ಹುಡುಗ್ರೆಲ್ಲ ಕಳ್ಳ ನನ್ ಮಕ್ಳು ಎಂದ ಸೋನು‌ ಶ್ರೀನಿವಾಸ್‌ ಗೌಡ: ನೀನೇನ್‌ ಸಾಚಾನಾ ಅಂತ ನೆಟ್ಟಿಗರಿಂದ ಕ್ಲಾಸ್‌

ಕನ್ನಡ ಬಿಗ್‌ಬಾಸ್ ಒಟಿಟಿ ಖ್ಯಾತಿಯ ಸೋಶಿಯಲ್ ಮೀಡಿಯಾ ತಾರೆ ಸೋನು ಶ್ರೀನಿವಾಸ್ ಗೌಡ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಇತ್ತೀಚೆಗಷ್ಟೇ ಐಟಂ ಸಾಂಗ್ ಒಂದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸೋನು, ಸಂದರ್ಶನವೊಂದರಲ್ಲಿ ಹುಡುಗರ ಬಗ್ಗೆ ಆಡಿರುವ ಮಾತುಗಳು ಈಗ ಭಾರೀ ಟ್ರೋಲ್ ಹಾಗೂ ಹುಡುಗರ ಕೆಂಗಣ್ಣಿಗೆ ಗುರಿಯಾಗಿದೆ.

ಸಂದರ್ಶನದಲ್ಲಿ ನಡೆದಿದ್ದೇನು?

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಸೋನು ಗೌಡ ಅವರಿಗೆ ನಿರೂಪಕರು, "ರಿಲೇಷನ್‌ಶಿಪ್‌ನಲ್ಲಿ ಮೋಸ ಮಾಡುವವರಿಗೆ ನೀವು ಏನು ಹೇಳಲು ಬಯಸುತ್ತೀರಿ?" ಎಂಬ ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಸೋನು, ಎದುರಿಗಿದ್ದ ಆಂಕರ್‌ನನ್ನೂ ಸೇರಿಸಿ, "ನೀವೂ ಸೇರಿದಂತೆ ಹುಡುಗರೆಲ್ಲರೂ ಕಳ್ ನನ್ನ ಮಕ್ಳು" ಎಂದು ನೇರವಾಗಿ ನಿಂದಿಸಿದ್ದಾರೆ.

Sonu Srinivas Gowda

ಸೋನು ಅವರ ಈ ಅಸಭ್ಯ ಹೇಳಿಕೆಗೆ ಅಲ್ಲೇ ಆಕ್ಷೇಪ ವ್ಯಕ್ತಪಡಿಸಿದ ನಿರೂಪಕ, "ನಾನು ನಿಮಗೆ ಗೌರವ ಕೊಟ್ಟೇ ಮಾತನಾಡುತ್ತಿದ್ದೇನೆ. ಹೀಗಾಗಿ ಪದಬಳಕೆ ಮಾಡುವಾಗ ಯೋಚನೆ ಮಾಡಿ, ನೋಡ್ಕೊಂಡು ಮಾತಾಡಿ" ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಗಂಡುಮಕ್ಕಳು ಸೋನು ಗೌಡಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಕಾಲಿಗೆ ಬಿದ್ದಾದ್ರೂ ಡಿಬಾಸ್‌ನ ಕರ್ಕೊಂಡು ಬರ್ತಿದ್ದೆ: ಸೋನು ಶ್ರೀನಿವಾಸ್ ಗೌಡ
ಕಾಲಿಗೆ ಬಿದ್ದಾದ್ರೂ ಡಿಬಾಸ್‌ನ ಕರ್ಕೊಂಡು ಬರ್ತಿದ್ದೆ: ಸೋನು ಶ್ರೀನಿವಾಸ್ ಗೌಡ

