕಾಂಟ್ರವರ್ಸಿ ನಿರೂಪಕಿಯರಲ್ಲಿ ಒಬ್ಬರಾಗಿರುವ ದಿವ್ಯಾ ವಸಂತ್ ಈ ಸೀಸನ್‌ನ ಸ್ಪರ್ಧಿ ಎನ್ನಲಾಗುತ್ತಿದೆ. ಇವರ ಮೇಲೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಬ್ಲಾಕ್‌ಮೇಲ್ ಕೇಸ್‌ನಲ್ಲೂ ದಿವ್ಯಾ ಅವರ ಹೆಸರು ಕೇಳಿಬಂದಿತ್ತು. ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಫೇಮಸ್ ಕೂಡ ಆಗಿದ್ದರು.
ಗಗನ್ ಶ್ರೀನಿವಾಸ್: ಡಾ.ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಅವರ ಹೆಸರು ಪ್ರತಿ ಸೀಸನ್‌ನಲ್ಲಿ ಕೇಳಿಬರುತ್ತಿದೆ. ಆದರೆ ಈ ಹಿಂದೆ ಗಗನ್ ನಾನು ಶೋಗೆ ಹೋಗಲ್ಲ ಎಂದಿದ್ದರು. ಈ ಬಾರಿಯ ಪಟ್ಟಿಯಲ್ಲೂ ಅವರ ಹೆಸರು ಬಂದಿದ್ದು, ಈ ಸೀಸನ್‌ನಲ್ಲಿ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ.
ಶ್ವೇತಾ ಪ್ರಸಾದ್: ಕನ್ನಡ ಕಿರುತೆರೆಯಲ್ಲಿ "ರಾಧಾ ರಮಣ", "ಶ್ರೀರಸ್ತು ಶುಭಮಸ್ತು" ಸೀರಿಯಲ್‌ಗಳಲ್ಲಿ ನಟಿಸಿರುವ ನಟಿ ಶ್ವೇತಾ ಪ್ರಸಾದ್ ಅವರ ಹೆಸರು ಕೂಡ ಹರಿದಾಡುತ್ತಿದೆ. ಈ ಬಾರಿ ಇವರು ಬಿಗ್‌ಬಾಸ್‌ಗೆ ಹೋದರೆ ಗೆಲ್ಲುವುದು ಫಿಕ್ಸ್ ಎಂದೆಲ್ಲ ಚರ್ಚೆಗಳು ಶುರುವಾಗಿವೆ.
ಮೇಘಾ ಶೆಟ್ಟಿ: ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ನಟಿ ಮೇಘಾ ಶೆಟ್ಟಿ ಅವರ ಹೆಸರು ಕೂಡ ಪಟ್ಟಿಯಲ್ಲಿದೆ. ಇನ್‌ಸ್ಟಾಗ್ರಾಂ ಸ್ಟಾರ್ ವರುಣ್ ಆರಾಧ್ಯ, ಮಹಾನಟಿ, ಭರ್ಜರಿ ಬ್ಯಾಚುಲರ್ಸ್ ಸೀಸನ್-2 ಶೋಗಳಲ್ಲಿ ಮಿಂಚಿದ್ದ ಗಗನ ಭಾರಿ, ಅಗ್ನಿಸಾಕ್ಷಿ ಸೀರಿಯಲ್ ನಟ ವಿಜಯ್ ಸೂರ್ಯ, ಗಾಯಕ ಸುನಿಲ್, ಸರಿಗಮಪ ಜಾನಪದ ಗಾಯಕ ಬಾಳು ಬೆಳಗುಂದಿ, ಸ್ವಾತಿ, ಅರವಿಂದ ರಥನ್, ಪಾಯಲ್ ಚೆಂಗಪ್ಪ, ದೀಪಿಕಾ ಗೌಡ, ಧನುಷ್, ಅಮೃತಾ ರಾಮಮೂರ್ತಿ ಅವರ ಹೆಸರು ಈ ಪಟ್ಟಿಯಲ್ಲಿದೆ.












Click it and Unblock the Notifications