ಅಕ್ಕ-ಬಾವನ ಜೊತೆ ಹೊಡೆದಾಡಿಕೊಂಡ ಬಿಗ್ ಬಾಸ್ ರಂಜಿತ್: ವಿಡಿಯೋ ವೈರಲ್
ಬಿಗ್‌ಬಾಸ್ ಕನ್ನಡ ಸೀಸನ್ 11 ವೇಳೆ ಲಾಯರ್ ಜದೀಶ್ ಅವರ ಜೊತೆ ಜಗಳವಾಡಿಕೊಂಡು ಹೊರಬಿದ್ದಿದ್ದ ಕಿರುತೆರೆ ನಟ ರಂಜಿತ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಅಕ್ಕ-ಬಾವಗೆ ಜೀವಬೆದರಿಕೆ ಆರೋಪದಡಿಯಲ್ಲಿ ಅವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಲಾಟೆಯ ವಿಡಿಯೋ ಸಹ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಹಾಗಾದ್ರೆ, ಅದರಲ್ಲಿ ಏನಿದೆ ಎಂದು ಇಲ್ಲಿ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ನಡುವೆ ಚಿಕ್ಕಪುಟ್ಟ ಗಲಾಟೆ ಪ್ರಕರಣಗಳು ಸಹ ಕೋರ್ಟ್ ಮೆಟ್ಟಿಲೇರುವ ಘಟನೆಗಳು ನಡೆದಿವೆ. ಈ ನಡುವೆಯೇ ಬಿಗ್ ಬಾಸ್ ಮನೆಯಲ್ಲಿ ಕೆಲ ದಿನಗಳ ಕಾಲ ಮಿಂಚಿದ್ದ ಕಿರುತೆರೆ ನಟ ರಂಜಿತ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಹಾಗಾದ್ರೆ, ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಅಕ್ಕ-ಬಾವಗೆ ಜೀವಬೆದರಿಕೆ ಆರೋಪದ ಮೇಲೆ ಕಿರುತೆರೆ ನಟ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾವ ಜಗದೀಶ್ ಅವರು ರಂಜಿತ್ ಮೇಲೆ ದೂರು ದಾಖಲಿಸಿದ್ದಾರೆ. 2018 ರಿಂದ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಜಗದೀಶ್ ಅವರ ಕುಟುಂಬ ವಾಸ ಇದೆ. 2025ರಿಂದ ಇದೇ ಫ್ಲ್ಯಾಟ್‌ನಲ್ಲಿ ಅಕ್ಕ-ಭಾವನ ಜೊತೆ ರಂಜಿತ್ ವಾಸ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫ್ಲಾಟ್ ವಿಚಾರಕ್ಕೆ ಬಿಗ್ ಬಾಸ್ ರಂಜಿತ್, ರಂಜಿತ್ ಪತ್ನಿ ಹಾಗೂ ರಂಜಿತ್ ಅಕ್ಕನ ನಡುವೆ ಗಲಾಟೆಯ ನಡೆದಿದೆ. ಇನ್ನು ಮನೆ ನಂದೇ ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾವ ಜಗದೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಸ್‌ಸಿಆರ್ ದಾಖಲಾಗಿದ್ದು, ಮನೆಯಲ್ಲಿ ಒಬ್ಬರಿಗೊಬ್ಬರು ಪರಸ್ಪರ ಹೊದಾಡಿಕೊಂಡಿದ್ದು, ಈ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಅಕ್ಕ-ತಮ್ಮನ ಜಗಳಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ತಂದೆ ಫ್ಲ್ಯಾಟ್‌ನಲ್ಲಿ ಇಬ್ಬರಿಗೂ ಪಾಲು ಬೇಕೆಂದು ಪರಸ್ಪರ ದೂರು ದಾಖಲು ಮಾಡಿದ್ದಾರೆ. ದೂರು ಪಡೆದು ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ. ಫ್ಲಾಟ್ ವಿಚಾರ ಆದ್ದರಿಂದ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ.
ಈ ಹಿಂದೆ ಕುಟುಂಬ ಪೂರ್ತಿ ಒಂದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿದ್ದಾರೆ. ಅಲ್ಲದೆ, ಇದನ್ನು ಪರಿಹರಿಸುವಂತೆ ಕೇಳಿದ್ದಾರೆ. ಈ ವೇಳೆ ಪೊಲೀಸರು ಇಬ್ಬರಿಗೂ ಬುದ್ದಿಮಾತನ್ನು ಹೇಳಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಮೃತಹಳ್ಳಿಯ ಸಾಯಿ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ಅಲ್ಲಿ ಕುಟುಂಬ ವಾಸವಿದೆ. ಇದರ ಮೊದಲ ಮಡಿಯ ಫ್ಲ್ಯಾಟ್‌ನಲ್ಲಿ ರಂಜಿತ್ ಹಾಗೂ ಪತ್ನಿ ವಾಸ ಇದೆ. ಇಲ್ಲಿಯೇ ಮೂರನೇ ಮಹಡಿಯ ಫ್ಲಾಟ್‌ನಲ್ಲಿ ರಂಜಿತ್ ಅಕ್ಕ ರಶ್ಮಿ ಅವರು ವಾಸ ಇದ್ದಾರೆ.
ರಂಜಿತ್ ಮದುವೆಗೂ ಮುಂಚೆಯೇ ಮೊದಲನೇ ಮಹಡಿಯ ಫ್ಲ್ಯಾಟ್‌ನಲ್ಲಿ ರಂಜಿತ್ ಹಾಗೂ ಅವರ ಅಕ್ಕ ವಾಸ ಇದ್ದರು. ಮದುವೆ ಬಳಿಕ ರಂಜಿತ್ 3ನೇ ಮಹಡಿ ಫ್ಲಾಟ್‌ಗೆ ರಂಜಿತ್ ಸೋದರಿ ರಶ್ಮಿ ಶಿಫ್ಟ್ ಆಗಿದ್ದರು. ಇದೀಗ ರಂಜಿತ್ ವಾಸ ಇರುವ ಮೊದಲ ಮಹಡಿಯ ಫ್ಲ್ಯಾಟ್‌ನಲ್ಲಿ ನನಗೂ ಪಾಲು ಬೇಕೆಂದು ಗಲಾಟೆ ಮಾಡಿಕೊಂಡಿದ್ದಾರೆ. ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ರಂಜಿತ್ ಹಾಗೂ ಅಕ್ಕ ರಶ್ಮಿ ಅವರಿಂದ ದೂರು-ಪ್ರತಿದೂರು ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications