Bigg Boss: ಅದೇ ಜಾಗದಲ್ಲಿ ಜಿಪ್..ಬಟನ್..ಬಾಳೆಎಲೆ: ಬಿಗ್‌ಬಾಸ್ ಕಾಸ್ಟ್ಯೂಮ್ ಬಗ್ಗೆ ಸುದೀಪ್ ಹೇಳಿದ್ದೇನು?
ಬಿಗ್‌ಬಾಸ್ ಕನ್ನಡ ಸೀಸನ್ 11 ಹೊಸ ಸೀಸನ್ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ಸ್ವರ್ಗ ನರಕ ಪರಿಕಲ್ಪನೆಯ ಪ್ರೋಮೋ ನೋಡುಗರ ಕುತೂಹಲ ಹೆಚ್ಚಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೇಲೆ ಪ್ರೇಕ್ಷಕರಿಗೂ ಕೂಡ ಅತಿಯಾದ ನಿರೀಕ್ಷೆ ಶುರುವಾಗಿದ್ದು, ಯಾರೆಲ್ಲ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕೌತುಕ ಹೆಚ್ಚಾಗಿದೆ. ಮುಖ್ಯವಾಗಿ ನಿರೂಪಕರು ಬದಲಾವಣೆ ಎನ್ನುವ ಗಾಸಿಪ್‌ಗೆ ಈಗಾಗಲೇ ಬ್ರೇಕ್ ಬಿದ್ದಿದ್ದು, ಈ ಬಾರಿಯೂ ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಈಗಾಗಲೇ ಸುದೀಪ್ ಎಂಟ್ರಿಯ ಪ್ರೋಮೋ ಎಲ್ಲಡೆ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬಿಗ್ ಬಾಸ್ ಪ್ರತಿ ಸೀಜನ್‌ನ್ ಅಲ್ಲೂ ಕಿಚ್ಚ ಸುದೀಪ್ ಕಾಸ್ಟ್ಯೂಮ್ ಮೇಲೆ ಎಲ್ಲರ ಕಣ್ಣು ಇರುತ್ತದೆ. ಈ ಬಾರಿ ಸುದೀಪ್ ಕಾಸ್ಟ್ಯೂಮ್ ಡಿಸೈನ್ ಹೇಗಿರಲಿದೆ..? ಡಿಸೈನರ್ ಬಳಿ ನಿಮ್ಮ ಬೇಡಿಕೆ ಏನು ಎನ್ನುವ ಪ್ರಶ್ನೆಗೆ ನಟ ಕಿಚ್ಚ ಸುದೀಪ್, ಬಾಳೆಎಲೆ ಎಂದು ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ಬಳಿಕ ಮಾತು ಮುಂದುವರಿಸಿದ ಸುದೀಪ್, ಈ ಬಾರಿಯ ಕಾಸ್ಟ್ಯೂಮ್ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಎಂದಿದ್ದಾರೆ.
ಆ ವಾರದ ಶನಿವಾರ ಬಂದಾಗ ವಾರ ಪೂರ್ತಿ ಜಗಳ ಇರಲಿ ಏನೇ ಇರಲಿ ಸ್ಪರ್ಧಿಗಳು ನಮಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಕುಳಿತಿರುತ್ತಾರೆ. ಅವರು ನಮಗೋಸ್ಕರ ಅಷ್ಟು ಸಮಯ ಕೊಟ್ಟು ರೆಡಿಯಾಗಿರುತ್ತಾರೆ. ಹುಡುಗರು ಕೂಡ ನಮಗಾಗಿ ರೆಡಿಯಾಗಿರುತ್ತಾರೆ. ಹೀಗಾಗಿ ಅವರಿಗಾಗಿ ನಾನೂ ಏನಾದರೂ ಮಾಡಬೇಕು ಎಂದುಕೊಳ್ಳುತ್ತೇನೆ ಎಂದರು.

ಕಾಸ್ಟ್ಯೂಮ್ ಅಂತಾ ಬಂದಾಗ ನಾವು ಅದಕ್ಕಾಗಿ ಸ್ವಲ್ಪ ಸಮಯ ಕೊಡುತ್ತೇವೆ. ಇವತ್ತಿಗೆ ಏನು ಟ್ರೆಂಡ್ ಆಗುತ್ತದೆ ಅಂತಾ ಯೋಚನೆ ಮಾಡುತ್ತೇವೆ. ಏನೂ ಹೊಸದಾಗಿ ಮಾಡಬಹುದು ಅಂತಾ ಯೋಚನೆ ಮಾಡಿ ಮಾಡುತ್ತೇವೆ. ಡಿಸೈನರ್‌ಗಳು ನಾನು ಚೆನ್ನಾಗಿ ಕಾಣಲು ಹೆಚ್ಚು ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.
ಈ ಬಾರಿ ಕಾಸ್ಟ್ಯೂಮ್ ಬಗ್ಗೆ ನನಗೂ ಕೂಡ ಕುತೂಹಲ ಇದೆ. ನಿಜ ಹೇಳಬೇಕು ಅಂದರೆ ನಮಗೆ ಆಯ್ಕೆಗಳು ಕಮ್ಮಿ ಇರುತ್ತದೆ. ಮಹಿಳೆಯರ ತರ ಹೆಚ್ಚಿನ ಆಯ್ಕೆ ಇರುವುದಿಲ್ಲ. ನಮ್ಮ ಹತ್ತಿರ ಏನೂ ಇಲ್ಲ. ಜಿಪ್ ಅದೇ ಜಾಗದಲ್ಲಿ, ಬಟನ್ ಅದೇ ಜಾಗದಲ್ಲಿ, ಎಲ್ಲವೂ ಅಲ್ಲಲ್ಲೇ ಇರುತ್ತದೆ. ನಮ್ಮ ಬಟ್ಟೆಯಲ್ಲಿ ಏನೂ ಬದಲಾವಣೆ ಆಗಲ್ಲ. ಅಂತಾ ತಮಾಷೆ ಮಾಡಿರುವ ನಟ ಕಿಚ್ಚ ಸುದೀಪ್, ಇಂತಹ ಕಡಿಮೆ ಆಯ್ಕೆಯಲ್ಲೂ ನಮ್ಮ ಬಟ್ಟೆ ಬಗ್ಗೆ ಜನರಿಗೆ ಆಕರ್ಷಣೆ ಬರುತ್ತಿದೆ ಎಂದರೆ ನನ್ನ ಡಿಸೈನರ್‌ಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.












Click it and Unblock the Notifications