Sonu Gowda: ಮದುವೆ, ಸಿನಿಮಾ ಬೇಡ, ರಾಜಕೀಯಕ್ಕೆ ಬರ್ತಿನಿ ಎಂದ ಸೋನು ಶ್ರೀನಿವಾಸ್ ಗೌಡ!
ಬೆಂಗಳೂರು, ಮೇ. 07: ಟಿಕ್ ಟಾಕ್ ಮೂಲಕ ಸದ್ದು ಮಾಡಿ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ನಾಡಿಗೆ ಪರಿಚಯವಾದವರು ಸೋನು ಗೌಡ. ಬಳಿಕ ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ.
ತಮ್ಮ ಜೈಲು ಅನುಭವಗಳನ್ನು ಹೇಳಿಕೊಂಡಿದ್ದ ಅವರು, ಈಗ ಜನರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದರಾರೆ. ಇದರಲ್ಲಿ ಅವರ ಮದುವೆ ಪ್ಲ್ಯಾನ್‌ಗಳು, ಮುಂದೆ ಏನಾಗಬೇಕು ಎಂದುಕೊಂಡಿದ್ದಾರೆ..? ತಮ್ಮ ಎಜುಕೇಶನ್ ಏನು...? ತಾವು ಮಾಡುವ ಕೆಲಸವೇನು ಎಂಬ ಹಲವು ಕುತೂಹಲಕರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿ ಬದ ಬಳಿಕ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಸೈಲೆಂಟ್ ಆಗಿದ್ದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಲ್ಲಿನ ಕಹಿ ಅನುಭವಗಳನ್ನು ಬಿಟ್ಟುಕೊಟ್ಟಿದ್ದರು. ಇದಾದ ನಂತರ ಈಗ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದೂ ಹೇಳಿ ಶಾಕ್ ಕೊಟ್ಟಿದ್ದಾರೆ.
ರಾಜಕೀಯಕ್ಕೆ ಬರ್ತಾರಂತೆ ಸೋನು ಗೌಡ!
ತಮ್ಮ ಫಾಲೋವರ್ಸ್ ಒಬ್ಬರ ಪ್ರಶ್ನೆಗೆ ಉತ್ತರ ನೀಡುವಾಗ ನಟಿ ಸೋನು ಗೌಡ ತಾವು ರಾಜಕೀಯಕ್ಕೆ ಬರುವ ಪ್ಲ್ಯಾನ್ ಮಾಡುತ್ತಿರುವುದಘಾಇ ತಿಳಿಸಿದ್ದಾರೆ. ಬಾಗಲಕೋಟೆಯ ಸಾಧನ ಎಂಬುವವರು ಮೂವತ್ತು ವರ್ಷದೊಳಗೆ ನಿಮ್ಮ ಗುರಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸೋನು ಗೌಡ ಉತ್ತರಿಸಿದ್ದಾರೆ.
" ಈ ಮೊದಲ ನನಗೆ ಸಿನಿಮಾದಲ್ಲಿ ಹೀರೋಯಿನ್ ಆಗಬೇಕು ಅನ್ನೋ ಅಸೆಯಿತ್ತು. ಈ ಚಿತ್ರರಂಗದಲ್ಲಿ ಇರಬೇಕು. ಒಳ್ಳೋಳ್ಳೆ ಕೆಲಸ ಮಾಡಬೇಕು ಅಂತ ಆಸೆಯಿತ್ತು. ಆದರೆ, ಯಾಕೋ ಗೊತ್ತಿಲ್ಲ ಎರಡು ವರ್ಷಗಳಿಂದ ಈ ಫಿಲ್ಡ್ ಕೂಡ ಇಷ್ಟ ಆಗ್ತಾಯಿಲ್ಲ. ಅದಕ್ಕೆ ಮುಂದೆ ರಾಜಕೀಯದಲ್ಲಿ ಕಾಣಿಸಿಕೊಳ್ಳಬೇಕು ಅಂದುಕೊಳ್ತಿದ್ದಿನಿ. ಆದರೆ, ಇದು ಪ್ಲ್ಯಾನ್ ಅಷ್ಟೇ ನಮ್ಮದು.. ದೇವರ ಆಟದ ಮುಂದೆ ನಮ್ಮದು ಏನು ನಡೆಯಲ್ಲ" ಎಂದು ಹೇಳಿದ್ದಾರೆ.

ಮುಂದೆ ಇನ್ನೊಬ್ಬರು ನಿಮ್ಮ ಮದುವೆ ಯಾವಾಗ... ಮದುವೆ ಅದರೆ ಲವ್ ಮ್ಯಾರೆಜ್‌ಆ...? ಅಥವಾ ಆರೆಂಜ್ ಮ್ಯಾರೆಜ್ ..? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸೋನು, ತುಂಬಾ ಜನ ಇದೇ ಪ್ರಶ್ನೆ ಕೇಳಿದ್ದಾರೆ. ನಂಗೆ ಗೊತ್ತಿಲ್ಲ. ಆದರೆ, ನನಗೆ ಮದುವೆ ಅಂದ್ರೆ ಇಷ್ಟವಿಲ್ಲ. ಮದುವೆ ಬಗ್ಗೆ ಯಾವುದೇ ಪ್ಲ್ಯಾನ್ ಇಲ್ಲ. ಮದುವೆ ಅನ್ನೋ ಆಸೆನೇ ಇಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ" ಎಂದು ಹೇಳಿದ್ದಾರೆ.
ಮತ್ತೊಬ್ಬರು ಸೋನು ನಿಮ್ಮ ಡ್ರೀಮ್ ಬಾಯ್ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು , ಮದುವೆ ಎಂದರೆನೇ ಇಷ್ಟ ಇಲ್ಲ ನನಗೆ ಇನ್ನು ಡ್ರೀಮ್ ಬಾಯ್ ಇರುತ್ತಾರಾ ಎಂದು ನಕ್ಕಿದ್ದಾರೆ. ಜೊತೆಗೆ ಈ ಮೊದಲು ನಂಗೂ ಆಸೆಯಿತ್ತು. ಕಪ್ಪಗಾದರೂ ಇರಲಿ... ಬೆಳ್ಳಗಾದರೂ ಇರಲಿ.. ಒಬ್ಬರ ನಂಬಿಕಾರ್ಹ ವ್ಯಕ್ತಿ ಇರಬೇಕು. ನಂಬಿಕೆ ಮತ್ತು ಗೌರವ ಇದ್ದರೆ ಸಾಕು. ಒಂದು ಸಂಬಂಧ ಗಟ್ಟಿಯಾಗಿರುತ್ತದೆ. ಹಣ, ಬಣ್ಣ ಯಾವುದು ಮುಖ್ಯವಲ್ಲ ಎಂದು ಸೋನು ಗೌಡ ಹೇಳಿದ್ದಾರೆ.












Click it and Unblock the Notifications