Bigg Boss Kannada 12: ಬಿಗ್‌ ಬಾಸ್‌ ಮನೆ ಸೇರಿದ ಸ್ಪರ್ಧಿಗಳು ಯಾರೆಲ್ಲ? ಅವರ ಹಿನ್ನೆಲೆ ಏನು?

ಬಿಗ್‌ಬಾಸ್‌ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅದ್ದೂರಿಯಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿದೆ. ಈ ಬಾರಿಯೂ ವಿಭಿನ್ನವಾದ ಸ್ಪರ್ಧಿಗಳ ಗುಂಪು ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದೆ. ಕಿಚ್ಚ ಸುದೀಪ್‌ ಎಂದಿನಂತೆ ಬಿಗ್‌ಬಾಸ್‌ ವೇದಿಕೆಗೆ ಬರಮಾಡಿಕೊಂಡು, ಅವರನ್ನು ಪರಿಚಯಿಸಿ, ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಸೀಸನ್‌ನಲ್ಲಿ ಅಂತಿಮವಾಗಿ ಯಾವೆಲ್ಲ ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ? ಅವರ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕಾಕ್ರೋಚ್‌ ಸುಧಿ: ಕನ್ನಡ ಚಿತ್ರರಂಗದ ಖಡಕ್‌ ವಿಲನ್‌ ಎನಿಸಿಕೊಂಡಿರುವ ಕಾಕ್ರೋಚ್‌ ಸುಧಿ ಈ ಸೀಸನ್‌ನ ಮೊದಲ ಸ್ಪರ್ಧಿ. ಸಲಗ, ಟಗರು, ಭೀಮ ಸಿನಿಮಾ ಖ್ಯಾತಿಯ ಕಾಕ್ರೋಚ್‌ ಸುಧಿಗೆ ಈಗಾಗಲೇ ಒಂದೆರಡು ಬಾರಿ ಆಫರ್‌ ಬಂದಿದ್ದು, ಕಾರಣಾಂತರಗಳಿಂದ ಹೋಗಿರಲಿಲ್ಲ. ಈ ಬಾರಿ ಕರೆದರೆ ಪಕ್ಕಾ ಹೋಗ್ತೀನಿ ಎಂದಿದ್ದರು ಸುಧಿ ಕೊನೆಗೂ ಮೊದಲ ಕಂಟೆಸ್ಟಂಟ್‌ ಆಗಿದ್ದಾರೆ.

bigg-boss-kannada-season-12-contestants-full-list-background-details

2. ನಟಿ ಕಾವ್ಯ ಶೈವ: ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿರುವ ನಟಿ ಕಾವ್ಯ ಶೈವ ಅವರು ಬಿಗ್‌ಬಾಸ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೆಂಡಸಂಪಿಗೆ ಸೀರಿಯಲ್‌ನಿಂದ ಗಮನ ಸೆಳೆದಿರುವ ಕಾವ್ಯ ಇತ್ತೀಚೆಗಷ್ಟೇ ತೆರೆಕಂಡ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದರು.

3. ಡಾಗ್‌ ಸತೀಶ್‌: ಶ್ವಾನಪ್ರೇಮಿಯಾಗಿ ಗುರುತಿಸಿಕೊಂಡಿರುವ ಡಾಗ್‌ ಸತೀಶ್‌ ಕೂಡ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. 100 ಕೋಟಿ ಬೆಲೆ ಬಾಳೋ ಡಾಗ್ ಓನರ್ ನಾನು ಎಂದು ಸತೀಶ್ ಹೇಳಿಕೊಂಡಿದ್ದು, ಡಿವೋರ್ಸ್‌ ಬಳಿಕ ಮಗನೊಂದಿಗೆ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.

4. ಗಿಲ್ಲಿ ನಟ: ಗಿಲ್ಲಿ ನಟ ಎಂದೇ ಫೇಮಸ್‌ ಆಗಿರುವ ಮಂಡ್ಯ ಮೂಲದ ನಟರಾಜ್ ಈ ಕಾಮಿಡಿ ಕಿಂಗ್‌ ಎನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಗಿಲ್ಲಿ ಡೈಲಾಗ್ ಹೇಳುತ್ತಾ ನಕ್ಕು ನಗಿಸುತ್ತಾರೆ. ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋಗಳಲ್ಲೂ ಗಿಲ್ಲಿ ಮಿಂಚಿದ್ದಾರೆ.

