Rajath: ರೀಲ್ಸ್‌ ಮಾಡಿ ಜೈಲು ಸೇರಿದ ಕನ್ನಡದ ಬಿಗ್‌ ಬಾಸ್‌ ಸ್ಪರ್ಧಿಗಳು: ತಪ್ಪದ ಸಂಕಷ್ಟ

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಮುಗಿದ ಬಳಿಕ ಬೇರೆ ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿದ್ದ ರಜತ್‌ ಕಿಶನ್‌ಗೆ ಸಂಕಷ್ಟ ಎದುರಾಗಿದೆ. ಜೊತೆಗೆ ಬಿಗ್‌ ಬಾಸ್‌ ಕನ್ನಡ ಸೀಜನ್‌ 10ರಲ್ಲಿ ಆನೆ ಎನಿಸಿಕೊಂಡಿದ್ದ ವಿನಯ್ ಗೌಡಗೂ ಸಂಕಷ್ಟ ಎದುರಾಗಿದೆ. ರೀಲ್ಸ್‌ವೊಂದಕ್ಕೆ ಸಂಬಂಧಿಸಿದಂತೆ ಸದ್ಯ ಇಬ್ಬರನ್ನೂ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೌದು ಕನ್ನಡ ಬಿಗ್‌ ಬಾಸ್‌ ಸ್ಪರ್ಧಿಗಳಾದ ರಜತ್‌ ಕಿಶನ್‌ ಹಾಗೂ ವಿನಯ್ ಗೌಡ ಅರೆಸ್ಟ್‌ ಆಗಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ. ಇಂದು ಇಬ್ಬರನ್ನೂ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಯಿದ್ದು, ಜಾಮೀನಾ? ಅಥವಾ ಜೈಲಾ? ಎನ್ನುವುದನ್ನು ಕಾದು ನೋಡಬೇಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟ ರೀಲ್ಸ್‌, ಇಬ್ಬರು ಸೆಲೆಬ್ರೆಟಿಗಳನ್ನು ಜೈಲುಪಾಲು ಮಾಡಿದ್ದು, ಇನ್ನಾದರೂ ನಟ-ನಟಿಯರು, ರಿಯಾಲಿಟಿ ಶೋ ಸ್ಪರ್ಧಿಗಳು, ರೀಲ್ಸ್‌ ಸ್ಟಾರ್‌ಗಳು ವಿಡಿಯೋ ಮಾಡುವ ಮುನ್ನ ಎಚ್ಚರ ವಹಿಸಬೇಕಾಗಿದೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಆಗಿದ್ದೇನು? ಇಲ್ಲಿದೆ ವಿವರ.

Bigg Boss Kannada Contestants Rajath And Vinay Gowda Arrested for Illegal Video Incident

ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಮುಗಿದ ಬಳಿಕ ಆರಂಭವಾದ ರಿಯಾಲಿಟಿ ಶೋನಲ್ಲಿ ರಜತ್‌ ಕಿಶನ್‌ ಹಾಗೂ ವಿನಯ್ ಗೌಡ ಇಬ್ಬರೂ ಸ್ಪರ್ಧಿಗಳಾಗಿದ್ದರು. ಈ ರಿಯಾಲಿಟಿ ಶೋನ ಒಂದು ಸಂಚಿಕೆಗಾಗಿ ರಜತ್‌ ಕಿಶನ್‌ ನಟ ದರ್ಶನ್ ಪಾತ್ರ ಹಾಗೂ ವಿನಯ್ ಗೌಡ ಪುಷ್ಪಾ ಪಾತ್ರವನ್ನು ನಿರ್ವಹಿಸಿದ್ದರು. ಈ ಗೆಟಪ್‌ನಲ್ಲಿದ್ದ ಇಬ್ಬರು ಸ್ಟಾರ್ಸ್‌ಗಳು ವಿಡಿಯೋ ಮಾಡಿದ್ದರು.

ವಿನಯ್‌ ಗೌಡ ಹಾಗೂ ರಜತ್ ಕಿಶನ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ಮೆಜೆಸ್ಟಿಕ್ ಹಾಡಿಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ದರ್ಶನ್‌ ಎಲ್ಲಾ ಸಿನಿಮಾ ಹೆಸರನ್ನು ರಜತ್ ಬಟ್ಟೆ ಮೇಲೆ ಹಾಕಿಸಿಕೊಂಡಿದ್ದರು. ವಿನಯ್‌ ಗೌಡ ಕೂಡ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದರು. ವಿಡಿಯೋದಲ್ಲಿ ಇಬ್ಬರು ಕೈಯಲ್ಲಿ ಲಾಂಗ್‌ ಹಿಡಿದು ಪೋಸ್‌ ಕೊಟ್ಟಿದ್ದರು. ಈ ವಿಡಿಯೋವನ್ನು ರಜತ್ ಕಿಶನ್ ಇನ್ಸ್ಟಾಗ್ರಾಮ್‌ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿತ್ತು.

ಯಾವಾಗ ಈ ವಿಡಿಯೋ ಇಬ್ಬರ ನಿರೀಕ್ಷೆ ಮೀರಿ ವೈರಲ್‌ ಆಯ್ತೋ, ಆಗ ಇಬ್ಬರಿಗೂ ಸಮಯ ಕೆಟ್ಟಿದೆ. ಸಾರ್ವಜನಿಕ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ವಿಡಿಯೋ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ವಿನಯ್‌ ಗೌಡ ಹಾಗೂ ರಜತ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

Bigg Boss Kannada Contestants Rajath And Vinay Gowda Arrested for Illegal Video Incident

ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಪ್ರಕರಣ ದಾಖಲಾದ ಕಾರಣ ಪೊಲೀಸರು ಇಬ್ಬರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಮೊದಲು ವಿನಯ್‌ ಗೌಡ ಸ್ವತಃ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಕ್ಷಮೆ ಕೋರಿ ಪತ್ರ ಬರೆದಿದ್ದರು. ಆದರೆ ರಜತ್ ಕಿಶನ್ ಶೂಟಿಂಗ್ನಲ್ಲಿದ್ದ ಕಾರಣ ಪತ್ನಿ ಅಕ್ಷಿತಾ ಪೊಲೀಸರ ಮುಂದೆ ಹಾಜರಾಗಿ ಪತಿ ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ್ದರಂತೆ. ಕೊನೆಗೆ ಇಬ್ಬರೂ ಜೊತೆಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೊನೆಗೆ ಬಂಧಿಸಿದ್ದಾರೆ. ಸದ್ಯ ಒಂದು ದಿನ ಪೊಲೀಸ್‌ ಠಾಣೆಯಲ್ಲಿ ಕಳೆದಿರುವ ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+