ಸೋನು ಗೌಡ ಅವರ ಇಡೀ ಪುರುಷ ಸಮುದಾಯವನ್ನು ನಿಂದಿಸುವ ಮನಸ್ಥಿತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಇವಳನ್ನು ಹೆಣ್ಣು ಎಂದು ಕರೆದವರು ಯಾರು? ಇಡೀ ಪುರುಷ ಸಮುದಾಯಕ್ಕೆ ಅವಮಾನ ಮಾಡುವಂತೆ ಮಾತನಾಡಿದ್ದಾಳೆ. ಇದೇ ರೀತಿ ಗಂಡುಮಕ್ಕಳು ಹೆಣ್ಣುಮಕ್ಕಳಿಗೆ ಏನಾದರೂ ಒಂದು ಟೈಟಲ್ ಕೊಟ್ಟರೆ, ಇಡೀ ಹೆಣ್ಣು ಸಮುದಾಯವೇ ತಲೆತಗ್ಗಿಸುವಂತೆ ರಂಪಾಟ ಮಾಡುತ್ತಾರೆ. ಆದರೆ ಸಮಾಜದಲ್ಲಿರುವ ಪುರುಷರು ತಾಯಿ, ಸಹೋದರಿ, ಹೆಂಡತಿಯಂತಹ ಪವಿತ್ರ ಒಡನಾಟಗಳನ್ನು ಹೊಂದಿರುತ್ತಾರೆ. ಹಾಗಾಗಿಯೇ ಇವಳಂತೆ ಅಸಭ್ಯವಾಗಿ ಮಾತನಾಡುವ ಮುನ್ನ ನೂರು ಬಾರಿ ಯೋಚಿಸುತ್ತಾರೆ. ಇಡೀ ಸಮಾಜಕ್ಕೆ ಗೊತ್ತು ನೀನೆಷ್ಟು ಸಾಚಾ ಅಂತ" ಎಂದು ಒಬ್ಬರು ಕಾಮೆಂಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿ, "ಅವಳು ಹೇಳುತ್ತಿರುವುದು ಒಂದು ಕಡೆ ಸರಿಯಾಗಿಯೇ ಇದೆ. ಏಕೆಂದರೆ ಇಂತಹವರನ್ನು ಬೆಳೆಸುತ್ತಿರುವುದು ಇದೇ ಹುಡುಗರು ಅಲ್ವಾ? ಅದಕ್ಕೇ ಇವಳಿಗೆ ಇಷ್ಟೊಂದು ದುರಂಕಾರ. ಇಂತಹ ವ್ಯಕ್ತಿಗಳನ್ನು ವೈರಲ್ ಮಾಡುವುದರಿಂದ ಸಮಾಜಕ್ಕೆ ಏನು ಒಳ್ಳೆಯದಾಗುತ್ತಿದೆ ಎಂದು ಗೊತ್ತಿಲ್ಲ. ಈಗಲಾದರೂ ಇವಳ ಅಸಲಿ ಮುಖ ನೋಡಿ ಖುಷಿ ಪಡಿ" ಎಂದು ವ್ಯಂಗ್ಯವಾಡಿದ್ದಾರೆ. ಪ್ರಚಾರದ ಅಮಲಿನಲ್ಲಿ ಇಡೀ ಪುರುಷ ವರ್ಗವನ್ನೇ ಹಗುರವಾಗಿ ಜರೆದ ಸೋನು ಶ್ರೀನಿವಾಸ್ ಗೌಡ ಅವರ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾಮೆಂಟ್‌ ಮಾಡುವವರಿಗೆ ಸೋನು ವಾರ್ನಿಂಗ್‌

ಸೋನು ಶ್ರೀನಿವಾಸ್ ಗೌಡ ಹುಡುಗರ ವಿರುದ್ಧ ನೀಡಿದ್ದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಈಗ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳುವ ಮೂಲಕ ಟ್ರೋಲ್‌ ಮಾಡುವವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ತಾವು ಮಾಡಿದ ಕಾಮೆಂಟ್‌ ಅನ್ನು ಸಮರ್ಥಿಸಿಕೊಂಡಿರುವ ಸೋನು ಗೌಡ, ಕಾನೂನು ಕ್ರಮದ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

"ತಮಾಷೆಗೆ ಮಾತಾಡಿದ್ದನ್ನೇ ಇಟ್ಟುಕೊಂಡು ಇಷ್ಟೊಂದು ಅಸಭ್ಯವಾಗಿ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ" ಎಂದು ಸೋನು ಗೌಡ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ವಿರುದ್ಧ ಜಾಲತಾಣಗಳಲ್ಲಿ ನಿಂದನೆ ಮಾಡುತ್ತಿರುವವರ ವಿರುದ್ಧ ತಿರುಗಿಬಿದ್ದಿರುವ ಅವರು, "ನನ್ನ ಬಗ್ಗೆ ಯಾರೆಲ್ಲಾ ತಪ್ಪಾಗಿ ಮಾತನಾಡಿದ್ದೀರೋ, ಅವರೆಲ್ಲರ ಮೇಲೂ ಈಗಾಗಲೇ ಕಂಪ್ಲೇಂಟ್ ನೀಡಿ ಎಫ್‌ಐಆರ್ (FIR) ಮಾಡಿಸುತ್ತಿದ್ದೇನೆ. ಇದು ನಿಮ್ಮ ಗಮನದಲ್ಲಿ ಇರಲಿ ಅಂತಲೇ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದೇನೆ" ಎಂದು ಖಡಕ್ ಆಗಿ ಹೇಳಿದ್ದಾರೆ. ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+