5. ಆಂಕರ್‌ ಜಾನ್ವಿ: ಕನ್ನಡ ಸುದ್ದಿವಾಹಿನಿಯ ನ್ಯೂಸ್‌ ಆಂಕರ್‌ ಆಗಿ ಗಮನ ಸೆಳೆದಿದ್ದ ಜಾನ್ವಿ ಈ ಸೀಸನ್‌ನ ಟಾಪ್‌ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಗಿಚ್ಚಿಗಿಲಿಗಿಲಿ, ನನ್ನಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋಗಳ ಮೂಲಕ ಜಾನ್ವಿ ಮಿಂಚಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿರುವ ಜಾಹ್ನವಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಡಿವೋರ್ಸ್‌ ಬಳಿಕ ಮಗನೊಂದಿಗೆ ಬದುಕು ನಡೆಸುತ್ತಿರುವ ಜಾನ್ವಿ ಈ ಸಲ ಬಿಗ್‌ಬಾಸ್‌ ಕಪ್‌ ಗೆದ್ದೇ ಗೆಲ್ತೀನಿ ಎನ್ನುವ ವಿಶ್ವಾಸದಲ್ಲಿದ್ದಾರೆ.

bigg-boss-kannada-season-12-contestants-full-list-background-details

6. ಧನುಷ್‌ ಗೌಡ: "ಗೀತಾ" ಸೀರಿಯಲ್‌ ನಟ ಧನುಷ್‌ ಗೌಡ ಕೂಡ ಬಿಗ್‌ಬಾಸ್‌ ಮನೆ ಸೇರಿದ್ದಾರೆ. ಚಾಕೊಲೇಟ್‌ ಬಾಯ್‌ ಆಗಿ ಗುರುತಿಸಿಕೊಂಡಿರುವ ಧನುಷ್‌ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕಿರುತೆರೆಯಲ್ಲಿ ಧನುಷ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದು, ಜೋಶ್‌ನಲ್ಲಿ ಬಿಗ್‌ಬಾಸ್‌ ಮನೆ ಸೇರಿದ್ದಾರೆ.

7. ಚಂದ್ರಪ್ರಭ: ಗಿಚ್ಚಿ ಗಿಲಿಗಿಲಿ ಹಾಗೂ ಮಜಾಭಾರತ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ಹಾಸ್ಯ ಕಲಾವಿದ ಚಂದ್ರಪ್ರಭ ಈ ಬಾರಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಕಿರುತೆರೆಗೆ ಬರುವ ಮುನ್ನ ಚಂದ್ರಪ್ರಭ ಗಾರೆ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವಕಾಶಗಳಿಲ್ಲದೆ ಮತ್ತೆ ಅವರು ಗಾರೆ ಕೆಲಸಕ್ಕೆ ಮರಳಿದ್ದರು.

8. ಮಂಜು ಭಾಷಿಣಿ: ಖ್ಯಾತ ಧಾರಾವಾಹಿ ಸಿಲ್ಲಿ ಲಲ್ಲಿ ಮೂಲಕ ಮನೆಮಾತಾಗಿದ್ದ ನಟಿ ಮಂಜು ಭಾಷಿಣಿ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಪ್ರವೇಶಿಸಿದ್ದಾರೆ. ಭೂಮಿ ತಾಯಿ ಸಿನಿಮಾ ಮೂಲಕ ಜನಪ್ರಿಯರಾದ ಅವರು ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು.

9. ರಾಶಿಕಾ ಶೆಟ್ಟಿ: ಯೋಗರಾಜ್ ಭಟ್ ನಿರ್ದೇಶನದ "ಮನದ ಕಡಲು" ಸಿನಿಮಾದ ನಟಿ ರಾಶಿಕಾ ಶೆಟ್ಟಿ ಕೂಡ ಈ ಸೀಸನ್‌ನ ಸ್ಪರ್ಧಿಯಾಗಿದ್ದಾರೆ.

10. ಅಭಿಷೇಕ್‌ ಶ್ರೀಕಾಂತ್: ಕಿರುತೆರೆ ನಟ ಅಭಿಷೇಕ್ ಶ್ರೀಕಾಂತ್ ಅವರು ಶಾಂತಂ ಪಾಪಂ, ಯಜಮಾನಿ, ಲಕ್ಷಣ ಮತ್ತು ವಧು ಸೀರಿಯಲ್‌ಗಳಲ್ಲಿ ನಟಿಸಿರುವ ಅಭಿಷೇಕ್‌ ಈ ಬಾರಿ ಸ್ಪರ್ಧಿಯಾಗಿದ್ದಾರೆ.

bigg-boss-kannada-season-12-contestants-full-list-background-details

11. ಮಲ್ಲಮ್ಮ: ಉತ್ತರ ಕರ್ನಾಟಕದ ಪ್ರತಿಭೆಯಾಗಿರುವ ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಣ್ಣ ಗ್ರಾಮದವರು. ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಅವರು ತಮ್ಮದೇ ಆದ ಮಲ್ಲಮ್ಮ ಟಾಕ್ಸ್‌ ಹೆಸರಿನ ಇನ್​ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ 1.69 ಲಕ್ಷ ಫಾಲೋವರ್ಸ್‌ ಹಾಗು ಯೂಟ್ಯೂಬ್ ಚಾನೆಲ್​ಗೆ 16 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.

