ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್ ಆದ ಸುದ್ದಿ ಕೇಳಿ ಪಟಾಕಿ... Bigg Boss

ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ಗೆದ್ದು ಬೀಗಿರುವ ಸುದ್ದಿ ಇದೀಗ ಹಳ್ಳಿಯಿಂದ ದಿಲ್ಲಿ ತನಕ ಹಬ್ಬಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡ ಕರ್ನಾಟಕ ಮಾತ್ರವಲ್ಲದೆ ಇಡೀ ಇಂಡಿಯಾದಲ್ಲಿ ಜನ ನೋಡುತ್ತಾರೆ. ಹೀಗೆ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಕನ್ನಡಿಗರು ಏನು ಮಾಡಿದ್ರು ಗೊತ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 11 ಭಾರಿ ಕುತೂಹಲ ಕೆರಳಿಸಿತ್ತು, ಯಾಕಂದ್ರೆ ಇಡೀ ಇಂಡಿಯಾ ನೋಡುವ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಟ್ರೋಫಿ ಗೆಲ್ಲುವುದು ಯಾರು?? ಅನ್ನೋ ಪ್ರಶ್ನೆ ಕೋಟಿ ಕೋಟಿ ಕನ್ನಡಿಗರನ್ನು ಕಾಡುತ್ತಿತ್ತು. ಇದೀಗ ಅವರ ಪ್ರಶ್ನೆಗೆ ಉತ್ತರ ಸಿಕ್ಕೇ ಬಿಟ್ಟಿದೆ. ಕನ್ನಡಿಗರು ಇಷ್ಟಪಟ್ಟು, ಕನ್ನಡಿಗರ ಹೃದಯ ಗೆದ್ದಿದ್ದ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್... ಅನ್ನೋ ಘೋಷಣೆ ಹೊರಗೆ ಬೀಳುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತ್ತು.

Bigg Boss Kannada Season 11 Won By Hanumantha And This Is How Karnataka Celebrate It

ಪಟಾಕಿ ಸಿಡಿಸಿ ಸಂಭ್ರಮಾಚರಣೆ!

ಹೌದು, ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ನರ್ ಆದ ಸುದ್ದಿ ಕೇಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಕನ್ನಡಿಗರು. ಅಲ್ಲದೆ ಹನುಮಂತ ಈ ರೀತಿ ಗೆದ್ದು ಬೀಗಿದ್ದು ಅವರ ಹಳ್ಳಿಯ ಜನರಿಗೆ ಕೂಡ ತುಂಬಾ ದೊಡ್ಡ ಖುಷಿ ನೀಡಿದೆ. ಬಡತನ & ಕಷ್ಟ ನೋಡಿಕೊಂಡೇ ಬೆಳೆದುಬಂದ ಉತ್ತರ ಕರ್ನಾಟಕದ ಹುಲಿ ಹನುಮಂತ ಇದೀಗ ಬಿಗ್‌ಬಾಸ್ ಗೆದ್ದು 50 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರ ಕೊನೆಯ ಸೀಸನ್...

ಯೆಸ್, ಬಿಗ್‌ಬಾಸ್ ಕನ್ನಡ ಭಾರತದ ಅತಿದೊಡ್ಡ ರಿಯಾಲಿಟಿ ಶೋಗಳ ಪೈಕಿ ಒಂದಾಗಿದೆ. ಹಾಗೇ ದೇಶದ ವಿವಿಧ ರಾಜ್ಯಗಳಲ್ಲಿ ಕೂಡ ಬಿಗ್‌ಬಾಸ್ ಕನ್ನಡ ನೋಡುತ್ತಾರೆ ಜನ. ಹೀಗೆ, ಬಿಗ್‌ಬಾಸ್ ಕನ್ನಡ ಜಗತ್ತಿನಾದ್ಯಂತ ಕನ್ನಡದ ಕಂಪು ಹರಡುತ್ತಿದೆ. ಆದರೆ ದಿಢೀರ್ ಅಂತಾ ಕಿಚ್ಚ ಸುದೀಪ್ ಅವರು ನಿವೃತ್ತಿ ಪಡೆದು ಹೋಗುತ್ತಿರುವ ಹಿನ್ನೆಲೆ ಮುಂದೆ ಯಾರು ಆಂಕರ್ ಆಗ್ತಾರೆ?

ಕಿಚ್ಚ ಸುದೀಪ್ ಅವರ ನಂತರ ಯಾರು ಬಿಗ್‌ಬಾಸ್ ಕನ್ನಡ ನಿರೂಪಣೆ ಮಾಡ್ತಾರೆ? ಅಂತಾ ಕಾಯುತ್ತಿದ್ದರು ಕೋಟ್ಯಂತರ ಕನ್ನಡಿಗರು. ಇದರ ಜತೆಗೆ ಸುದೀಪ್ ಅವರ ನಿರೂಪಣೆ ಮೂಲಕ ಮೂಡಿಬಂದ ಕೊನೇ ಸೀಸನ್ ವಿನ್ನರ್ ಯಾರು? ಅನ್ನೋ ಪ್ರಶ್ನೆ ಕೂಡ ಕಾಡ್ತಿತ್ತು. ಹನುಮಂತ ಗೆದ್ದ ಸುದ್ದಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಇದರ ಜೊತೆಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಕನ್ನಡಿಗರು ಸಂಭ್ರಮಿಸಿದ್ದಾರೆ.

ವಾಟ್ಸಾಪ್ ಸ್ಟೇಟಸ್ ಫುಲ್ ಹನುಮಂತ!

ಮತ್ತೊಂದು ಕಡೆ ಉತ್ತರ ಕರ್ನಾಟಕದ ಹುಲಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11 ವಿನ್ ಅಗಿದ್ದೇ ತಡ ಕನ್ನಡಿಗರ ವಾಟ್ಸಾಪ್ ಸ್ಟೇಟಸ್ ಪೂರ್ತಿ ಹನುಮಂತ ಹವಾ ಜೋರಾಗಿ ಇತ್ತು. ಅಲ್ಲದೆ ಹನುಮಂತುಗೆ ಎಲ್ಲರೂ ಸಖತ್ ಆಗಿ ವಿಶ್ ಕೂಡ ಮಾಡಿದರು. ಈ ಮೂಲಕ ಅತ್ತ ಪಟಾಕಿ ಹೊಡೆದು ಸಂಭ್ರಮಿಸಿದ ಜನಗಳ ಜೊತೆಗೆ, ಇತ್ತ ಮನೆಯಲ್ಲೇ ಕೂತು ಖುಷಿಯಿಂದ ಹನುಮಂತ ಗೆದ್ದ ಸುದ್ದಿ ಹಂಚಿಕೊಂಡ ಜನರು ಕೂಡ ಇದ್ದರು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+