12. ಅಶ್ವಿನಿ ಎಸ್.ಎನ್: ಮುದ್ದುಲಕ್ಷ್ಮಿ ಸೀರಿಯಲ್‌ನ ನಾಯಕಿ ಲಕ್ಷ್ಮಿ ಆಲಿಯಾಸ್ ಅಶ್ವಿನಿ ಕೂಡ ಈ ಸೀಸನ್‌ ಸ್ಪರ್ಧಿಯಾಗಿದ್ದಾರೆ. ಅರಮನೆ ನಗರಿಯಿಂದ ಬಿಗ್ ಬಾಸ್ ಅರಮನೆಗೆ ಕಾಲಿಟ್ಟ ಚಂದದ ಬೆಡಗಿ ಅಶ್ವಿನಿ ಸೂರ್ಯವಂಶ ಸೀರಿಯಲ್‌ ಮೂಲಕ ಕಿರುತೆರೆಗೆ ಮರಳಿದ್ದರು.

13. ಧ್ರುವಂತ್: ಮುದ್ದುಲಕ್ಷ್ಮಿ ಸೀರಿಯಲ್‌ ನಟ‌ ಧ್ರುವಂತ್ ಬಿಗ್‌ಬಾಸ್‌ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಲೈಂಗಿಕ ಕಿರುಕುಳ ಆರೋಪದ ವಿವಾದದಿಂದ ನಟ ಸುದ್ದಿಯಾಗಿದ್ದರು. ಬಿಗ್‌ಬಾಸ್‌ಗೆ ಬಂದಿರುವ ಅವರು ಹೊರಗೆ ವಿವಾದ ಮ್ಯಾನೇಜ್ ಮಾಡಬಹುದು. ಒಳಗಿನ ವಿವಾದ ಮ್ಯಾನೇಜ್ ಮಾಡೋದು ಕಷ್ಟ ಎಂದಿದ್ದಾರೆ.

14. ರಕ್ಷಿತಾ ಶೆಟ್ಟಿ: ಸೋಷಿಯಲ್‌ ಮೀಡಿಯಾ ಸ್ಟಾರ್‌ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ ಕೂಡ ದೊಡ್ಮನೆ ಸೇರಿದ್ದಾರೆ. ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್‌ ಮಾಡಿ ಮಾತನಾಡಿಯೇ ರಕ್ಷಿತಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದಾರೆ.

bigg-boss-kannada-season-12-contestants-full-list-background-details

15. ಕರಿಬಸಪ್ಪ: ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗೆದ್ದಿರುವ ಬಾಡಿಬಿಲ್ಡರ್‌ ಕರಿಬಸಪ್ಪ ಬಿಗ್ ಬಾಸ್‌ ಮನೆ ಆಟ ಆಡಲು ಬಂದಿದ್ದಾರೆ. ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಮೋಟಿವೇಷನ್‌ ಮಾತುಗಳನ್ನ ಹೇಳುತ್ತಾ ಕರಿಬಸಪ್ಪ ಗಮನ ಸೆಳೆದಿದ್ದಾರೆ.

16. ಮಾಳು ನಿಪನಾಳ: ನಾ ಡ್ರೈವರಾ, ನೀ ನನ್ನ ಲವ್ವರಾ ಹಾಡಿನ ಖ್ಯಾತಿಯ ಫೇಮಸ್‌ ಆಗಿರುವ ಉತ್ತರ ಕರ್ನಾಟಕದ ಪ್ರತಿಭೆ ಮಾಳು ಯುಟ್ಯೂಬ್‌ನಲ್ಲಿ ದೊಡ್ಡ ಸ್ಟಾರ್‌. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದವರು.

17. ಸ್ಪಂದನಾ ಸೋಮಣ್ಣ: ಕರಿಮಣಿ ಧಾರಾವಾಹಿ ಖ್ಯಾತಿಯ ಸ್ಪಂದನಾ ಕೂಡ ಬಿಗ್‌ಬಾಸ್‌ ಮನೆಯ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ನಾನು ನನ್ನ ಕನಸು ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದು ತೆಲುಗು ಸೀರಿಯಲ್‌ಗಳಲ್ಲೂ ಮಿಂಚಿದ್ದಾರೆ.

18. ಅಶ್ವಿನಿ ಗೌಡ: ಸಿನಿಮಾ ಹಾಗು ಕಿರುತೆರೆ ನಟಿ. ಕರ್ನಾಟಕ ರಕ್ಷಣಾ ವೇದಿಕೆಯ ಸಕ್ರಿಯ ಕನ್ನಡಪರ ಹೋರಾಟಗಾರ್ತಿ. 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಿನಿ, ರಾಜಾಹುಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

19. RJ ಅಮಿತ್: ಮಾತಿನಲ್ಲೇ ಮೋಡಿ ಮಾಡುವ ಬೆಂಗಳೂರಿನ ಪ್ರತಿಭೆ RJ ಅಮಿತ್ ಕೂಡ ಬಿಗ್‌ಬಾಸ್‌ನ ಕೊನೆಯ ಕಂಟೆಸ್ಟೆಂಟ್‌ ಆಗಿ ಲೇಟೆಸ್ಟ್‌ ಎಂಟ್ರಿ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+